ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ, |
ರಿಲೇಟಿವಿಟಿ/ಸಾಪೇಕ್ಷ ಸಿದ್ಧಾಂತನ್ನು ಪ್ರತಿಪಾದಿಸಿದ ಐನ್ಸ್ಟೀನ್ ಎಂಬ ಮಹಾನ್ ವಿಜ್ಞಾನಿಯು ಒಂದು ಸಾರಿ ಗಾಂಧಿಯ ಕುರಿತು-ಒಮ್ಮೆ ಇತಿಹಾಸವನ್ನು ತಿರುವಿ ಹಾಕಿದರೆ ಗಾಂಧಿ ಎಂಬ ಒಬ್ಬ ಧೀಮಂತ, ಮಹಾನ್ ವ್ಯಕ್ತಿ ನಡೆದ ಹೋದ ದಾರಿಯೇ ಅಚ್ಚರಿಯನ್ನು ಮೂಡಿಸುತ್ತದೆ ಎಂದಿದ್ದಾರೆ. ಒಬ್ಬ ಜಗತ್ಪ್ರಸಿದ್ದ ವಿಜ್ಞಾನಿಯೇ ಹೀಗೆ ಹೇಳಿರುವಾಗ ಗಾಂಧಿ ನಿಜವಾಗಿಯೂ ಏನನ್ನು ಸಾಧಿಸಿದ್ದಾರೆ? ಹಾಗೂ ಐನ್ಸ್ಟೀನ್ ಹೇಳಿದ್ದರಲ್ಲಿ ಅಂತಹ ಮಹತ್ವದ ವಿಷಯ ಏನಿದೆ? ಎಂಬ ಪ್ರಶ್ನೆಗಳನ್ನು ನಾವೆಲ್ಲರೂ ಕೇಳಿಕೊಳ್ಳಲೇಬೇಕು. ಹಾಗೆ ನೋಡುವುದಾದರೆ ಇಂದು ನಮಗೆ ಒಪ್ಪಿತವಾಗಿರುವ ರಾಜಕೀಯ ವಿಚಾರಗಳಿಗೆ ವಿರುದ್ಧವಾದ ರಾಜಕೀಯ ವಿಚಾರವು ಗಾಂಧಿಯವರದ್ದಾಗಿದೆ. ಅಹಿಂಸಾ ತತ್ವವೇ ಗಾಂಧಿಯ ಪ್ರಮುಖ ಅಸ್ತ್ರವಾಗಿರುವುದರಿಂದ ಅವರ ವಿಚಾರಗಳನ್ನು ನಾವು ಇಂದು ಪುನರಾವಲೋಕಿಸಬೇಕಾಗಿದೆ. ಅದು ಜಾಗತಿಕ ರಾಜಕಾರಣವಾಗಲೀ ಅಥವಾ ರಾಷ್ಟ್ರದ ರಾಜಕಾರಣವಾಗಲೀ, ಹೆಚ್ಚು ವೈಚಾರಿಕವಾಗಿ ರಾಜಕೀಯದ ಕುರಿತು ಆಲೋಚಿಸುತ್ತಿದ್ದ ಗಾಂಧಿಯ ವಿಚಾರಧಾರೆ ಇಂದು ಬಹಳ ಪ್ರಸ್ತುತವೆನಿಸುತ್ತದೆ.