ಬಾಲ್ಯದ ಬದುಕಿಗೆ ಬಾಳಿನ ದಿಕ್ಸೂಚಿ(ಮದುವೆ)

ಬಾಲ್ಯದ ಬದುಕಿಗೆ ಬಾಳಿನ ದಿಕ್ಸೂಚಿ(ಮದುವೆ)

ಕವನ

 


 


ಕಣ್ಣಲ್ಲಿನ ಕವಿತೆಯಿದು,ಮನದಾಳದ ಚರಿತೆಯಿದು

ರವಿ ಉದಯಿಸುವ ಮೊದಲೇ ,ಸವಿ ಸೂಸುವ ಪರಿಯಿದು 

ಬಾಲ್ಯದ ಬದುಕಿಗೆ ಬಾಳಿನ ಮುನ್ನುಡಿಯಿದು

ಪ್ರೀತಿಯಾ  ಪೈರಲ್ಲಿ ಪರಿತಪಿಸುವ ಚಿಟ್ಟೆಯಿದು

 


ಜಗವನ್ನೇ ನಾಚಿಸುವ ಜನ್ಮಾಂತರದ ಬಂಧವಿದು


ಇನ್ನೇಳು  ಜನ್ಮಕೂ   ನಿನ್ನವನಗಿರುವ ಕನಸಿದು


ನನ್ನತನವನು ಮರೆತು ನೀನು ನಾನೆಂದು ಒಪ್ಪುವ ಗಳಿಗೆಯಿದು


ಉಸಿರು ಉಸಿರಲ್ಲಿ ಹಸಿರಾಗಿ  ನಲಿಯುವ ನುನುಪಿದು

 

ಮುಂಬರುವ ಹಾದಿಯಲಿ ಸುಖ ದುಖಗಳ ಸಮ ಪಾಲು 

ನಿನ್ನಯ ನೋವಿಗೆ ನನ್ನ ಕಣ್ಣಲ್ಲಿ ಪುಳಕಲಿ  ಕಣ್ಣೀರು

ನಿನ್ನಯ ಮುಂಗುರುಳ ನಾಚಿಕೆಯಲಿ ನನ್ನ ದೃಷ್ಟಿಯ ತೇರು

ವರುಷಗಳು ಹರುಷಗಳಾಗುವ ಶುಭ ಸೂಚಿಯ ಸವಿಜೇನು 

 

ಸಂಸಾರ ನೌಕೆಯಲಿ ಕಣ್ಪಿಳುಕಿಸುವ ನವ ಜೋಡಿ ನಾವು 

ಮುಗಿಯದಿರಲಿ ಪ್ರೀತಿ ಪಯಣ ನಿನ್ನ ಕಿರು ಬೆರಳು ನನ್ನ  ಕಿರುಬೆರಳಲಿ ಇರಲು

ಮುಂದಿನ ವಸಂತ ಮಾಸದಲಿ ಬಾಲ ಮುಕುಂದ ನಮ್ಮೆದುರಲಿರಲು 

ಸ್ವರ್ಗದ ಬಾಗಿಲು ಧಿಕ್ಕರಿಸಿ ಮುನ್ನೆಡೆಯೋಣ ನಾವು