ಬಾರದ ಮಗಳು..ಪ್ರತಿ ವರ್ಷ ಮಹಿಳಾ ದಿನಾಚರಣೆ ಕಂಡಿತ ಬರುತ್ತದೆ...!

ಇದು ಕಲ್ಪನೆ ಮಿಶ್ರಿತ ಒಂದು ಅನುಭವ. ಬಹುತೇಕರ ಲೈಫ್ ನಲ್ಲಿ ಇದು ಆಗಿರುತ್ತದೆ. ಹೆಣ್ನಮಕ್ಕಳನ್ನ ಬಂಜೆ ಅನ್ನೋತ್ತೇವೆ. ಗಂಡಸರಲ್ಲೂ ಆ ಬಂಜೆತನ ಈಗ ಹೆಜ್ಜಾಗಿದೆ. ಹುಷಾರು..ಹೆಣ್ನಮಕ್ಕಳನ್ನ ಉಳಿಸಿ...ರಕ್ಷಿಸಿ....ಗೌರವಿಸಿ. ಕೆಳೆಗೆ ಬರೆದಿರೋ ಒಂದು ಪುಟ್ಟ ಲೇಖನ ಓದಿ..
ಮಗಳು ಹುಟ್ಟುತ್ತಾಳೆಂಬ ನಂಬಿಕೆ. ಮದುವೆ ಆದಾಗಿನಿಂದ. ವರ್ಷ 6 ಉರುಳಿದವು. ಮಗಳು ಬರಲಿಲ್ಲ. ಕಾರಣ ನನ್ನವಳಲ್ಲ. ನಾನೇ. ನಾನು ಹುಟ್ಟಿದಾಗ ತಂಗಿ ಇಲ್ಲ ಎಂಬ ಕೊರಗು ಇತ್ತು. ಅದು ಇನ್ನೂ ಇದೆ. ಬೇರೆಯವರನ್ನ ತಂಗಿ ಅಂತ ಒಪ್ಪಿಕೊಳ್ಳಲು ಆಗೋದಿಲ್ಲ. ಕಾಲೇಜು ದಿನಗಳಲ್ಲಿ ಗೆಳೆತಿ ಇರಲಿಲ್ಲ. ಈಗ ಗೆಳತಿಯಿದ್ದಾಳೆ. ಅವಳೇ ನನ್ನ ಮಡದಿ ಕೂಡ. ಮಡದಿ ಅನ್ನೋಕೆ ಆಗೋದಿಲ್ಲ. ಮನಸ್ಸು ಒಪ್ಪಿಕೊಳ್ಳೋದಿಲ್ಲ. ಯಾಕೆಂದೆ, ನಾನು ಅವಳು ಇಬ್ಬರೂ ಗುಡ್ ಫ್ರೆಂಡ್ಸ್. ನನ್ನಿಂದ ಮಕ್ಕಳು ಆಗೋದಿಲ್ಲ ಎಂಬ ಸತ್ಯ ಅವಳಿಗೂ ಗೊತ್ತು. ಅದಕ್ಕೆ ಅವಳೇ ಗ್ರೇಟ್. ನನ್ನ ಸಮಸ್ಯೆಯಿಂದ ಅವಳು ನೋವು ನುಂಗುತ್ತಿದ್ದಾಳೆ. ಆದರೆ, ಎಲ್ಲೂ ತೋರಿಕೊಡುವುದಿಲ್ಲ. ನನಗೆ ಅದು ಫೀಲ್ ಆಗುತ್ತದೆ. ಗೆಳತಿ ಇದ್ದರೇ ಹೀಗಿರಬೇಕು. ಜೀವ ಹೋಗವರೆಗೂ. ಮಹಿಳೆಯರೇ ಗ್ರೇಟ್ ಅಂತ ಸುಮ್ಮನೇ ಹೇಳೋದಿಲ್ಲ. ಅವರು ಯಾವಾಗ್ಲೂ ಗ್ರೇಟ್. ನನ್ನ ಅಮನ್ನ ಥರ. ನಾನು ಅಮ್ಮ ಆಗೋಕೆ ಆಗಲ್ಲ. ಅಪ್ಪ ಸಾಧ್ಯವೇಯಿಲ್ಲ. ಮಹಿಳಾ ದಿನಾ ಚರಣೆ ದಿನ ಇದು ನಾ ಹೇಳ್ತಿರೋ ನನ್ನ ಜೀವನದ ಸತ್ಯ. ಹೆಣ್ಮಕಳ್ಳನ್ನ ಕೇವಲ ಪೂಜಿಸಿದರೇ ಸಾಲದು. ಅವರ ಪಡೆಯೋ ಅದೃಷ್ಠವೂ ಇರಬೇಕು...ಅದು ಈ ಜನ್ಮದಲ್ಲಿ ನನಗಿಲ್ಲ. ಮುಂದಿನ ಜನ್ಮ ಇದ್ದರೇ. ಆ ಮಗಳಿಗೋಸ್ಕರ ಕಾಯೋವೆ...
-ರೇವನ್