ಬಾಂಬ್ ಬ್ಲಾಸ್ಟ್ ಆಯ್ತಾ ? ಯಾವ ಹಾಡು ಹಾಕ್ಲಿ ?

ಬಾಂಬ್ ಬ್ಲಾಸ್ಟ್ ಆಯ್ತಾ ? ಯಾವ ಹಾಡು ಹಾಕ್ಲಿ ?

Comments

ಬರಹ

ಮೊನ್ನೆ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟವಾದ ದಿನ . ಸಂಜೆ ಎಂಟರ ಸುಮಾರಿಗೆ ಮನೆಕಡೆ ಹೊರಟಿದ್ದೆ. ಪ್ರಯಾಣಿಸುತ್ತಿದ್ದ ಗಾಡಿಯಲ್ಲಿ ಎಫ್ ಎಮ್ ರೇಡಿಯೋ ಎಂದಿನಂತೆ ಶಬ್ಡಮಾಲಿನ್ಯದ ಮೂಲಕ ನಗರದ ನಾಗರೀಕರಿಗೆ ಕೈಲಾದಮಟ್ಟಿಗೆ ಸೇವೆ ಸಲ್ಲಿಸುತ್ತಿತ್ತು. "ನಿಮ್ಮ ಏರಿಯಾದಲ್ಲಿ ಏನಾದರೂ ವಿಶೇಷ ಘಟನೆ ನಿಮ್ಮ ಗಮನಕ್ಕೆ ಬಂದರೆ ತಕ್ಷಣ ನಮಗೆ ಕರೆ ಮಾಡಿ ; ಲೈಫ್ ಎಂಜಾಯ್ ಮಾಡಿ "ಎಂದು ಆಹ್ವಾನ ಕೊಟ್ಟ ರೇದಿಯೋಜಾಕಿಯ ಕೋರಿಕೆಗೆ ಹತ್ತಾರು ಜನರು ದೂರವಾಣಿಯ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದರು.

"ಸಾರ್, ನನ್ನ ಹೆಸರು ಸುರೇಶ ಅಂತ ;ಈಗ ಅರ್ಧ ಗಂಟೆ ಮುಂಚೆ ಆಡುಗೋಡಿ ದಾರಿಯಿಂದಮನೆಗೆ ಬಂದೆ ; ಬಾಂಬ್ ಬ್ಲಾಸ್ಟ್ ಆದ ಜಾಗ. ನೆಲದ ಮೇಲೆಲ್ಲ ರಕ್ತದ ಕೆಂಪು ಕಲೆ ಇನ್ನೂ ಹಾಗೇ ಇತ್ತು; ನೋಡಿ ಮೈ ಜುಂ ಅಂತು ಸಾರ್ !"

"ವಿಷಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸುರೇಶ್ ಅವರೇ; ಈಗ ನಿಮಗಾಗಿ ಯಾವ ಹಾಡು ಹಾಕ್ಲಿ ?"

"ನನ್ನ ಲವ್ವರ್ ವನಜಾಕ್ಷಿ ಅಂತ; ಅವಳಿಗಾಗಿ "ಒಲವೇ ವಿಸ್ಮಯ" ಅನ್ನೊ ಹಾಡು ಹಾಕಿ ಸಾರ್."

" ಸುರೇಶ್ ಮತ್ತು ಅವರ ಲವ್ವರ್ ವನಜಾಕ್ಷಿಗಾಗಿ ಈಗ ಒಲವೇ ವಿಸ್ಮಯ ಅನ್ನೊ ಬೊಂಬಾಟ್ ಹಾಡು; ಕೇಳಿ, ಮಜಾ ಉಡಾಯ್ಸಿ"

ನೆಲದ ಮೇಲಿನ ರಕ್ತದ ಕಲೆ ಇನ್ನೂ ಹಸಿಯಾಗೇ ಇತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet