ಬಯಲು
ಬರಹ
ಹುಡುಗ-ಹುಡುಗಿ
ಬಯಲಲ್ಲಿ ಓಡಿದರು
ಓಡಿದರು, ಓಡಿದರು
ಓಡಿ ಓಡಿ ನಿಂತರು
ಎದುಸಿರು ಬಿಡುತ್ತ
ಕೈಯ್ಯಿಂದ ಮಣ್ಣ ಹೆಕ್ಕಿದರು
ಹೆಕ್ಕಿದರು, ಹೆಕ್ಕಿದರು
ಹೆಕ್ಕಿ, ಹೆಕ್ಕಿ ಸೋತರು
ಕಾದರು ಅಲ್ಲಾಡದೆ
ಹೆಕ್ಕಿದ ಗುಂಡಿಯಿಂದ
ಉಕ್ಕಿತು ನೀರು
ಉಕ್ಕಿತು, ಉಕ್ಕಿತು
ಉಕ್ಕಿ, ಉಕ್ಕಿ ತಿಳಿಯಾಯಿತು
ತಿಳಿಯಾದ ನೀರಲ್ಲಿ
ಕಂಡಿತು ನಕ್ಷತ್ರ
ಉಲ್ಕೆ, ಚಂದ್ರಮ
ಅದರ ಹಿಂದಿನ ಕತ್ತಲೂ
ತಲೆಯೆತ್ತಿ ನೋಡಲು
ಅಲ್ಲಿ ಏನಿಲ್ಲ
ಎನೂ ಇಲ್ಲ, ಏನೇನೂ ಇಲ್ಲ
ಕತ್ತಲೂ ಅಲ್ಲಿಲ್ಲ
ನಿರ್ವಾತ ಜಗತ್ತು
ಜಗತ್ತೆಲ್ಲ ನಿರ್ವಾತ
ಕುಸಿದರು, ಕುಳಿತರು
ಇರುವುದು ಜಗತ್ತೆ? ನಿರ್ವಾತವೆ?