ಬರವಣಿಗೆ ಎಂದರೆ......

ಬರೆಯುತ್ತಾ ಕಲಿಯುತ್ತಾರೆ,
ಕಲಿಯುತ್ತಾ ಬರೆಯುತ್ತಾರೆ...
ಹವ್ಯಾಸಕ್ಕಾಗಿ ಬರೆಯುತ್ತಾರೆ,
ಹಣಕ್ಕಾಗಿ ಬರೆಯುತ್ತಾರೆ,
ಖ್ಯಾತಿಗಾಗಿ ಬರೆಯುತ್ತಾರೆ,
ಪ್ರಶಸ್ತಿಗಾಗಿ ಬರೆಯುತ್ತಾರೆ,
ನೋವಿಗಾಗಿ ಬರೆಯುತ್ತಾರೆ,
ನಲಿವಿಗಾಗಿ ಬರೆಯುತ್ತಾರೆ,
ಪ್ರೀತಿಗಾಗಿ ಬರೆಯುತ್ತಾರೆ,
ವಿರಹಕ್ಕಾಗಿ ಬರೆಯುತ್ತಾರೆ,
ದ್ವೇಷಕ್ಕಾಗಿ ಬರೆಯುತ್ತಾರೆ,
ಅಸೂಯೆಗಾಗಿ ಬರೆಯುತ್ತಾರೆ,
ವಿಷ ಕಕ್ಕಲು ಬರೆಯುತ್ತಾರೆ,
ಸುಧಾರಣೆಗಾಗಿ ಬರೆಯುತ್ತಾರೆ,
ತೆವಲಿಗಾಗಿಯೂ ಬರೆಯುತ್ತಾರೆ,
ಬದಲಾಣೆಗಾಗಿಯೂ ಬರೆಯುತ್ತಾರೆ,
ಓಲೈಕೆಗಾಗಿ ಬರೆಯುತ್ತಾರೆ,
ಹೋರಾಟಕ್ಕಾಗಿ ಬರೆಯುತ್ತಾರೆ,
ಕ್ರಾಂತಿಗಾಗಿ ಬರೆಯುತ್ತಾರೆ,
ನಾಶಕ್ಕಾಗಿ ಬರೆಯುತ್ತಾರೆ,
ಖುಷಿಗಾಗಿ ಬರೆಯುತ್ತಾರೆ,
ಹಿಂಸಿಸಲು ಬರೆಯುತ್ತಾರೆ,
ಆತ್ಮಾವಲೋಕನಕ್ಕಾಗಿ ಬರೆಯುತ್ತಾರೆ,
ಕೆಲಸವಿಲ್ಲದೆಯೂ ಬರೆಯುತ್ತಾರೆ,
ವಿಗ್ರಹ ಭಂಜನೆಗಾಗಿಯೂ ಬರೆಯುತ್ತಾರೆ,
ಅರಿವು ಮೂಡಿಸಲು ಬರೆಯುತ್ತಾರೆ,
ಮೌಢ್ಯ ಬಿತ್ತಲು ಬರೆಯುತ್ತಾರೆ,
ಸಂದೇಶಗಳಿಗಾಗಿ ಬರೆಯುತ್ತಾರೆ,
ಭಾವನೆಗಳಿಗಾಗಿ ಬರೆಯುತ್ತಾರೆ,
ನೆನಪುಗಳಿಗಾಗಿ ಬರೆಯುತ್ತಾರೆ,
ಸಮಯ ಕೊಲ್ಲಲು ಬರೆಯುತ್ತಾರೆ,
ಬುದ್ದಿ ಪ್ರದರ್ಶಿಸಲು ಬರೆಯುತ್ತಾರೆ,
ಹೊಟ್ಟೆಪಾಡಿಗಾಗಿ ಬರೆಯುತ್ತಾರೆ,
ನಿರೀಕ್ಷೆಯಿಂದ ಬರೆಯುತ್ತಾರೆ,
ನಿರ್ಲಿಪ್ತತೆಯಿಂದ ಬರೆಯುತ್ತಾರೆ,
ಕುತೂಹಲಕ್ಕಾಗಿ ಬರೆಯುತ್ತಾರೆ,
ಹೀಗೆ ಬರೆಯುತ್ತಲೇ ಇದ್ದಾರೆ.....
ಅಕ್ಷರಗಳ ಉಗಮದೊಂದಿಗೆ,
ಭಾಷೆಯ ಬೆಳವಣಿಗೆಯೊಂದಿಗೆ ,
ಎಲ್ಲವೂ ಸಾಹಿತ್ಯವೇ.......
ಅವರವರ ಭಾವಕ್ಕೆ......
ನಾನು, ನೀವು, ಅವರು, ಇವರು, ಎಲ್ಲರೂ ಬರೆಯುತ್ತಲೇ ಇದ್ದೇವೆ,
ಕಾರಣಗಳು - ಉದ್ದೇಶಗಳು - ಪ್ರಕಾರಗಳು - ವಿಷಯಗಳು - ಭಾವನೆಗಳು ಮಾತ್ರ ವಿಭಿನ್ನ.
ಬರೆಯುತ್ತಲೇ ಇರೋಣ...
ಭಾವ ಬರಿದಾಗುವವರೆಗೂ,
ಮನಸ್ಸು ಹಗುರಾಗುವವರೆಗೂ,
ಬೆರಳು ನಿಸ್ತೇಜಿತವಾಗುವವರೆಗೂ,
ಕಾಲನ ಕರೆ ಬರುವವರೆಗೂ,......
- ವಿವೇಕಾನಂದ ಎಚ್. ಕೆ. ಬೆಂಗಳೂರು