ಬಾಲ್ಯದ ಮರೆಯಲಾರದ ಅನುಭವಗಳು-ಕೆಲವು ಸಿಹಿ; ಮತ್ತೆ ಕೆಲವು ಕಹಿ !

ಬಾಲ್ಯದ ಮರೆಯಲಾರದ ಅನುಭವಗಳು-ಕೆಲವು ಸಿಹಿ; ಮತ್ತೆ ಕೆಲವು ಕಹಿ !

ಈಗ ನನ್ನ ೬೯ ರ ಪ್ರಾಯದಲ್ಲಿ ಬಾಲ್ಯದ ದಿನದ ನೆನಪುಗಳು ಬರುತ್ತಿವೆ. ೬೦ ರಮೇಲೆ ನೆನಪುಗಳೇ ನಮ್ಮ ಜೀವನದ ಅಂಗವಾಗಿ ಹೋಗುತ್ತವೆ. ಇದು ಎಲ್ಲರ
ಗಮನಕ್ಕೆ ಬಂದ ವಿಚಾರವೇ ಹೊಸದೇನಲ್ಲ. ನಮ್ಮ ಇಂದಿನ ಟೆಲಿವಿಶನ್ ಧಾರಾವಾಹಿಯಲ್ಲಿ ಕಥೆ ಪ್ರಾರಂಭವಾಗಿ ’ಫ್ಲಾಶ್ ಬ್ಯಾಕ್’ ಗಳ ಬರುವಂತೆಮೊನ್ನೆ
ರಾತ್ರಿ, ಸಮಯದಲ್ಲಿ ‘ವಿವಿಧಭಾರತಿ ಕಾರ್ಯಕ್ರಮ’, ‘ಭೂಲೇ ಬಿಸ್ರೆ ಗೀತ್’ ಶುರುವಾಗಿತ್ತು. ನಿರೂಪಕಿ, ತನ್ನ ನಾಜೂಕಾದ ಗುನುಗುವ ಧ್ವನಿಯಲ್ಲಿ
ಎಲ್ಲರಿಗೂ ತನ್ನ ಯುವಾವಸ್ತೆಯ ಹಾವಭಾವಗಳನ್ನು ನಮ್ಮ ಮನಸ್ಸಿನ ಮುಂದೆ ತರುವ ಪ್ರಯತ್ನದಲ್ಲಿ ಹಿಂದಿನ ದಿನಗಳ ನಾಯಕ ನಾಯಕಿಯರ ಪ್ರಣಯ
ಸನ್ನಿವೇಶಗಳನ್ನು ವಿವರಿಸುವ ಪ್ರಯತ್ನಿಸುತ್ತಿದ್ದಾಳೆ. ಟೆಲಿವಿಶನ್ ನಲ್ಲಿ ಈತರಹದ ಕಾರ್ಯಕ್ರಮ ನಿಜಕ್ಕೂ ಬರುವುದಿಲ್ಲ. ’
’.
ಇತ್ಯಾದಿ ನಿಜಕ್ಕೂ ಮೈ ನವಿರೇಳಿಸುವ ಸರಳ-ಸುಂದರ ಗೀತೆಗಳು. ಆದರೆ ಇದೇ ಗೀತೆಗಳನ್ನು ನಾವು ಅದೆಷ್ಟು ಬಾರಿ ಕೇಳಿಲ್ಲ. 'ಅಯ್ಯೋ ಮತ್ತೆ ಅದೇ
ಹಳೆಹಾಡು ಬಂತಪ್ಪ' ಎಂದು ಮೂಗುಮುರಿದ ದಿನಗಳೂ ಇಲ್ಲದಿಲ್ಲ. ಈಗ ಅದೇ ಹಾಡುಗಳನ್ನು ಕೇಳಿದಾಗ ಕಿವಿಗಳಿಗೆ ಅಮೃತ ಹೊಯ್ದಂತೆ ಭಾಸವಾಗುತ್ತಿದೆ.
ಇನ್ನು ಬಾಲ್ಯದ ದಿನಗಳ ಬಗ್ಗೆ ನೆನೆದರೂ ಸಹಿತ !

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಮ್ಮೂರು. ನಾನು ಈಗ ಹೇಳಲಿರುವ ಕಥೆಯ ನಾಯಕ ನನ್ನ ತಮ್ಮ ಚಂದ್ರ, ನಾವಿಬ್ಬರೂ ಆಗ ನಾವಿನ್ನೂ ಚಿಕ್ಕವರು ;
ಎಲ್ಲರೂ ನಮ್ಮನ್ನು ಸಂತೈಸುವವರೇ. ಇಲ್ಲವೇ ಪಾಪ ಅವರಿಗೇನು ಗೊತ್ತಾಗುತ್ತೆ ಎಂದು ಮರುಕಪಡುವರು. ಹೆಚ್ಚಿಗೆ ಬೈದು ಹೊಡೆದು ಯಾರೂ ನಮ್ಮನ್ನು
ದಂಡಿಸುತ್ತಿರಲಿಲ್ಲ. ಇನ್ನೂ ಅಪ್- ಅಮ್ಮ ಜೀವಂತರಾಗಿದ್ದರಲ್ಲ. ನಮಗೆ ಬೆಂಬಲವಾಗಿ ನಮ್ಮ ಆಸೆಗಳಿಗೆ ಹೂಗುಟ್ಟುತ್ತಾ ತಲೆನೇವರಿಸಿ ಮುದ್ದುಮಾಡಿ,
ಸಮಯಬಂದಾಗ ಕೋಪಿಸಿಕೊಂಡು, ನಮ್ಮನ್ನು ಕಡೆದು ವಿಗ್ರಹಗಳನ್ನಾಗಿ ಮಾಡಿದ ಅವರಿಗೆ ನಮಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ ? ನಮ್ಮಮ್ಮನವರ
ಹೆಸರು, ರಾಧಮ್ಮ. ತಂದೆಯವರ ಹೆಸರು, ರಂಗರಾಯರು, ಎಂದು. ದಾವಣಗೆರೆ, ಹಿಂದೂಪುರ, ವಾಯಿಲ್ಪಾಡು, ನಾಂಡೆಡ್, ಜಾಲ್ನಾ, ನಂತರ
ಬೊಂಬಾಯಿಗಳ ಬ್ರಿಟಿಷ್ ಕಂಪೆನಿಯೊಂದರಲ್ಲಿ ಕೆಲವು ದಶಕ ಏಜೆಂಟರಾಗಿ ದುಡಿದು, ನಮ್ಮಜ್ಜನವರ ಮಾತಿಗೆ ಮಣಿದು, ಬೊಂಬಾಯಿನಿಂದ ಮತ್ತೆ ಹೊಳಲ್ಕೆರೆ
ಎಂಬ ಕಗ್ಗ ಹಳ್ಳಿಗೆ ಬಂದರು. ಪಾರಂಪಾರಿಕವಾಗಿ ನಡೆದುಕೊಂಡು ಬಂದ ಶ್ಯಾನುಭೋಗಿಕೆ ಎಲ್ಲಿ ಕೈತಪ್ಪಿಹೋಗುವುದೋ ಎನ್ನುವ ಕಾತರ ಅವರನ್ನು ಬಾಧಿಸುತ್ತಿತ್ತು.
ಅಜ್ಜ, ವೆಂಕಟನಾರಾಯಣಪ್ಪನವರಿಗೆ, ೩ ಜನ ಗಂಡುಮಕ್ಕಳಲ್ಲಿ ರಾಮಸ್ವಾಮಿ ದೊಡ್ಡವರು; ಶಿರಸ್ತೇದಾರರಾಗಿ ಊರೂರು ಸುತ್ತುತ್ತಿದ್ದರು. ಸುಬ್ಬಣ್ಣ
ಕೊನೆಯವರು. ಅವರೂ ‘ಹೋಳಲ್ಕೆರೆ ಮುನಿಸಿಪಾಲಿಟಿ ಆಫೀಸಿನಲ್ಲಿ ಕೆಲಸದಲ್ಲ’ಿದ್ದರು. ಇನ್ನು ನಮ್ಮಪ್ಪ ರಂಗಣ್ಣ ,ಬೊಂಬಾಯಿನಲ್ಲಿ ‘ರ‍್ಯಾಲಿ ಬ್ರದರ್’ಸ್,
‘ವಾಲ್ಕಾರ್ಟ್ ಬ್ರದರ್’ಸ್, ಮೊದಲಾದ ಕಂಪೆನಿಗಳಲ್ಲಿ ಏಜೆಂಟಾಗಿ ಕೆಲಸಮಾಡುತ್ತಿದ್ದರು. ಒಬ್ಬ ಮಗಳು ಜಾನಕಮ್ಮ. ಬಹಳ ಚಿಕ್ಕವಯಸ್ಸಿನಲ್ಲೇ ಗಂಡನನ್ನು
ಕಳೆದುಕೊಂಡಿದ್ದರು.

