ಬಾಪೂಜಿಗೆ ನಮಿಸೋಣ ; ಯಾರನ್ನೂ ನಿಂದಿಸುವುದು ಬೇಡ ! ನಾವು ಕಾರ್ಯರಥರಾಗೋಣ !

ಬಾಪೂಜಿಗೆ ನಮಿಸೋಣ ; ಯಾರನ್ನೂ ನಿಂದಿಸುವುದು ಬೇಡ ! ನಾವು ಕಾರ್ಯರಥರಾಗೋಣ !

ಪ್ರತಿವರ್ಷದ ತರಹ ಎಲ್ಲಾ ಹಬ್ಬ ಹರಿದಿನಗಳು, ಕೆಟ್ಟ ನೆನಪಿನ ದಿನಗಳು, ಮತ್ತೆ ಸುಂದರ ಘಳಿಗೆಗಳನ್ನು ಮೆಲುಕುಹಾಕುವ ದಿನಗಳು ಬರುತ್ತಲೇ ಇರುತ್ತವೆ. ಅವು ನಮ್ಮ ಮೈಮೇಲಿನ ಧೂಳನ್ನು ಕೊಡವಿ ಮತ್ತೆ ನಮ್ಮಲ್ಲಿ ಹೊಸಚೇತನವನ್ನು ಹೊಮ್ಮಿಸಲು ಅನುವುಮಾಡಿಕೊಡುತ್ತವೆ. ಹಿಂದೆ ಮಾಡಿದ ತಪ್ಪುಗಳನ್ನು ಸ್ವಲ್ಪ ಬದಲಾಯಿಸಲು ಇಲ್ಲವೇ ಪೂರ್ತಿಯಾಗಿ ನಿಲ್ಲಿಸಲೂ ನಮಗೆ ಪ್ರೇರಣೆ ಕೊಡಬಹುದು. ಅಲ್ಲವೇ ? ಇಂದು ಅಂತಹದೇ ಅಪರೂಪದ ದಿನವೊಂದು ನಮ್ಮನ್ನು ಚಕಿತಗೊಳಿಸುತ್ತದೆ. ರೋಮಾಂಚಗೊಳಿಸುತ್ತದೆ. ಒಮ್ಮೆಮ್ಮೆ ಅಂದಿನ ಪರಿಸ್ಥಿತಿಯನ್ನು ನೆನೆಸಿ, ಹಿಂದಿರುಗಿ ನೋಡಿದಾಗ ನಾವು ಸ್ಥಬ್ದರಾಗುತ್ತೇವೆ. ನಾವೇ ನಮ್ಮ ಮೈಜಿಗುಟಿಕೊಂಡು ಇದು ಕನಸಲ್ಲವೋ ಅಣ್ಣ ಎಂದು ಸಮಾಧಾನಪಟ್ಟುಕೊಳ್ಳುವ ಮಟ್ಟಿಗೆ ಆ ಮಧುರ-ಕರಾಳ ಘಟನೆಗಳು ನಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳುತ್ತವೆ. ಆ ನೆನಪುಗಳು ನಮ್ಮನ್ನೆಲ್ಲಾ ತೀವ್ರವಾಗಿ ಕಾಡಿವೆ. ಅದೇ,  ವರ್ಷ ೨೦೧೩ ರ, ಗಾಂಧಿ ಜಯಂತಿಯ ಸ್ಮರಣೀಯ ದಿನ- ಮಹಾ ದಿನ ! ಇಂದು ನಾವೆಲ್ಲಾ ಇಷ್ಟನ್ನಾದರೂ ಖಡ್ಡಾಯವಾಗಿ ಮಾಡಲೇಕು : * ಹಾಸಿಗೆಯಿಂದ ಮೇಲೆ ಏಳೋಣ. ಇಷ್ಟು ದಿನ ಮಾಡಿದ ನಿದ್ದೆ ಸಾಕು. ಈಗ ನಾವು ಕಾರ್ಯಮುಖರಾಗೋಣ ! * ಗಾಂಧಿಯವರ ಆಶೀರ್ವಾದ ನಮ್ಮಲ್ಲಿ ಕರ್ತ್ಯವ್ಯ ಪ್ರಜ್ಞೆಯನ್ನು ಮೂಡಿಸಲಿ.