ಬರಬಾರದೇ ಬದುಕೇ...?
ಕವನ
ನೆನಪಿನಾಳದಲಿ ಹುದುಗಿಡಲು ನೆನಪಾಗಿ ಬರುತಿರುವೆ...
ಬದುಕಂಚಲಿ ನಿಲ್ಲಿಸಿ ನೀ, ಮತ್ತೆಲ್ಲಿ ಹೋಗಿರುವೆ...
ರೆಪ್ಪೆಯೊಳಗೆ ಕುಳಿತಿಲ್ಲಿ ಹನಿಯು ಕದ ಬಡಿಯುತಿದೆ...
ಕಲ್ಪನೆಯು ಜಾರಿಹುದು.. ಒಲವೋ ಕರಗಿದ ಬೆಣ್ಣೆ ಬಿಸಿಯುಸಿರ ಕರದಲ್ಲಿ...
ಯಾರೋ ಕರೆದಂತಾಗಿ ನಿಂತೆ, ಮನಸೋ ಒಂಟಿ ಕನಸ ಸಂತೆ..
ಏನುಂಟು ನನಗಿಲ್ಲಿ...
ಬರಬಾರದೇ ನನ್ನ ಬದುಕೇ...?