ಬಸವಣ್ಣನವರು ಅಂದು ಕೊಂಡ ಸಮಾಜ
ಬಸವಣ್ಣನವರು ಅಂದು ಕೊಂಡ ಸಮಾಜ
ಕಾಯಕಯೋಗಿ ಬಸವಣ್ಣನವರು ಕಟ್ಟಬಯಸಿದ್ದು ಸರ್ವಶೋಷಣೆಗಳಿಂದಲೂ ಮುಕ್ತವಾದ, ಸ್ವತಂತ್ರ್ಯ ಸಮಾನತೆ ಸೌಹಾರ್ದಗಳ ಅಡಿಗಲ್ಲಿನ ಮೇಲೆ ನಿಂತ, ಸವರ್ೊದಯ ನಿಷ್ಠವಾದ ಒಂದು ಆದರ್ಶ ಸಮಾಜವನ್ನು ಅವರು ಈ ನೆಲದ ಮೇಲೆ ನಡೆದಾಡಿ ಸುಮಾರು ಎಂಟುನೂರು ವರ್ಷಗಳು ಆಗಿಹೋದವು. ಅವರು ಕಲ್ಪಿಸಿಕೊಂಡು ಅಂದು ಕೊಂಡ ಸಮಾಜ ಇಂದಿಗೂ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದಿಲ್ಲವೆಂಬುದನ್ನು ಗಮನಿಸಿದಾಗ, ಅಷ್ಟು ಹಿಂದೆಯೇ ಅವರು ಕಂಡ ಕನಸು ಮತ್ತು ಅದನ್ನು ನನಸು ಮಾಡಲು ನಡೆಸಿದ ಹೋರಾಟ ಎಷ್ಟು ದೊಡ್ಡ ವೆಂಬುವುದು ಅರಿವಾಗದಿರದು. ಸಮತಾವಾದ, ಸಮಾಜವಾದ, ಪ್ರಜಾಪ್ರಭುತ್ವ ಮುಂತಾದವು ಈ ಯುಗದ ಮೌಲ್ಯಗಳೆಂಬುದು ಎಲ್ಲರುಗೂ ಗೊತ್ತು. ಆದರೆ 12ನೆಯ ಶತಮಾನದಲ್ಲಿ ಬಸವಣ್ಣನವರು ಈ ಮೌಲ್ಯಗಳ ಸಾಕ್ಷಾತ್ಕಾರಕ್ಕಾಗಿ ಸತತ ಶ್ರಮಿಸಿದರೆಂಬುದನ್ನು ನಾವು ಹೇಗೆ ಮರೆಯಬಹುದು? ಆ ಶ್ರಮ ಶಾಶ್ವತವಾಗಿ ಸಾರ್ಥಕವಾಗಲಿಲ್ಲವೆಂಬ ಮಾತು ಬೇರೆ. ಎಲ್ಲ ಮಹಾಪುರುಷರಪಾಡೊ ಅಷ್ಟೇತಾನೆ.
ಬಸವಣ್ಣನವರ ಕನಸಿನ ಸಮಾಜ ಧರ್ಮದ ತಳಹದಿಯ ಮೇಲೆ ರೂಪು ಗೊಂಡದ್ದು ಎಂಬುದನ್ನು ಮುಖ್ಯವಾಗಿ ಲಕ್ಷಿಸಬೇಕು. ಆದರೆ ಧರ್ಮದ ಹೆಸರಿನಲ್ಲಿ ನಡೆಯುವ ಅನೇಕ ಅನಾಹುತಗಳಿಗೆ, ಅನಾಚಾರಗಳಿಗೆ, ಅನ್ಯಾಯ ಸುಲಿಗೆ ಶೋಷಣೆಗಳಿಗೆ ಅದರಲ್ಲಿ ಅವಕಾಶವಿಲ್ಲ. ಅಂಥ ಅನಿಷ್ಟಗಳ ಬುಡಕ್ಕೇ ಕೊಡಲಿ ಪೆಟ್ಟು ಹಾಕುವ ಜ್ವಲಂತ ವೈಚಾರಿಕ ಪ್ರವೃತ್ತಿಯನ್ನು ಬಸವಣ್ಣನವರಲ್ಲಿ ಕಾಣುತ್ತೇವೆ.
ಸಾಮಾನ್ಯ ಜನತೆಯನ್ನು ಉದ್ಧಾರೋನ್ಮುಖವಾಗಿಸಬೇಕಾದರೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವಿಷಯಗಳನ್ನು ತಿಳಿಸಬೇಕು ಎಂಬುದನ್ನು ಕಂಡು ಕೊಂಡು, ಆ ದಿಶೆಯಲ್ಲಿ ಕೆಲಸ ಮಾಡಿದ್ದುವಚನಕಾರರ ಅದ್ಭತ ಸಾಧನೆ. ಜನಭಾಷೆಯ ಮಾಧ್ಯಮವೇ ಸವರ್ೊದಯದ ಮೂಲತತ್ವ, ಕೀಲಿ ಕೈ. ಈ ದೃಷ್ಟಿಯಿಂದ ಕನ್ನಡ ಮಾಧ್ಯಮ ಬಸವಾದಿ ಶರಣರ ಕಾಲದಲ್ಲೆ ಪ್ರಚರವಾಗಿ, ಸಮಾಜ ಪರಿಣಮಿಸಿದ್ದನ್ನು ನೋಡುತ್ತೇವೆ. ಸಂಸ್ಕೃತ ಭಾಷೆಯಲ್ಲಿ ನಿಕ್ಷಪ್ತವಾಗಿ ಜನಸಾಮಾನ್ಯರಿಗೆ ಅಗಮ್ಯವಾಗಿದ್ದ ಧರ್ಮ ರಹಸ್ಯವನ್ನು ತಿಳಿಯಾದ ಅಚ್ಚ ಕನ್ನಡದಲ್ಲಿ ಅವರಿಗೆ ತಿಳಿಸಿಕೊಟ್ಟರು. ಬಸವಣ್ಣನವರು ಧರ್ಮವನ್ನು ಕನ್ನಡಿಸಿ ಹೇಳಿದ್ದು ಮಾತ್ರವಲ್ಲ, ಅದನ್ನು ಸಹಜ ಶುದ್ಧರೂಪದಲ್ಲಿ ಅನಾವರಣ ಮಾಡಿದ ಕೀತರ್ಿಯೂ ಅವರಿಗೆಸಲ್ಲಬೇಕು. ಧರ್ಮವೆಂದರೆ ಅಗ್ರಾಹ್ಯ್ವಾದ ಅನನುಸರಿಣೀಯವಾದ ಜಟಿಲ ಜಾಲವೂ ಅಲ್ಲ; ಒಂದು ವರ್ಗದ ಸೂತ್ತೂ ಅಲ್ಲ. ಅದು ಎಲ್ಲರ ಆಸ್ತಿಯಾಗಬೇಕು, ಎಲ್ಲರ ಸುಖಕ್ಕೂ ಅಭ್ಯುದಯಕ್ಕೂ ಕಾರಣವಾಗಬೇಕು ಎಂಬುದು ಬಸವಣ್ಣನವರ ನಿಲುವು. ಅದನ್ನವರು ಅಪ್ರತಿಹವಾದ ರೀತಿಯಲ್ಲಿ ಮುಂದೊತ್ತಿದರು.
ಬಸವಣ್ಣನವರು ಹಿಂದೂ ಧರ್ಮದ ಚೌಕಟ್ಟಿನೊಳಗಿದ್ದುಕೊಂಡೇ ಅದನ್ನು ಶುದ್ಧೀಕರಿಸುವ, ತನ್ಮೂಲಕ ಸಮಾಜವನ್ನು ಮೇಲೆತ್ತುವ ಮಹಾಕಾರ್ಯದಲ್ಲಿ ಉದ್ಯುಕ್ತರಾದರು. ಅವರ ಕಾಲದಲ್ಲಿ ಸಾಮಾನ್ಯ ಜನ ಅ????ನ ಮೌಢ್ಯ ಶೋಷಣೆಗಳಿಗೆ ಪಕ್ಕಾಗಿ ಉದ್ಧಾರ ಕಾಣದೆ ಕತ್ತಲಲ್ಲಿ ತೊಳಲಾಡುತ್ತಿದ್ದರು. ಬಸವಣ್ಣನವರು ಈ ಶೋಚನೀಯ ಪರಿಸ್ಥಿತಿಯನ್ನು ತಪ್ಪಿಸಲು ಜೀವನ ಪರ್ಯಂತ ಹೆಣಗಿದರು. ಧರ್ಮವನ್ನು ಅವರು ಕರ್ಮ ಕಾಂಡದಿಂದ ಪ್ರತ್ಯೇಕಿಸಿ, ಅದರ ನೈಜವಾದ ತಿರುಳನ್ನು ಜನತೆಯ ಮುಂದಿರಿಸಿದರು. ಶಾಸ್ತ್ರಗಳನ್ನು ಹಿಂದಿಕ್ಕಿ, ಆಷರ್ೆಯವಾದ ವೇದೋಪನಿಷತ್ತುಗಳ ಶ್ರೇಯಸ್ಕರವಾದ ಸಾರವನ್ನು ಅವರು ಪರಿಗ್ರಹಿಸಿದರು. ಪುಷ್ಟಿದಾಯಕವಾದ ನಿತ್ಯಾಂಶಗಳನ್ನು ಹೀರಿಕೊಂಡು, ಬಾಹ್ಯವೂ ಬರಡೂ ಆದುದನ್ನೆಲ್ಲ ತೂರಿಬಿಟ್ಟರು. ಇದರಿಂದ ಸಮಾಜದಲ್ಲಿ ಅಪೂರ್ವ ಜಾಗೃತಿಯುಂಟಾಯಿತು; ಸಾಮಾನ್ಯ ಜನರ ಜಾಡ್ಯ ಅ????ನಗಳು ತೊಲಗಿ, ಸವರ್ೊದಯಕ್ಕೆ ಶಿವಪಥ ತೆರೆದುಕೊಂಡಿತು.
ಎಲ್ಲರಿಗೂ ನಿಲುಕುವಂತೆ ಸರಳ ಸುಲಭವಾದ, ಮನಕ್ಕೆ ನಾಟುವಂತಹ ಮಾತುಗಳಲ್ಲಿ ಧರ್ಮಬೋಧೆ ಮಾಡಿದ್ದರಿಂದ-ಧರ್ಮವನ್ನು ಮನೆ ಮಾತು ಮಾಡಿಕೊಟ್ಟುದರಿಂದ- ಸಮಾಜದಲ್ಲಿ ಧಾಮರ್ಿಕ ಸಮಾನತೆಗೆ ಅವಕಾಶವಾಯಿತು. ಅಂತೆಯೇ ಸಾಮಾಜಿಕ ಸಮಾನತೆಯ ಸ್ಥಾಪನೆಗೂ ಬಸವಣ್ಣನವರು ಉಗ್ರವಾಗಿ ಹೋರಾಟ ಹೂಡಿದರು. ವರ್ಣವ್ಯವಸ್ಥೆ, ಜಾತಿಪದ್ಧತಿ ಹಿಂದೂ ಧರ್ಮ ಬೆಳೆಸಿಕೊಂಡು ಬಂದ ಒಂದು ಕರಾಳ ಪೀಡೆ ಘೋರಶಾಪ. ಇದರ ಶನಿಮುಷ್ಠಿಯಿಂದ ಭಾರತೀಯ ಸಮಾಜ ಇನ್ನೂ ಮುಕ್ತವಾಗಿಲ್ಲ. ಬಸವಣ್ಣನವರು ಜಾತಿ ಪದ್ಧತಿಯ ಬೇರಿಗೇ ಬೆನ್ನೀರು ಹೊಯ್ಯಲು ಸರ್ವಪ್ರಯತ್ನಗಳನ್ನೂ ಮಾಡಿದರೆಂಬುದನ್ನು ಎಷ್ಟು ಹೊಗಳಿದರೂ ಕಡಿಮೆ. ಅವರು ಜಾತಿಗಳ ಅಡ್ಡಗೋಡೆಗಳನ್ನು ಕುಟ್ಟಿಕೆಡವಲು ತಮ್ಮ ಸರ್ವಶಕ್ತಿಯನ್ನೂ ವಿನಿಯೋಗಿಸಿದ ಮಹಾನುಭಾವರು.
ಅಸ್ಪೃಶ್ಯತೆ ಹಿಂದೂ ಧರ್ಮಕ್ಕಂಟಿದ ಮತ್ತೊಂದು ಲಜ್ಜಾಸ್ಪದ ಕಳಂಕ; ಅದನ್ನು ತೊಡೆದು ಹಾಕುವುದೂ ಬಸವಣ್ಣನವರು ಜೀವಿತೋದ್ದೇಶವಾಗಿತ್ತು. ಅವರು ವ್ಯಕ್ತಿಯ ಯೋಗ್ಯತೆಯನ್ನು ನೀತಿಯ ಮಾನದಂಡದಿಂದ ಅಳೆದರು, ಜಾತಿಯಿಂದಲ್ಲ. ಯಾರು ಧರ್ಮನಿರತರೂ, ಶಿವಭಕ್ತರೂ, ಸದಾಚಾರ ಸಂಪನ್ನರೂ ಅವರೇ ಕುಲಜರು; ತದ್ವಿರುದ್ದ ರೀತಿಯಲ್ಲಿ ಬದುಕುವವರೇ ಕುಲಹೀನರು ಇದು ಬಸವಣ್ಣನವರ ಪುನರ್ ಮೌಲ್ಯಮಾಪನ.
ಸ್ತ್ರೀ ಆಧ್ಯಾತ್ಮಿಕವಾಗಿ ಸಾಮಾಜಿಕವಾಗಿ ಮಾತ್ರವಲ್ಲದೆ ಸಾಹಿತ್ಯಕವಾಗಿಯೂ ಪುರುಷನಿಗೆ ಹೆಗಲೆಣೆ ಎಂಬುದನ್ನು ವಚನ ಸಾಹಿತ್ಯ ಉದ್ಘೋಷಿಸುತ್ತಿದೆ. ವಾಸ್ತವವಾಗಿ ಸ್ತ್ರೀ ಸ್ವಾತಂತ್ರ್ಯ ಚಳುವಳಿ ಅಂದೇ ಆರಂಭಗೊಂಡಿತು.ಬಸವಣ್ಣನವರ ಕಾಲದ ಸಮಾಜದಲ್ಲಿ ಪ್ರಾಣಿ ಬಲಿ ರೂಢವಾಗಿತ್ತು; ಅದನ್ನೆ ಧಮರ್ಾಚರಣೆಯೆಂದು ಜನ ಭ್ರಮಿಸಿದ್ದಿರಬೇಕು. ಬಸವಣ್ಣನವರು ಅದನ್ನು ಅಲ್ಲಗೆಳೆದು, ಅಹಿಂಸೆ, ದಯೆಗಳ ಅವಶ್ಯಕತೆಯನ್ನು ಒತ್ತಿ ಹೇಳಬೇಕಾಯಿತು. ಧರ್ಮದ ಹೊಸ ವ್ಯಾಖ್ಯೆಯನ್ನೇ ಅವರು ನೀಡಿದರು.
ದೇವಾಲಯ ನಿಮರ್ಾಣಕ್ಕೆ ಬಸವಣ್ಣನವರ ವಿರೋಧವಿದೆ; ಸ್ಥಾವರ ಲಿಂಗಪೂಜೆಗೆ ಅವರ ಸಮ್ಮತಿಯಿಲ್ಲ, ಈ ದೃಷ್ಟಿಯಿಂದ, ಬಸವಣ್ಣನವರು ಬಾಹ್ಯ ದೇವಾಲಯಗಳಿಗೆ ಬೆಲೆ ಕೊಡದೆ, ತಮ್ಮ ದೇಹವೇ ದೇವಾಲಯವೆಂದು ಪರಿಗಣಿಸುವುದು ಸಮುಚಿತವಾಗಿದೆ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ!.
ಕಾಯಕಕ್ಕೆ ಬಸವಣ್ಣನವರಿತ್ತ ಪ್ರಾಧಾನ್ಯ ಅತ್ಯಂತ ಗಮನಾರ್ಹವಾದುದು. ಅವರು ಕಟ್ಟ ಬಯಸಿದ ನೂತನ ಸಮಾಜದ ಒಂದು ಮುಖ್ಯಾಧಾರವೆಂದರೆ ಕಾಯಕ ತತ್ವ. ಸಮಾಜದ ಪ್ರತಿಯೊಬ್ಬ ವ್ಯೆಕ್ತಿಯೂ ಏನಾದರೊಂದು ದೈಹಿಕವಾದ ಕೆಲಸ ಮಾಡಬೇಕು. ಆದುದರಿಂದಲೇ ಜೀವನ ನಡೆಸಬೇಕು ಎಂಬುದು ಕಾಯಕ ತತ್ತ್ವದ ಒಂದು ಮುಖವಾದರೆ, ಯಾವ ಕೆಲಸವೂ ಕೀಳಲ್ಲ, ಪ್ರತಿಯೊಂದು ಕೆಲಸವೂ ಪವಿತ್ರ ಎನ್ನುವುದು ಇನ್ನೊಂದು ಮುಖ. ಅನೇಕ ಸಮಾಜಿಕ ಆಥರ್ಿಕ ಸಮಸ್ಯೆಗಳಿಗೆ ರಾಮ ಬಾಣವಾಗಬಲ್ಲುದು ಈ ಕಾಯಕ ತತ್ತ್ವ. ಸಮಾಜದ ಅಸಮತೆ ದಾರಿದ್ರ್ಯಗಳನ್ನು ನಿವಾರಿಸುವ ಏಕೈಕ ಮಂತ್ರವಾಗಿದೆ, ಕಾಯಕವೇ ಕೈಲಾಸ.