ಬಾಳಿಗೊಂದು ಚಿಂತನೆ (23) - ಸುಭಾಷಿತ

ಬಾಳಿಗೊಂದು ಚಿಂತನೆ (23) - ಸುಭಾಷಿತ

ಸ ಸುಹೃದ್ ವ್ಯಸನೇ ಯಃ ಸ್ಯಾದ್

ಅನ್ಯಜಾತ್ಯುದ್ಭವೋಪಿ ಸನ್/

ವೃದ್ಧೌ ಸರ್ವೋಪಿ ಮಿತ್ರಂ ಸ್ಯಾತ್

ಸರ್ವೇಷಾಮೇವ ದೇಹಿನಾಮ್//

ನಾವು ತುಂಬಾ ಕಷ್ಟದಲ್ಲಿರುವಾಗ ನಮಗೆ ಯಾರು ಸಹಾಯ ಮಾಡುತ್ತಾರೋ ಅವರೇ ನಮ್ಮ ನಿಜವಾದ ಮಿತ್ರರು. ನಮ್ಮ ಹತ್ತಿರ ಬೇಕಾದಷ್ಟು ಐಶ್ವರ್ಯ, ಹಣಕಾಸು ಇದ್ದಾಗ ಎಲ್ಲರೂ ಗೌರವಿಸುತ್ತಾರೆ, ನಮ್ಮಲ್ಲಿಗೆ ಬಂದು ಹೋಗುತ್ತಾರೆ. ಐಶ್ವರ್ಯ ಕರಗಿದಾಗ, ಕಷ್ಟ ಆದಾಗ ನೀನೇ ದೇವರು ಅಂಥ ಹಾಡಿಹೊಗಳಿದವರೆಲ್ಲ ಒಬ್ಬೊಬ್ಬರಾಗಿ ದೂರವಾಗುತ್ತಾರೆ.ಆಗಲೂ ನಮ್ಮ ಜೊತೆಗಿದ್ದು, ನಾನಿದ್ದೇನೆ ಎಂದು ಹೇಳುವ ಸಹೃದಯಿಯೇ ನಿಜವಾದ ಮಿತ್ರ. ಜಾತಿ ನೀತಿ, ಭಾಷೆ, ದೇಶ, ಕಾಲ,ಗಂಡು, ಹೆಣ್ಣು, ಮತ, ಕುಲ ಯಾವುದೂ ನೋಡದೆ ಸಹಕರಿಸುವವನೇ ಆಪತ್ಕಾಲದ ಬಂಧು, ಮಿತ್ರ, ಗೆಳೆಯ, ಸ್ನೇಹಿತ.

ಆಧಾರ:ಪಂಚತಂತ್ರ

***

ನಮಗೆ ಈ ಪ್ರಪಂಚದ ಅನಿವಾರ್ಯತೆ ಇದೆ. ಆದರೆ ಪ್ರಪಂಚಕ್ಕೆ ನಮ್ಮ ಅನಿವಾರ್ಯತೆ ಇಲ್ಲ. ನಾವು ಇಲ್ಲಿ ಜನ್ಮವೆತ್ತಿದ ಮೇಲೆ ಬದುಕುವುದು ಅನಿವಾರ್ಯ. ಈ ಅನಿವಾರ್ಯತೆಗಳ ಸತ್ಯ ತಿಳಿದು, ಕ್ಷಣಿಕ ಆಸೆಗಳ ಬಿಟ್ಟು, ಭ್ರಮೆಯಿಂದ ಹೊರ ಬಂದಾಗ,ನಮ್ಮ ಅಹಂ ಕಡಿಮೆಯಾಗಿ ನಿಜ ಮಾನವರಾಗಲು ಸಾಧ್ಯ.

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ: ಇಂಟರ್ನೆಟ್ ತಾಣ