ಬಾಳಿಗೊಂದು ಚಿಂತನೆ - 51

ನಮ್ಮ ಬದುಕಿನಲ್ಲಿ ಯಾವತ್ತೂ ಯಾರನ್ನೂ ಸಸಾರ, ತಾತ್ಸಾರ ದೃಷ್ಟಿಯಿಂದ ನೋಡಬಾರದು, ಒಂದಲ್ಲ ಒಂದು ಪ್ರತಿಭೆ ಎಲ್ಲರ ಹತ್ತಿರವೂ ಇರುತ್ತದೆ. ಪರಿಪೂರ್ಣರು ಯಾರೂ ಅಲ್ಲ. ಒಂದಲ್ಲ ಒಂದು ನ್ಯೂನತೆ ಇದ್ದೇ ಇರುವುದು ಸಹಜ. ಪ್ರೀತಿ, ಗೌರವ, ಸ್ನೇಹ, ಕನಿಕರವೆಂಬ ಮಾನವೀಯ ಮೌಲ್ಯಗಳು ಮನಸ್ಸಿನಿಂದ ಮೂಡಬೇಕು. ಆದಷ್ಟೂ ಶೀಲವಂತರಾಗಿರುವುದು ಬಹುಮುಖ್ಯ. ಇದು ಯಾವುದನ್ನು ಹಣಕೊಟ್ಟು ಪಡೆಯಲಾಗದು. ಬರೇ ನಾಲಿಗೆಯ ತುದಿಯಲ್ಲಿದ್ದರೆ ಸಾಲದು. ಇದು ಯಾವುದನ್ನೂ ನಾವು ಜೀವನದಲ್ಲಿ ಅಳವಡಿಸದೆ ಹೋದರೆ, ಮುಂದೆ ಒಂದು ದಿನ ಸೋತಾಗ ಯಾರೂ ಹತ್ತಿರ ಬಾರದಂತಾದೀತು. ಎಚ್ಚರವಾಗಿ ಪಶ್ಚಾತ್ತಾಪವಾದಾಗ ನಮಗೆ ಅನಿಸಬಹುದು- ‘ಕಲ್ಲುಗಳನ್ನು ಆಯ್ಕೆ ಮಾಡುವ ಹುಚ್ಚಿನಲ್ಲಿ ಅಮೂಲ್ಯ ವಜ್ರಗಳನ್ನು ಕಳಕೊಂಡೆವು’ ಎಂಬುದಾಗಿ.
ಸಂಬಂಧಗಳು ಜಾರಿ ಹೋಗುವ ಮೊದಲೇ ಎಚ್ಚೆತ್ತುಕೊಳ್ಳೋಣ. ಎಲ್ಲರೊಂದಿಗೆ ಕೂಡಿದಷ್ಟು ಹೊಂದಾಣಿಕೆಯಿಂದ ಇರಲು ಪ್ರಯತ್ನಿಸೋಣ.
ಒಳ್ಳೆಯ ಮಾತುಗಳು:
1--ಮಾನವ ಧರ್ಮಕ್ಕೆ ಯಾವತ್ತೂ ಜಯ ಲಭಿಸುತ್ತದೆ.
2--ಧರ್ಮ ದಿಂದಲೇ ವಿಶ್ವಶಾಂತಿ.
3--ದುರ್ಬಲರನ್ನು ಹಿಂಸಿಸುವುದು ಮಹಾಪಾಪ.
4--ಕಾಯಿಲೆ, ಸರ್ಪ, ಬೆಂಕಿ ಮತ್ತು ಶತ್ರುಗಳನ್ನು ಕಡೆಗಣಿಸಬಾರದು.
5--ದೇವರ ಸಾನಿಧ್ಯ ಪರಮ ಪಾವಿತ್ರ್ಯತೆ ಯಿಂದ ಕೂಡಿದೆ.
6-ಕೀರ್ತಿ ಬಂದಾಗ ಉಬ್ಬದೆ, ಬಾಗುವುದನ್ನು ಕಲಿಯಬೇಕು.
7--ಕ್ರೋಧದ ಕೈಗೆ ಬುದ್ಧಿಯನ್ನು ಕೊಡಬಾರದು.
8--ಒಳ್ಳೆಯ ಮಾತುಗಳಿಗೆ ಕಿವಿಯಾಗಬೇಕು. ತಿರಸ್ಕರಿಸಬಾರದು.
9--ಹೊಟ್ಟೆ ಹಸಿವನ್ನು ನೀಗಿಸುವಷ್ಟೇ ಊಟಮಾಡಬೇಕು.
10--ಒಳ್ಳೆಯದನ್ನು ಬೆಂಬಲಿಸುವ.ಕೆಟ್ಟದ್ದಕ್ಕೆ ಆತ್ಮವಿಮರ್ಶೆ ಮಾಡಿ ಮುಂದುವರಿಯುವ.
(ಸಂಗ್ರಹ: ಸೂಕ್ತಿ ಚಿಂತಾಮಣಿ)
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