ಬಾಳಿಗೊಂದು ಚಿಂತನೆ - 20

ಬಾಳಿಗೊಂದು ಚಿಂತನೆ - 20

ನದಿಯನ್ನು ನಾವೆಯ ಮೂಲಕ ದಾಟಿಸಿದ ಅಂಬಿಗನಿಗೆ ನಾವು ಶುಲ್ಕವನ್ನು ಕೊಡುತ್ತೇವೆ. ಅದು ಅವನ ಜೀವನಕ್ಕಾಗಿರುವ ಉದ್ಯೋಗವಾಗಿದೆ. ಇಲ್ಲಿ *ಸದ್ಗುರು*ಎನಿಸಿಕೊಂಡವರು ತಾವು ಭವಸಾಗರವನ್ನು ದಾಟಿದ ಮೇಲೆ, ಮತ್ತೊಬ್ಬರನ್ನು ದಾಟಿಸಲು ಏನನ್ನೂ ಅಪೇಕ್ಷೆ ಪಡಲಾರರು.*ಪರೋಪಕಾರಾಯ ಬಲಂ ಮನಃ*ಎಂಬಂತೆ ಅವರ ಉದ್ದೇಶ ಪರೋಪಕಾರ ಮಾತ್ರ.

ವಸಂತವಲ್ಲೋಕ ಹಿತಂ ಚರಂತಃ-- ವಸಂತ ಋತು ಬಂದಾಗ ಪ್ರಕೃತಿಯಲ್ಲಿ ಎಲ್ಲೆಲ್ಲೂ ಚಿಗುರು,ಹಸಿರು,ಯಾವ ಫಲಾಪೇಕ್ಷೆಯಿಲ್ಲದೆ ,ತನ್ನ ಸಹಜ ಸ್ವಭಾವ, ಕರ್ತವ್ಯ ಎಂಬಂತೆ ಜಗತ್ತಿಗೆ ಆನಂದ ನೀಡುತ್ತದೆ. ಸತ್ಪುರುಷರ ಸ್ವಭಾವ ಸಹ ಹಾಗೇ ಇರುತ್ತದೆ ಪ್ರತಿಫಲಾಪೇಕ್ಷೆಯಿಲ್ಲದೆ  ತಮ್ಮಲ್ಲಿರುವ ಜ್ಞಾನವನ್ನು ಉಣಬಡಿಸುತ್ತಾರೆ.

***

ಸುಭಾಷಿತ

ದೃಷ್ಟಾಂತೋನೈವದೃಷ್ಟಃ ತ್ರಿಭುವನಜಠರೇ ಸದ್ಗುರೋಜ್ಞಾರ್ನದಾತುಃ ಸ್ಪರ್ಶಶ್ಚೇತ್ತತ್ರಕಲ್ಪ್ಯಃ ಸ ನಯತಿ ಯದಹೋ ಸ್ವರ್ಣತಾಮಶ್ಮಸಾರಮ್/

ನ ಸ್ಪರ್ಶತ್ವಂ ತಥಾಪಿ ಶ್ರಿತಚರಣಯುಗೇ ಸದ್ಗುರೋಸ್ಸ್ವೀಯ ಶಿಷ್ಯೇ ಸ್ವೀಯಂ ಸಾಮ್ಯಂ ವಿಧತ್ತೇ ಭವತಿ ನಿರುಪಮಃ ತೇನ ವಾ ಲೌಕಿಕೋಪಿ//

ಶತಶ್ಲೋಕೀ ಹೇಳುವದು ಒಂದು ಪ್ರಕರಣ ಗ್ರಂಥ. ಅದರಲ್ಲಿಪ್ಪ ಈ ಶ್ಲೋಕಲ್ಲಿ 'ಮೂರು ಲೋಕಲ್ಲಿಯೂ ಜ್ಞಾನವ ನೀಡುವ ಸದ್ಗುರುವಿಂಗೆ ದೃಷ್ಟಾಂತವಾಗಿ ಹೋಲಿಕೆ ಮಾಡುವ ಯಾವುದೇ ವಸ್ತು ಆಗಲಿ, ವಿಷಯ ಆಗಲಿ ಇಲ್ಲೆ. ಒಂದು ವೇಳೆ ಸ್ಪರ್ಶಮಣಿಯ ನಾವು ಕಲ್ಪಿಸಿರೆ, ಅದು. ತನ್ನ ಸಂಪರ್ಕ ಅಥವಾ ಸಹವಾಸಕ್ಕೆ ಬಂದ ಕಬ್ಬಿಣವ ಚಿನ್ನವ ಮಾಡುಗು. ಆ ಕಬ್ಬಿಣವ ಪುನಃ ಸ್ಪರ್ಶ ಮಣಿ ಮಾಡ್ಲೆ ಎಡಿಯ. ಆದರೆ ಒಳ್ಳೆಯ ಒಬ್ಬ ಗುರು(ಸದ್ಗುರು) ತನ್ನ ನಂಬಿ ಬಂದ ಶಿಷ್ಯಂಗೆ ತನ್ನದೇ ಆದ ಸಹಜ, ಸ್ವಾಭಾವಿಕ ಸ್ಥಿತಿಲಿ ಎಲ್ಲವನ್ನೂ ಧಾರೆ ಎರವಲೆ ಸಾಧ್ಯ ಮತ್ತು ಎರೆತ್ತ ಸಹ. ಆದ ಕಾರಣ ಗುರು ಲೌಕಿಕ ವಿದ್ಯಾದಾಯಕನಾಗಿದ್ದು ಈ ಜಗತ್ತಿಲಿ ಅಪ್ರತಿಮ ಎನಿಸಿಗೊಂಡಿದವು. ಗುರು ಹೇಳುವವ ಒಬ್ಬ ಅಜ್ಞನ ಮಹಾವಿಜ್ಞನನ್ನಾಗಿ ಮಾಡುವವು.ಇಂತಹ ವಸ್ತು ಬೇರೊಂದು ಈ ಲೋಕಲ್ಲಿಪ್ಪಲೆ ಸಾಧ್ಯವಿಲ್ಲೆ.'

(ಸಂಗ್ರಹ-ಉಪದೇಶ ಸುಧಾ)

-ರತ್ನಾ ಭಟ್ ತಲಂಜೇರಿ

 ‌ಚಿತ್ರ ಕೃಪೆ: ಇಂಟರ್ನೆಟ್ ತಾಣ        ‌                                         ‌     ‌     ‌