ಮೊದಲನೆಯದಾಗಿ ಇಂದು ನೆಮ್ಮದಿಯಾಗಿ ಉಸಿರಾಡಲು ಅವಕಾಶಮಾಡಿಕೊಟ್ಟ ಸ್ವತಂತ್ರ್ಯ ಸೇನಾನಿಗಳಿಗೆಲ್ಲಾ ನಮಿಸಿ ನಮ್ಮ ದಿನದ ಕೆಲಸಗಳನ್ನು ಆರಂಭಿಸಬೇಕು. * ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಯಾರೂ ಸರಿಯಾಗಿ ಮಾಡುತ್ತಿಲ್ಲ, ಅವರು ಹಾಗೆಮಾಡಿದರು, ಹೀಗೆ ಮಾಡಿದ್ದು ಸರಿಯೇ ಎಂದು ಸುಮ್ಮನೆ ಗೊಂದಲಮಯ ವಾತಾವರಣ ಸೃಷ್ಟಿಸಿ ವೃಥಾ ಮಾತುಕತೆಗಳಿಗೆ ಗ್ರಾಸವಾಗುವುದು ಬೇಡ.  * ಪೂಜ್ಯ ಬಾಪುರವರ ಮಾರ್ಗದರ್ಶನದಲ್ಲಿ ನಮಗೆ ಸಿಕ್ಕ ಅಮೂಲ್ಯ ವ್ಯಕ್ತಿಸ್ವಾತಂತ್ರ್ಯ, ಮತ್ತು ನಮ್ಮನ್ನು ನಾವೇ ಆಳುವ ಸುಯೋಗದ ಬಗ್ಗೆ ಗಮನ ಹರಿಸಿ ನಮ್ಮ ಮಕ್ಕಳನ್ನು ಮುಂದೆ ರಾಜಕೀಯಕ್ಕೆ ಕಳಿಸಿ ಅವರನ್ನು ತಯಾರು ಮಾಡಿ ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಶಪಥಮಾಡುವ ದಿನವಿದು. ಗಮನವಿರಲಿ. ಕಾಲಹರಣ ಸಲ್ಲದು. * ಯಾರನ್ನೂ ಸುಮ್ಮನೆ ನಿಂದಿಸಬೇಡಿ. ನಿಮ್ಮ ಕಡೆ ಬೆರಳು ತೋರಿಸಿಕೊಂಡು ನೋಡಿ. ನಿಮ್ಮ ಹೆಂಡತಿ ಪತಿ, ಮಕ್ಕಳ ಒಳಿತಿಗೆ ನಿಮ್ಮ ಯೋಗದಾನ ಎಷ್ಟು ? ಯೋಚಿಸಿ. ಮುಂದುವರೆಯಿರಿ. * ಇದು ಅವರ ಕೆಲಸ, ಅವರು ಮಾಡಿದ ತಪ್ಪಿನಿಂದ ಹೀಗಾಯಿತು. ಯಾಕೆ ಹಾಗೆ ಮಾಡಲಿಲ್ಲ. ಇತ್ಯಾದಿ ದೋಷಾರೋಪಣ ಕೈಬಿಡಿ. ನಾವು ಈ ಲೋಕದಿಂದ ದೂರ ಸರಿದಾಗ ನಮ್ಮ ಮಕ್ಕಳೇ ನಮ್ಮ ಬಗ್ಗೆ ಹಾಗೆ ಟೀಕೆ ಮಾಡಿದರೆ ನಿಮ್ಮ ಆತ್ಮಕ್ಕೆ ಸಂತೋಷ ಸಿಗುತ್ತದೆಯೇ ? * ಇಂದು ಗಾಂಧಿ ಚಿತ್ರ ನೋಡಿ, ಖಂಡಿತ ಬೇರೆ ಚಿತ್ರಗಳನ್ನು ನೋಡಬೇಡಿ. ನಿಮ್ಮ ಮಕ್ಕಳಿಗೆ ನಿಮಗೆ ಗೊತ್ತಿರುವ ಗಾಂಧೀಜಿ ಕಥೆ ಹೇಳಿ. *ನಿನ್ನೆ, ನಿನ್ನೆ.  ಮುಂದಿನದು ಗೊತ್ತಿಲ್ಲ. ಇಂದು ಈ ಕ್ಷಣದಲ್ಲಿ ಚೆನ್ನಾಗಿ ನೆಮ್ಮದಿಯಿಂದ ತಲೆ ಎತ್ತಿ, ಎದೆ ಮುಂದುಮಾಡಿಕೊಂಡು ಚೆನ್ನಾಗಿ ಬದುಕೋಣ. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಬ್ಯಯ್ಯದಂತೆ ಬದುಕಲು ಕಲಿಯೋಣ !   

Comments