ಹಳ್ಳಿಯಲ್ಲಿ ಬೆಳಗಿನಿಂದ ಮದ್ಯಾನ್ಹದವರೆಗೆ, ಕೆರೆಕಡೆ ಚಂಬು ತೊಗೊಂಡು ಹೋಗುವುದರಿಂದ ಶುರುವಾಗಿ, ಉಪ್ಪು ನೀರು ಸೇದುವುದು, ಸಿಹಿನೀರು ತರಲು
ಪೇಟೆಕಡೆಯ ಭಾವಿಗೆ ಹೋಗಿ ಆಳವಾದ ಭಾವಿಯಲ್ಲಿ ಚೊಂಬಿನಿಂದ ಮೊಗೆದು ನೀರು ಸೇದ ಬೆಕಾಗಿತ್ತು. ಇದರ ನಂತರ, ಸ್ನಾನ, ಆಹ್ನಿಕ, ಅಲ್ಲಿಲ್ಲಿ ಅಡ್ಡಾಡಿ
ಬರುವುದು ಬಿಟ್ಟರೆ ಬೇರೆ ಕೆಲಸವಿಲ್ಲ. ಅಪ್ಪ ಶ್ಯಾನುಭೊಗರು. ಲೆಕ್ಕ-ಪತ್ರಗಳಲ್ಲಿ ಹೆಚ್ಚು ನಿಷ್ಣಾತರಾಗಿದ್ದರಿಂದ ಅವರು ಊರಿನ ಸೊಸೈಟಿಯಲ್ಲಿ ಆಡೀಟರ್
ಆಗಿದ್ದರು. ಶ್ಯಾನು ಭೋಗಿಕೆಯಿಂದ ವರ್ಷಕ್ಕೆ ೩೦೦ ರೂಪಾಯಿ ಪೋಟಿಗೆ ಬರುತ್ತಿತ್ತು. ತಮ್ಮ ಬೊಂಬಾಯಿನ ಕೆಲಸ ಬಿಟ್ಟುಬಂದ ನಂತರ ಆಗ ಮಾಡಿದ
ಸೇವಿಂಗ್ಸ್ ಹಣವನ್ನು ಅಂಚೆ ಕಛೇರಿಯಲ್ಲಿ ಇಟ್ಟು ಅದರ ಬಡ್ಡಿಯಿಂದ ಜೀವನ ನಿರ್ವಹಣೆ ಸಾಗುತ್ತಿತ್ತು.ಸೂರ್ಯ ಮುಳುಗುವ ಹೊತ್ತಿಗೇ ನಮ್ಮ ಊರಿನ ಜನರೆಲ್ಲರ ಕೆಲಸ ಕಾರ್ಯಗಳೆಲ್ಲವು ಎಲ್ಲವೂ ಮುಕ್ತಾಯವಾಗುತ್ತಿತ್ತು. ಅದಕ್ಕೇ ಹಿರಿಯರು
ಮಕ್ಕಳಿಗೆ ದೀಪಮುಡಿಸುವ ಹೊತ್ತಿನ ಮೊದಲೇ ಮನೆಗೆ ಬಂದು ಸೇರಿ ಹುಳ-ಹುಪ್ಪಟೆಗಳ ಕಾಟ ಜೋಕೆ ಎಂದು ಎಚ್ಚರಿಸುತ್ತಿದ್ದರು.
ಹೊಳಲ್ಕೆರೆಯ ಶ್ರೀ.ವೇಣುಗೋಪಾಲಸ್ವಾಮಿ ದೇವಸ್ಥಾನಕಾರ್ತೀಕ ಮಾಸದಲ್ಲಿ ಮನೆಯ ಹತ್ತಿರವೇ ಇದ್ದ ಕ್ಕೆ ಮಾತ್ರ ಸರಿಯಾಗಿ ಮಂಗಳಾರತಿ ಜಾಗಟೆ ಹೊಡೆಯುವ ಶಬ್ದ ಕೇಳಿಸಿದಾಗ ಮಾತ್ರ ಗಡುಬಿಡಿಯಿಂದ ಅಮ್ಮನ ಸೀರೆಯ ಸೆರಗು ಹಿಡಿದು ಹೋಗುತ್ತಿದ್ದೆವು. ಅಪ್ಪ ಯಾಕೋ ಈ ತರಹದ ಪೂಜೆಗಳಿಗೆ ಬರುತ್ತಿರಲಿಲ್ಲ. ಬಹುಶಃ ಅವರ ಕಣ್ಣಿನ ತೊಂದರೆಯಿಂದ ಇರಬಹುದು. ನಮ್ಮಪ್ಪ ತಮ್ಮ ಎರಡೂ ಕಣ್ಣುಗಳನ್ನು ಆಪರೇಶನ್
ಮಾಡಿಸಿಕೊಂಡಿದ್ದರು. ಅಷ್ಟಾದರೂ ಓದುವುದು ಅತಿ ಹೆಚ್ಚು. ಜ್ಯೋತಿಷ ಶಾತ್ರದಲ್ಲಿ ಅತ್ಯಂತ ಆಸಕ್ತಿ. ವಿಶ್ವದ ಎಲ್ಲಾ ನಾಯಕರ, ವ್ಯಕ್ತಿಗಳ ಜಾತಕಗಳನ್ನು
ಕಲೆಹಾಕಿ ಅವುಗಳನ್ನು ವಿಶ್ಲೇಸುವುದು ಅವರಿಗೆ ಬಲು ಪ್ರಿಯವಾದ ಸಂಗತಿ. ’ದಾಸ್ ಬೋಧ್’ ಎಂಬ ಮರಾಠಿ ಬೃಹದ್ ಗ್ರಂಥವನ್ನು ಪಾರಾಯಣ ಮಾಡಿ ಅದರ
ಅರ್ಥವನ್ನು ಕನ್ನಡದಲ್ಲಿ ಹೇಳುತ್ತಿದ್ದರು. ಅಂಗಳಲ್ಲಿ ನಮ್ಮ ಚಿಕ್ಕಪ್ಪನವರ ಮನೆಯ ಎಲ್ಲರೂ ಆಸಮಯದಲ್ಲಿ ಬಂದು ಕೂತು ಭಯ ಭಕ್ತಿಗಳಿಂದ ಪ್ರವಚನ
ಕೇಳುತ್ತಿದ್ದರು. ಮಳೆಗಾಲವಾದರೆ ಕಪ್ಪೆಗಳ ವಟವಟ ಶಬ್ದ ಒಂದೇ ಸಮನೆ ‘ಜೀ’ ಎಂದು ಕಿವಿಗೆ ರಾಚುವ ಜೀರುಂಡೆಗಳ ಶಬ್ದ, ಅಕ್ಕಪಕ್ಕದ ಮನೆಗಳಲ್ಲಿದ್ದ
ವೃದ್ದರ ಕೆಮ್ಮಿನ ಶಬ್ದ, ಇಲ್ಲವೇ ದೂರಲ್ಲಿ ಬೀದಿ ನಾಯಿಗಳು ಬೊಗಳುವ ಶಬ್ದ, ದೂರದಲ್ಲಿ ಹಿರೆಕೆರೆಯ ಏರಿಯ ಆಚೆಯ ಬದಿಯಲ್ಲಿ ಇದ್ದ ಸಾಲು ತೆಂಗು-ಬಾಳೆ
ತೋಟಗಳಲ್ಲಿ ನೀರೆತ್ತುವ ಡೀಸೆಲ್ ಪಂಪ್ ಗಳ ಶಬ್ದ, ಮತ್ತು ಪುಟ್ಟ-ಮಕ್ಕಳ ಅಳುವ ಶಬ್ದ, ಬಿಟ್ಟರೇ ನಮಗೆಯಾವ ವಾಹನಗಳ ಶಬ್ದವೂ ಇಲ್ಲ.

