ಬಾಳಿಗೊಂದು ಚಿಂತನೆ - 58

ಬಾಳಿಗೊಂದು ಚಿಂತನೆ - 58

ಸಂತ ಕಬೀರ್ ದಾಸರ ನಾಲ್ಕು ಮುತ್ತಿನಂಥ ನುಡಿಗಳು:

ಪರರು ಮಾಡಿದ ದ್ರೋಹ, ನಿಂದನೆ, ಅಪಕಾರವನ್ನು ಮರೆತುಬಿಡು. ಮನಸ್ಸು ನಿರಾಳವಾಗುತ್ತದೆ.

ಬೇರೆಯವರು ನಿನಗೆ ಮಾಡಿದ ಸಹಾಯ, ಉಪಕಾರವನ್ನು ಮರೆತರೂ, ಸಮಯ ಸಂದರ್ಭ ಬಂದಾಗ ಜ್ಞಾಪಿಸಿಕೊ.

ನಾನು ