ಬಸಿರ ಹೊರುವೆ ನಾ ಹಸಿರ ಹೆರುವೆ
ಕವನ
ಕೆಂಪೇರಿ ಬಿಸಿಲಡರಿ ಕಾದಿರುವೆ ತಡವರಸಿ
ತುಡಿಯುತಿಹೆ ಸಂಭ್ರಮದ ಸಂಗಮಕೆ ತಡವೇಕೆ
ಬನ್ನಿ ಮೇಘಗಳೆ ಹದಮೀರಿ ಮುದಗೆಡುವ ಮುನ್ನ
ಅಡಿಗಡಿಗೆ ಹಸಿರುಡುಗೆ ತೊಡುವಾಸೆ ಸುರಿಸಿ ಜೀವ
ಬಿಂದುಗಳ ಬಸಿರ ಹೊರುವೆ ನಾ ಹಸಿರ ಹೆರುವೆ
ಬರದ ಬವಣೆಯ ನೀಗಲು
ಕಡಲ ತಡಿಯಿಂದ ನಭದ ಮೇಲಿಂದ
ಗುಡುಗುಡಿಗಿ ಘೂರ್ಮಿಡುತ ಬರಸಿಡಿಲಿ
ನಾರ್ಭಟದಿ ಭೋರಿಡುತ ಬನ್ನಿ ಮೋಡಗಳೆ ಹದಮೀರಿ ಋತು
ಜಾರುವ ಮುನ್ನ ಎನ್ನೊಡಲ ತುಂಬಿರಿ ಸುರಿಸಿ ಜೀವ
ಬಿಂದುಗಳ ಬಸಿರ ಹೊರುವೆ ನಾ ಹಸಿರ ಹೆರುವೆ
ಬರದ ಬವಣೆಯ ನೀಗಲು
Comments
ಉ: ಬಸಿರ ಹೊರುವೆ ನಾ ಹಸಿರ ಹೆರುವೆ
In reply to ಉ: ಬಸಿರ ಹೊರುವೆ ನಾ ಹಸಿರ ಹೆರುವೆ by venkatb83
ಉ: ಬಸಿರ ಹೊರುವೆ ನಾ ಹಸಿರ ಹೆರುವೆ