ಬಾಪೂಗೆ

ಬಾಪೂಗೆ

ಕವನ

 


 


ನೀನು ಹೊರಟು ಹೋದೆ


ನೂಲು ತೆಗೆದು ನಿಲ್ಲಿಸಿಬಿಟ್ಟು ಚರಕ.


ಒಂದೊಂದು ನೂಲೂ ನೇಣಾಗಿ


ನೋಡಿಸಿವೆ ನರಕ.


 


ತೆಗೆದಿಟ್ಟು ಬಿಟ್ಟು ಹೋದೆ


ಧರಿಸಿದ್ದ ಕನ್ನಡಕ.


ಅದರೊಳಗೆ ಇನ್ನೂ....


ಹಾಗೇ ಇರುವ ನೋಟಗಳು


ತರಿಸಿವೆ ಮೈನಡುಕ.


 


ತಂತಿ ಮೇಲೆ ಹರವಿ ಹೋದೆ


ಉಟ್ಟಿದ್ದ ತುಂಡು ಧೋತಿ.


ಅದನ್ನೇ ತೆಗೆದುಕೊಂಡು


ರಕ್ತ ಒರೆಸಿಕೊಳುತಿದೆ ಕತ್ತಿ.


-----------------------------


c v sheshadri hoalavanahalli


 


 

Comments