ಗೋಪಾಲ ದೇವರ ದೇವಸ್ಥಾನಲ್ಲಿ ನಮ್ಮ ಪೂಜೆ ಮೊದಲನೆಯ ದಿನ ಇಲ್ಲವೇ ಕೊನೆಯ ದಿನ ಇರುತ್ತಿತ್ತು. ಪ್ರತಿದಿನವೂ ದೇವರಸೇವೆಗೆ ಗುಗ್ಗುರಿ, ರಸಾಯನ,
ಇಲ್ಲವೇಪೊಂಗಲಿನ ತರಹದ ಸಿಹಿ, ಮತ್ತು ಪಂಚಕಜ್ಜಾಯ, ಇರುತ್ತಿತ್ತು. ನಮಗೆ ದೇವರಿಗೆ ಮಾಡಿದ ಅಲಂಕಾರ ಚರುಪಿನ ಆಕರ್ಷಣೆಯೇ ಹೆಚ್ಚು.
ಹೊಳಲ್ಕೆರೆ ಬಿಟ್ಟು ಬೇರೆ ಎಲ್ಲೂ ಹೋಗಿರಲಿಲ್ಲ. ಆಗಿನ ನಾವುಆಡುತ್ತಿದ್ದ ಹುಡುಗರ ಆಟಗಳೆಂದರೆ, ಚಿನ್ನಿದಾಂಡು, ಗೋಲಿ, ಲಗೋರಿ, ಮರಕೋತಿ ಆಟ,
ಚೌಕಬರೆ, ಪಗಡೆ, ಟ್ರೇಡ್ ಆಟ, ಚೈನ ಬೋರ್ಡ್, ಕೇರಂ ಇತ್ಯಾದಿ. ಆಮೇಲೆ ನಾವೇ ವರ್ಡ್ಸ್ ಬಿಲ್ಡಿಂಗ್ ಇತ್ಯಾದಿಗಳನ್ನು ಸೇರಿಸಿಕೊಣ್ಡೆವು. ಮನೆ ಹತ್ತಿರ
ಬಿದ್ದಿರುತ್ತಿದ್ದ ಇಟ್ಟಿಗೆ ಕಲ್ಲುಗಳನ್ನು ಸೇರಿಸಿ ಪುಟ್ಟ ಗುಡಿಕಟ್ಟುವುದು ಒಂದು ಪ್ರಮುಖವಾದ ಆಟವಾಗಿತ್ತು. ಆ ಆಟಗಳು ನಮಗೆ ಅತಿಪ್ರಿಯವಾದವುಗಳು.
ಯಾವದೊಡ್ಡವರು ಬಂದು ನೋಡಿದರೂ ‘ಆಹಾ ಎಷ್ಟು ಚೆನ್ನಾಗಿದೆ. ಈ ಹುಡುಗರು ಈ ಚಿಕ್ಕವಯಸ್ಸಿನಲೇ ಎಷ್ಟು ದೇವರು-ದಿಂಡರು ಪೂಜೆ ಪುನಸ್ಕಾರ
ಮೊದಲಾದವುಗಳನ್ನು ಶ್ರದ್ಧೆಯಿಂದ ಮಾಡುತ್ತಿರುವರಲ್ಲಾ’ ಎಂದು ಕುತ್ಕವಾಗಿ ಹೇಳಿ ಬೆನ್ನು ತಟ್ಟಿದಾಗ ನಮ್ಮನ ಮುಖ ಹಿರಿದು ಹಿಗ್ಗಿ ಕಣ್ಣಿನಲ್ಲಿ ಆನಂದ ಬಾಷ್ಪಗಳು
ಹೊರಹೊಮ್ಮುತ್ತಿದ್ದವು. ನಮಗೆ ಏನೋದೊಡ್ಡ ಕಾರ್ಯವನ್ನು ಮಾಡಿದಷ್ಟು ಹೆಮ್ಮೆ ಯಾಗುತ್ತಿತ್ತು. ಆದರೆ, ಕ್ರಮೇಣ ಇದು ಎಷ್ಟುದೊಡ್ಡ ಸಮಸ್ಯೆ ಸೃಷ್ಟಿಸಿತು
ಎನ್ನುವುದು ನಮಗೆ ಗೊತ್ತಾಗಿದ್ದು ನಂತರವೇ ! ಡಿಯಲ್ಲಿ ರಾಮನವಮಿಯ ದಿನ ಬೇಲದ ಹಣ್ಣಿನಬೆಲ್ಲ ಬೆರೆಸಿದ ಪಾನಕ, ಕಡ್ಲೆ ಬೇಳೆ ಕೋಸುಂಬರಿ, ಇಲ್ಲವೇ ಗುಗ್ಗುರಿ ಇರುತ್ತಿತ್ತು. ಮಂಗಳಾರತಿ ಮುಗಿದಮೇಲೆ
ಮಾರನೆಯ ದಿನದ ಸೇವಾರ್ಥಿಗಳ ಹೆಸರನ್ನು ಘೊಶಿಸುತ್ತಿದ್ದರು. ಅದನ್ನು ಕೇಳಿಸಿಕೊಂದ ನಂತರವೇ ನಾವು ಮನೆಗೆ ಹಿಂದಿರುಗುತ್ತಿದ್ದದು. ಚರುಪಿನ ಕಲ್ಪನೆ
ಮಾಡಿಕೊಂದು ಮನಸ್ಸಿನಲ್ಲೇ ಆನಂದಿಸುತ್ತಿದ್ದೆವು. ಭೀಮರಾಯರು, ಗೋಪಾಲರಾಯರು, ಸೇತೂರಾಮಯ್ಯನವರು, ಗಡ್ಡದ ಜೈಯಣ್ಣನವರು, ಗೋವಿಂದರಾಯರು,
ಛಾಯಪ್ಪನವರು, ಶೇಶಾಚಲಯ್ಯನವರು, ಕ್ಷೇತ್ರಫಾಲಯ್ಯ, ವಾಸಣ್ಣನವರು ಇತ್ಯಾದಿ. ಸೇತಣ್ಣನವರ ಸೇವಾರ್ಥದ ದಿನ ಭರ್ಜರಿ ಸಜ್ಜಿಗೆ ಕೋಸುಂಬರಿ ಮತ್ತು
ಯಾಲಕ್ಕಿ ಬೆರೆಸಿದ ಘಂ ಎಂದು ಸುವಾಸನೆ ಬೀರುವ ನಿಂಬೆ ಹಣ್ಣಿನ ಪಾನಕ ಇರುತ್ತಿತ್ತು.

ಕಗ್ಗತ್ತಲಲ್ಲಿ ಹಾವು ಚೇಳುಗಳ ಭೀತಿಯ ಮಧ್ಯೆ ಮನೆ ತಲುಪಿದ ಮೇಲೆ ಜೀವ ಬಂದಂತಾಗುತ್ತಿತ್ತು. ಅಷ್ಟು ಹೊತ್ತಿಗೆ ಅಪ್ಪ ಲಾಟೀನ್ ಹಿಡಿದು ನಮ್ಮ ವಠಾರದ
ಬಾಗಿಲಿನಲ್ಲಿ ನಿಂತಿರುತ್ತಿದ್ದರು. ಆ ಸ್ವಾಗತ ನಮಗೆ ಅತ್ಯಂತ ಮುದತರುವ ಆಗಿತ್ತು. ರೆಡ್ ಕಾರ್ಪೆಟ್ ಗಿಂತಾ ಮಿಗಿಲಾದದ್ದು.ನಾನು ಆಗ ೭ ವರ್ಷದವನು, ನನ್ನ
ತಮ್ಮ ಚಂದ್ರ ನನಗಿಂತ ೨ ವರ್ಷ ಚಿಕ್ಕವನು ನಾವಿಬ್ಬರೂ ಸುಮಾರು ೧೮ ವರ್ಷನಮ್ಮ ಸುಂಕದವರ ವಠಾರವೆಂದು ಹೆಸರಾಗಿದ ಶ್ಯಾನುಭೋಗರ ವಂಶದ ೪
ಪೀಳಿಗೆಯಿಂದ ನಮ್ಮ ಅಜ್ಜ ಮುತ್ತಜ್ಜಂದಿರು ಬದುಕಿ ಬಾಳಿ, ಮುಂಜಿ, ಮದುವೆ, ಮೊದಲಾದ ಕಾರ್ಯಗಳನ್ನು ನಡೆಸಿ ವಾಸವಾಗಿದ್ದ ಮನೆಯದು. ನಮ್ಮದು,
ಹಾಗೂ ನಮ್ಮ ಚಿಕ್ಕಪ್ಪನ ಮನೆಯ ಪಡಸಾಲೆ ಚಚ್ಚೌಕಾರವಾಗಿದ್ದುದರಿಂದ ಅವನ್ನು ತೊಟ್ಟಿಮನೆಯೆಂದು ಕರೆಯಲಾಗುತ್ತಿತ್ತು.ಅಂಗಳದಲ್ಲಿ ಒಂದು ಚಿಕ್ಕ ಮೂತಿಯ ಉಪ್ಪುನೀರಿನ ಆಳವಾದ ನೀರಿನ ಭಾವಿ ಇತ್ತು. ಅದರ ನೀರನ್ನು
ಪಾತ್ರೆತೊಳೆಯಲು, ಸ್ನಾನಕ್ಕೆ ಹಾಗೂ ಕೈಕಾಲುತೊಳೆಯಲು ಮಾತ್ರ ಬಳಕೆಮಾಡುತ್ತಿದ್ದರು. ಆಗಿನಕಾಲದಲ್ಲಿ ಮನೆಯ ಹತ್ತಿರ ಪಾಯಿಖಾನೆ ಕಟ್ಟಿಸುವ ಬಗ್ಗೆ ಯಾರೂ
ಉಸುರೆತ್ತುವಹಾಗಿರಲಿಲ್ಲ. ಬೆಳಗಾದರೆ, ಹಳ್ಳಿಯ ಜನರೆಲ್ಲಾ ಕೆರೆಯಂಗಳಕ್ಕೆ ತಂಬಿಗೆ ತೊಗೊಂಡು ಹೋಗುತ್ತಿದ್ದರು. ಬೆಂಗಳೂರಿನಲ್ಲಿ ಹೋದಾಗ ಆತರಹ
ಪದವನ್ನು ಬಳಸಿದಾಗ ನಮ್ಮ ಸೋದರಮಾವ ಜೋರಾಗಿ ನಕ್ಕಿದ್ದರು. ಇನ್ನು ಕೆಲವರು ತಮಾಷೆ ಮಾಡಿದ್ದರು. ಮನೆಯಲ್ಲಿ ಬೇನೆಯಿಂದ ನರಳುತ್ತಿದ್ದವರೂ
ಹೇಗೋ ರಾತ್ರಿಯ ಕಾರ್ಗತ್ತಲಿನಲ್ಲಿ ಚರಂಡಿಯ ಬದಿಯಲ್ಲೇ ಹಹಿರ್ದೆಶೆಗೆ ಹೋಗುತ್ತಿದ್ದರೇ ವಿನಃ ಮನೆಯಹತ್ತಿರ ಒಂದು ಪಾಯಿಖಾನೆಮನೆ ಕಟ್ಟಿಸಿ ಎಂದು ತಮ್ಮ
ಗಂಡಂದಿರಿಗೆ ಬೇಡಿಕೆ ಸಲ್ಲಿಸುತ್ತಿರಲಿಲ್ಲ. ಹಾಗೆ ಮಾತಾಡುವುದು ಅನಾಗರಿಕವೆಂದು ಎಲ್ಲರ ವಾದ. ಹಳ್ಳಿಯಲ್ಲಿ ಎಷ್ಟೋ ಜನರ ಮನೆಯಲ್ಲಿ ಒಳ್ಳೆಯ ಸೀಮೇಯೆಣ್ಣೆ
ದೀಪವಿರಲಿಲ್ಲ. ವಿದ್ಯುತ್ ದೀಪಗಳು ಬಂದಿದ್ದು ೧೯೫೬-೫೭ ರಲ್ಲಿ. ನಮ್ಮ ಮನೆಗೆ ಬಹುಶಃ ೧೯೬೦ ರ ಹೊತ್ತಿಗೆ. ಅಲ್ಲೊಂದು ಇಲ್ಲೊಂದು ಮೂಲೆಯಲ್ಲಿ ೨೫
ವ್ಯಾಟ್ಸ್ ಬಲ್ಬಿನ ಮಂಕು ದೀಪ, ಒಂದು ಕಲ್ಲು - ಕಂಭದಮೇಲೆ ಇರುತ್ತಿತ್ತು. ಆ ಬೆಳಕಿನಲ್ಲಿ ಎನೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕುಡಿಯುವ ನೀರಿಗೆ ನಾವು
ಪೇಟೆಯ ಭಾವಿಯನ್ನು ಅವಲಂಭಿಸಿದ್ದೆವು. ಅದರ ನೀರು ತಣ್ಣಗೆ ಸಿಹಿಯಾಗಿರುತ್ತಿತ್ತು. ಆದರೆ ನೀರು ಪಾತಾಳದಲ್ಲಿರುತ್ತಿತ್ತು. ಜಲ ಬಂದಹಾಗೆ ನೀರು ಪಕ್ಕದಲ್ಲಿ
ಹರಡಿಕೊಳ್ಳುತ್ತಿತ್ತು.

ಇಟ್ಟಿಗೆ ತುಂಡುಗಳು, ಕಲ್ಲುಗಳು ಧಂಡಿಯಾಗಿ ಅಲ್ಲಿಬಿದ್ದಿರುತ್ತಿದ್ದವು. ನಾವಿಬ್ಬರೂ ಅವುಗಳನ್ನು ತಂದು ಭಾವಿಯ ಹಿಂದಿನ ಗೋಡೆಗೆ ತಾಗಿಸಿದಂತೆ ಚಿಕ್ಕ
ಗುಡಿಕಟ್ಟುತ್ತಿದೆವು. ನಮ್ಮಣ್ ಣನಸಹಾಯಪಡೆದು ಒಂದು ಚಪ್ಪಡಿಕಲ್ಲನ್ನು ತಂದು ಅದರಮೇಲೆ ಇಡಿಸುತ್ತಿದ್ದೆವು. ಅದೊಂದು ದೇವರಗುಡಿ ಎಂದು ನಾವು ಹೇಳಿದಾಗ
ಎಲ್ಲರೂ ಮುಸಿಮುಸಿ ನಗುತ್ತಿದ್ದರೇ ವಿನಃ ಅದರ ನ್ಯೂನತೆಗಳನ್ನು ಅಪ್ಪಿತಪ್ಪಿ ಹೊರಗೆಡಹುತ್ತಿರಲಿಲ್ಲ.ಮುಂಭಾಗದಲ್ಲಿ ಅಪ್ಪ ಅಮ್ಮ ಕೊಡಕಟ್ಟಿ ಭಾವಿಯೊಳಗೆ
ಬಿಡುತ್ತಿದ್ದರು. ನಂತರ ಜೋಡಿಯಾಗಿ ನೀರು ಸೇದುವುದು ರೂಢಿಯಲ್ಲಿತ್ತು. ಅಪ್ಪ-ಅಮ್ಮ, ಅಮ್ಮ-ಅಣ್ಣ, ಅಥವಾ ಅಪ್ಪ-ಅಣ್ಣ ಹೀಗೆ ಜೋಡಿಯಾಗಿ ಸೇದುತ್ತಿದ್ದರು.
ಒಬ್ಬರೇ ಸೇದುವುದು ಸ್ವಲ್ಪ ತ್ರಾಸಿನ ಕೆಲ್ಸವಾಗಿತ್ತು. ನೀರಿನ ಮೇಲೆ ಬಿದ್ದಾಗ ’ಧಪ್’ ಎಂಬ ಶಬ್ದಕೇಳಿಸುತ್ತಿತ್ತು. ಆಮೇಲೆ ಕೊಡದಲ್ಲಿ ನೀರುನಿಧಾನವಾಗಿ
ತುಂಬಿಕೊಳ್ಳುತ್ತಿತ್ತು. ಆಗಿನ ಶಬ್ದ ಗಡಗಡ ಈಗ ಸ್ವಲ್ಪ ಹಗ್ಗವನ್ನು ಜಗ್ಗಿ ಮೇಲೆತ್ತಿ ನೀರು ಎಳೆಯಲು ಪ್ರಾರಂಬಿಸುತ್ತಿದ್ದರು. ನನ್ನ ತಮ್ಮ ಚಂದ್ರ, ಭಾವಿಯ ಹಿಂದೆ,
ನಾವುಕಟ್ಟಿದ್ದ ಗುಡಿಯ ಮೇಲೆ ಕಾಲಿಟ್ಟು ಮೆಟ್ಟುಕಾಲು ಹಾಕುತ್ತಾ ತನ್ನ ತಲೆಯನ್ನು ಭಾವಿಯ ಒಳಗೆ ಹಾಕಿ ಬಗ್ಗಿನೋಡುತ್ತಿದ್ದದ್ದು ಯಾರ ಗಮನಕ್ಕೂ
ಬರದೆಹೋಯಿತು.

ಅದರಲ್ಲೂ ತುಂಬಿದ ಕೊಡ ನಿಧಾನವಾಗಿ ಭಾವಿಯೊಳಗಿನ ಅಕ್ಕ ಪಕ್ಕದ ಕಲ್ಲಿನ ಗೋಡೆಗೆ ಇನ್ನೇನು ತಗುಲಿತೋಎನ್ನುವಂತೆ ಹಂತ ಹಂತವಾಗಿ ಮೇಲೇರುವ
ನೋಟ ಕಂಡಾಗ ಅವನು ಎರಡು ಕೈಸೇರಿಸಿ ಚಪ್ಪಾಳೆ ತಟ್ಟುವ ಪ್ರಯತ್ನ ಮಾಡುತ್ತಿದ್ದ. ‘ಕೊಡಮೇಲೆ ಬಂತು’, ಎಂದು ಸಂಭ್ರಮದಲ್ಲಿ ಅನಾಮತ್
ಭಾಯಿಯೊಳಗೆ ನುಸುಳಿದ ಸನ್ನಿವೇಶ ಅಲ್ಲೇ ಹತ್ತಿರದಲ್ಲಿ ಆಟಆಡುತ್ತಿದ್ದ ನನ್ನ ಕಣ್ಣಿಗೆ ಬಿದ್ದು, ನಾನು ಗಾಭರಿಯಿಂದ ಕೂಗಿಕೊಂಡೆ. ಆಗ ಕೂಡಲೇ ನಮ್ಮಣ್ಣ
ಎಚ್ಚರಗೊಂಡು ತಮ್ಮ ಎಡಗೈ ಚಾಚಿ ಅಮಾಮತ್ ಆಗಿ ಅವನನ್ನು ಬಿಗಿಯಾಗಿ ಹಿಡಿದ. ಗಾಭರಿಯಿಂದ ಅಮ್ಮ ಹಗ್ಗವನ್ನು ಕೈಬಿಟ್ಟರು. ತುಂಬಿದ ಕೊಡ ರಭಸದಿಂದ
ರೊಯ್ಯನೆ ಭಾವಿಯೊಳಗ ಸಾಗಿ ನೀರಿನಮೇಲೆ ಬಿದ್ದಾಗ ಎಂಬ ಸ್ಫೋಟದ ಶಬ್ದವನ್ನು ನಾವು ಆಲಿಸಿದೆವು. ಹಗ್ಗ ಉಳಿದ ಭಾಗ ರೊಯ್ ಎಂದು ಹಾವಿನ ಹರಿದಾತದ ತರಹ ಭಾವಿಯೊಳಗೆ ಹೊರಟುಹೋಯಿತು. ಅಮ್ಮ
ಆಕಡೆ ಹೋಗಿ ಮಗುವಿನ ಕೈಗಳೆರಡನ್ನೂ ಭದ್ರವಾಗಿ ಹಿಡಿದು ಭಾವಿಯಿಂದ ಮೇಲಕ್ಕೆತ್ತಿದರು. ತಮ್ಮನಾದರೋ ಗಾಭರಿಯಿಂದ ಕಿಟಾರನೆ ಕಿರುಚುತ್ತಾ ಅಳುತ್ತಿದ್ದ
ರೀತಿ ನಮ್ಮನ್ನು ಹುಚ್ಚರ್ನ್ನಾಗಿಮಾಡಿತು. ನನಗೆ ಏನೂ ತೋಚದೆ ಒಂದೇ ಸಮನೆ ಬಿಕ್ಕಿಬಿಕ್ಕಿ ಅತ್ತೆ. ಅಮ್ಮ ಮಗುವನ್ನು ಎತ್ತಿಕೊಂಡು
ಕ್ಕೆ ಅಡ್ಡಬಿದ್ದು, ತುಪ್ಪದದೀಪಹಚ್ಚಿದರು. ನಮ್ಮ ಅಣ್ಣನಿಗೆ ಈ ಆಕಸ್ಮಿಕಘಟನೆ ಒಂದು ಕನಸಿನಂತೆ ಭಾಸವಾಗಿತ್ತು. ಅವನು ಇನ್ನೂ ನಡುಗುತ್ತಿದ್ದ. ಮುಖದಮೇಲೆ
ಬೆವರಿನ ಹನಿಗಳು ಇದ್ದು ನಿಸ್ತೇಜವಾಗಿತ್ತು. ಎಲ್ಲಕ್ಕಿಂತಾ ಹೆಚ್ಚಾಗಿ ಒಂದುವೇಳೆ ಮಗುವಿನ ಕೈ ಸಿಕ್ಕದೆ ಕಳಚುಕೊಂಡಿದ್ದರೆ ಗತಿಯೇನಾಗುತ್ತಿತ್ತು ಎನ್ನುವ ವಿಚಾರ
ಅವರೆಲ್ಲರ ತಲೆಯಲ್ಲಿ ಹುಳದಂತೆ ಕೊರೆದು ಸ್ವಲ್ಪಕಾಲ ಸ್ಥಬ್ದರಾದರು. ಅಣ್ಣ ಚಂದ್ರನನ್ನು ಅವುಚಿಕೊಂಡು ಎದೆಗೆ ಒತ್ತಿಕೊಂಡು ಒಂದೇ ಸಮನೆ ಅತ್ತ. ಅಣ್ಣ,
ಅಮ್ಮ,ಚಂದ್ರ, ಒಟ್ಟಿಗೆ ಗಣಪತಿ ಗುಡಿಗೆಹೋಗಿ ಕಾಯಿಒಡೆದು ಮಂಗಳಾರತಿ ಮಾಡಿದೆವು. ಗಣಪತಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಹಲವು
ತಿಪ್ಪೆಗುಂಡಿಗಳು, ಹಾವು ಹುಳ-ಹುಪ್ಪಟೆಗಳು ಸಾಮಾನ್ಯ. ಕೈನಲ್ಲಿ ಲಾಂದ್ರದ ದೀಪ ಹಿಡಿದು ಹೋಗಬೇಕು. ಬಹುಶಃ ಅಪ್ಪ ಇನ್ನೂ ಅವರ ಆಫೀಸ್ ನಿಂದ ಮನೆಗೆ ಬಂದಿರಲಿಲ್ಲ. ನಾವು
ಗುಡಿಯಿಂದ ಬರುವಹೊತ್ತಿಗೆ ಅವರು ಮನೆಗೆ ಬಂದು, ಕೈಕಾಲು-ಮುಖ ತೊಳೆದು ತಮ್ಮ ಕೋಣೆಯಲ್ಲಿ ಕೂತಿದ್ದರು. ಅವರಿಗೆ ವಿಷಯ ತಿಳಿದಾಗ ಬಹಳ
ಗಾಬರಿಗೊಂಡರೂ ಅದನ್ನು ಮುಖದಲ್ಲಿ ನಮಗೆ ತೋರಿಸದೆ ಚಂದ್ರನನ್ನು ಎತ್ತಿ ಮುದ್ದಾಡಿ ಅಪ್ಪಿಕೊಂಡು, ಸದ್ಯ ಬಂದ ಗಂಡ ಪರಿಹಾರವಾಯಿತಲ್ಲಾ ಎಂದು
ಮನಸ್ಸಿನಲ್ಲೇ ಗುರುಗಳನ್ನು ವಂದಿಸಿದರು.

ಎಂದು ಕಾಣಿಕೆ ಹಣವನ್ನು ಮನೆಯ ದೇವರಮನೆಯಲ್ಲಿ ಕಟ್ಟಿಟ್ಟರು. ಅಪ್ಪ ಬಡಪೆಟ್ಟಿಗೂ ಎಂದೂ ಅತ್ತಿದ್ದನ್ನು ನಾನು ಕಂಡಿರಲಿಲ್ಲ. ಆದರೆ ಇಂದು ಅವರು ತಮ್ಮ
ಕರವಸ್ತ್ರದಿಂದ ಕಣ್ಣು ಒರಸಿಕೊಂಡಿದ್ದು ನಮಗೆ ಸ್ಪಷ್ಟವಾಗಿ ಕಾಣಿಸಿತು ! ಅಮ್ಮ ಅಪ್ಪ, ಚಂದ್ರ ಮತ್ತು ನಮ್ಮನ್ನು ಅಪ್ಪಿಕೊಂಡು ಕಣ್ಣೀರಿಟ್ಟಳು. ಅದೊಂದು
ಮರೆಯಲಾರದ ಕ್ಷಣವಾಗಿತ್ತು !

ಬೆಂಗಳೂರಿನಲ್ಲಿ ಇರುವ ನಮ್ಮಣ್ಣನ ಮನೆಗೆ ಹೋದಾಗಲೆಲ್ಲಾ ಈ ವಿಶಯ ಬರುತ್ತದೆ. ಈಗಲೂ ಆ ಘಟನೆ ನೆನಪಾದರೆ, ನನ್ನ ಕೈಕಾಲು ತಣ್ಣ ಗಾಗಿ
‘ಮೈಜುಂ’ ಎನ್ನುತ್ತದೆ. ಆಗ ಮತ್ತೆ ನಾವುಗಳು ಬ್ರಹ್ಮಚೈತನ್ಯ ಮಹಾರಾಜರ ಫೋಟೊಗೆ ಕೈಮುಗಿದು ನಮಸ್ಕರಿಸುತ್ತೇವೆ. ಅಮ್ಮ ೧೯೯೧ ರಲ್ಲೇ ನಮ್ಮನ್ನಗಲಿ
ಹೊರಟುಹೋದರು. ನನ್ನ ತಮ್ಮ ಚಂದ್ರ, ಅಮೆರಿಕಾದಲ್ಲಿನ ತನ್ನ ವೃತ್ತಿಜೀವನದಲ್ಲಿ ವಿಶ್ರಾಂತನಾಗಿದ್ದಾನೆ. ನಾನು ಮುಂಬೈಗೆ ಹೋಗಿ ಈಗಾಗಲೇ ೫೦
ವರ್ಷವಾಗಿದೆ. ನಿವೃತ್ತಜೀವನ ನಡೆಸುತ್ತಿದ್ದೇನೆ.

೨೦೦೮ ರಲ್ಲಿ ನಾನು ನನ್ನ ಹೆಂಡತಿ ಅಮೆರಿಕದಲ್ಲಿ ನನ್ನ ತಮ್ಮ ಚಂದ್ರನ ಮನೆಗೆ ಹೋದಾಗ,ಈ ಪ್ರಸಂಗವನ್ನು ನೆನೆಸಿಕೊಂಡು ನಕ್ಕೆವು. ಆದರೆ ನಗು
ಮುಗಿದಾಗ ನಿಜಕ್ಕೂ ನಬ್ಬಿಬ್ಬರ ಕಣ್ಣುಗಳು ಒದ್ದೆಯಾದವು. ಅಣ್ಣ ಬೆಂಗಳೂರಿನಲ್ಲಿದ್ದಾನೆ. ಅಮ್ಮ ಈ ಲೋಕದಲ್ಲೇ ಇಲ್ಲ. ನಮ್ಮ ಮತ್ತೊಬ್ಬ ಅಣ್ಣ ಈ ಘಟನೆ
ನಡೆದಾಗ ಹೊಳಲ್ಕೆರೆಯಲ್ಲಿರದೆ ಚಿತ್ರದುರ್ಗದಲ್ಲಿದ್ದ. ಅವನಿಗೆ ನಂತರ ವಿವರಗಳು ತಿಳಿದವು. ತಮ್ಮನ ಮಕ್ಕಳು ಆಶ್ಚರ್ಯದಿಂದ, “ಏಕೆ ಹಾಗಾಯಿತು. ಸೇಫ್ಟಿ
ಮೆಶರ್ಸ್ ಬಗ್ಗೆ ನೀವು ಕಾಳಜಿ ವಹಿಸಿರಲಿಲ್ಲವಾ ‘, ಎಂದು ಕೇಳಿದಾಗ ನಮಗೆ ಉತ್ತರ ಕೊಡುವುದು ಬಹಳ ಕಷ್ಟವಾಗಿತೋರಿ, ನಮ್ಮ ಮಾತಿನ ಸರಣಿಯನ್ನು
’ಹ್ಯಾರಿ ಪಾಟರ್ಸ್ ಕಥೆ’ ಯ ಕಡೆಗೆ ತಿರುಗಿಸಿದೆವು ! ನನ್ನ ತಮ್ಮ ಚಂದ್ರನ ಮನೆಯ ಹತ್ತಿರ ವಿದ್ಧ ‘ಶಾಂತಿ ಮಂದಿರ ಹಿಂದೂ ದೇವಾಲಯಕ್ಕೆ ಹೋಗಿ, ಅಲ್ಲಿನ
ಗಣಪತಿಗೆ ಕಾಯಿ ಒಡೆಸಿ ಮಂಗಳಾರತಿ ಮಾಡಿಸಿದೆವು.

-hrlv



 

Comments

Submitted by venkatesh Thu, 05/09/2013 - 16:32

ಬಾಲ್ಯದ ಸಮಯದಲ್ಲಿ ನಾವು ಎಲ್ಲಕ್ಕೂ ತಂದೆತಾಯಿ ಮತ್ತು ಅಣ್ಣಂದಿರು, ಮತ್ತು ಹಿರಿಯರನ್ನು ಅವಲಂಭಿಸಿದ್ದೆವು. ಆಗ ಹಲವುಬಾರಿ ಯಾವಾಗ ದೊಡ್ಡವನಾಗ್ತಿನಪ್ಪ ಅನ್ನಸ್ಟಿತ್ತು. ಒಟ್ಟಿನಲ್ಲಿ ಯಾವ ಲೇಖಕ, ಲೇಖಕಿ, ಕವಿ, ರಾಷ್ಟ್ರನಾಯಕ, ಇಲ್ಲವೇ ಕ್ರೀಡಾಪಟುಗಳನ್ನು ಕೇಳಿದಾಗ ಹೌದು ಬಾಲ್ಯದಲ್ಲಿ ಚೆನ್ನಾಗಿತ್ತು ಅನ್ನುತ್ತಾರೆ. ಆದ್ರೆ ಒಂದು ಕ್ರಿಕೆಟ್ ಬ್ಯಾಟ್ ಕೇಳಿದಾಗ, ಈಗ್ಯಾಕಪ್ಪಾ, ದೊಡ್ಡೊನಾಗು ಆದುವೆಯಂತೆ, ಅಂದಾಗ ನಿಜಕ್ಕೂ ಬೇಸರ ಆಗದೆ ಇರಾತ್ಯೇ ?!
Submitted by kavinagaraj Fri, 05/10/2013 - 15:31

In reply to by venkatesh

ಭಾವಪರವಶಗೊಳಿಸುವ ಘಟನೆಯೊಂದಿಗೆ ನಿರೂಪಿಸಿದ ರೀತಿ ಚೆನ್ನಾಗಿದೆ. ಮಗುವನ್ನು ಉಳಿಸಲು ಹೋಗಿ ತಾಯಿಯೇ ಪ್ರಾಣ ತೆತ್ತ ಘಟನೆಗಳೂ ಇವೆ. ಧನ್ಯವಾದಗಳು.
Submitted by venkatesh Fri, 05/10/2013 - 16:08

In reply to by kavinagaraj

ಕವಿ ನಾಗರಾಜರಿಗೆ ನಮಸ್ಕಾರಗಳು. ನೀವು ಹೇಳಿದಂತೆ, ತೋಟದಭಾವಿಯಲ್ಲಿ ಬಟ್ಟೆ ಒಗೆಯಲು ಹೋದಾಗ ಚಿಕ್ಕ ಹುಡುಗನನ್ನು ಉಳಿಸಲು ಹೋಗಿ ಅವನ ತಂದೆ ನಿರುಪಾಲಾಗಿದ್ದದ್ದನ್ನು ನಮ್ಮ ಉರಿನ ಜನ ಮಾತಾಡಿಕೊಳ್ಳುತ್ತಿದ್ದ ಸಂಗತಿ ನನಗೆ ಈಗಲೂ ನೆನೆಪಿದೆ. ನೆನೆಪಿದೆ. ಇಲ್ಲಿ ಅನಾಹುತದಿಂದ ಬಚಾವಾದದ್ದು ಈ ಕಾರಣಗಳಿಂದಾಗಿ : 1. ಭಾವಿಯ ಮೂತಿ ಚಿಕ್ಕದು. ಪ್ರಯತ್ನಮಾಡಿ ಕೈ ಚಾಚಿದರೆ ಆ ಕಡೆಯ ಭಾವಿಯ ಕಲ್ಲು ಸಿಗುತ್ತಿತ್ತು. ಅದರಿಂದಲೇ ನನ್ನ ತಮ್ಮ ದೇವರದಯದಿಂದ ಉಳಿದದ್ದು. 2. ಭಾವಿಯಲ್ಲಿ ಮೇಲಕ್ಕೆ ಬರುತ್ತಿದ್ದ ತುಂಬಿದ ಕೊಡ ಇನ್ನೇನು ಕಲ್ಲಿನ ಮೇಲೆ ಇಳಿಸಿಕೊಳ್ಳುವ ಹಂತದಲ್ಲಿ ಬಂದಾಗ, ಹುಡುಗ ಬಗ್ಗಿ ನೋಡಿ ಅನಾಮತ್ ಆಯ ತಪ್ಪಿ ಬಿದ್ದಿದ್ದರೆ, ಕೊಡ ಆಡ್ಡ ಬರುತ್ತಿತ್ತು. ಮಗುವನ್ನು ಹಿಡಿಯಲು ಖಂಡಿತ ಅಡಚಣೆ ಆಗುತ್ತಿತ್ತು. ಗೊಂದಲದ ಸ್ಥಿತಿಯಲ್ಲಿ ಏನಾಗುತ್ತಿದ್ದೋ ದೇವರೇ ಬಲ್ಲ ! ಒಟ್ಟಿನಲ್ಲಿ ದೇವರ ದಯೆ, ನಮ್ಮ ಕೈಲಿ ಏನಿದೆ ಹೇಳಿ ? ಬೆಟ್ಟದ ಹಾಗೆ ಬಂದದ್ದು ಹೂವಿನ ಹಾಗೆ ಕೊನೆಗೊಂಡಿತು.
Submitted by venkatesh Fri, 05/10/2013 - 18:00

In reply to by venkatesh

ಭಾವಿಯ ಚಿತ್ರವನ್ನು ನಾನು ಇತ್ತೀಚೆಗೆ ಉರಿಗೆ ಹೋದಾಗ ಸೆರೆಹಿಡಿದಿದ್ದೆ. ಗಮ್ಮತ್ತೆಂದರೆ, ನೀರು ಮೇಲಕ್ಕೆ ಬಂದಿದೆ. ಸಿಹಿನೀರು ಭಾವಿಯಲ್ಲಿ ಸಿಗುತ್ತಿದೆಯಂತೆ. ಅಬ್ಬಾ ನಮ್ಮ ವಠಾರದ ಜನ ಅದೆಷ್ಟು ಕಷ್ಟಪಟ್ಟರು. ಬಾಯಿನಲ್ಲಿ ಹಾಕದಾಸ್ಟು ಉಪ್ಪುನೀರು ಆಗ. ಈಗ ಸೂಳೆಕೆರೆ ನೀರು (ಶಾಂತಸಾಗರ) ಚಿತ್ರದುರ್ಗಕ್ಕೆ ಸರಬರಾಜು ಆಗುತ್ತಿದೆ. ನಮ್ಮ ಉರಿಗೆ ಬಂದಿದೆ. ಅದನ್ನು ನೋಡಿ ಬಂದೆ.
Submitted by nageshamysore Fri, 05/10/2013 - 18:15

ವೆಂಕಟೇಶ ರವರಿಗೆ, ಅಷ್ಟು ಹಳೆಯ ನೆನಪನ್ನ ನಿನ್ನೆಯೊ, ಮೊನ್ನೆಯೊ ನಡೆದ ಘಟನೆ ಬರೆಯೊ ಹಾಗೆ ನೆನಪಿನಂಗಳದಿಂದ ಹೆಕ್ಕಿ ಚೊಕ್ಕವಾಗಿ ಜೋಡಿಸಿಕೊಟ್ಟಿದ್ದಿರಲ್ಲಾ ಸಾರ್..ನಿಮ್ಮ ಜತೆಗೆ ಆ ಊರು, ಮನೆಗೆಹೋಗಿ ಬಂದಂತೆ ಅನುಭೂತಿಯಾಯ್ತು. ಧನ್ಯವಾದಗಳು, -ನಾಗೇಶ ಮೈಸೂರು, ಸಿಂಗಾಪುರದಿಂದ
Submitted by venkatesh Sat, 05/11/2013 - 06:56

In reply to by nageshamysore

ನಾಗೇಶ್ ಸರ್, ನೀವು ಹೇಳುತ್ತಿರುವುದು ನಿಜ. ನನ್ನ ಬಗ್ಗೆ ಹೇಳುವುದಾದರೆ, ನನ್ನ ಹೈಸ್ಕೂಲ್ ಜೀವನ, ಹೊಳಲ್ಕೆರೆಯಲ್ಲಿ ಕಳೆದ ಪ್ರತಿಯೊಂದು ಸಂಗತಿಗಳು ಇಂದಿಗೂ ನನ್ನ ತಲೆಯಲ್ಲಿ ಮುದ್ರಿತವಾಗಿವೆ. ಬಹುಶಃ ಯಾವುದನ್ನು ನಾವು ಗಾಡವಾಗಿ ಪ್ರೀತಿಸುತ್ತೇವೋ ಅವು ಬಹಳ ಕಾಲ ನಮ್ಮ ಸ್ಮ್ಮತಿ ಪತಲದಲ್ಲಿ ದಾಖಲಾಗುತ್ತದೆ. ನಮ್ಮ ಹೈಸ್ಕೂಲಿನ ಮೇಸ್ಟ್ರುಗಳ ಬೈಯುತ್ತಿದ್ದ ವರಸೆ, ಬೆಂಚಿನ ಮೇಲೆ ನಿಲ್ಲಿಸುತ್ತಿದ್ದದ್ದು. ಕೈಗೆ ದೊಡ್ಡ ರೂಲ್ ದೊಣ್ಣೆಯ ಏಟು ಹಾಕುತ್ತಿದ್ದದ್ದು ಇತ್ಯಾದಿ. ದೇವರದಾಯದಿಂದ ನಾವು ಎಂದೂ ಅಂತಹ ಶಿಕ್ಷೆಗೆ ಒಳಗಾದವರಲ್ಲ. ಹಾಲಿನ ಬೊರವ್ವ, ಅವಳ ಮಗಳು ಸೂರವ್ವ ಪ್ರತಿದಿನ ತಲೆಯ ಮೇಲೆ ಬುಟ್ಟಿ ಇಟ್ಟುಕೊಂಡು ಮನೆಗೆ ಬಂದು ಹಾಲು ಕೊಡುತ್ತಿದ್ದರು. ಮೊಸರು ಹಾಕುವಾಗ ನಾನು ನನ್ನ ತಮ್ಮ ಬೊರವ್ವನ ಹತ್ತಿರ ಕೂತು ಬೊರವ್ವ ಕೈಗೆ ಕೊಸರು ಹಾಕು ಎಂದು ಮೊಸರನ್ನು ಹಾಕಿಸಿಕೊಂಡು ತಿನ್ನುತ್ತಿದ್ದ ದೃಶ್ಯ ಇಂದಿಗೂ ಹಚ್ಚ ಹಸುರಾಗಿದೆ....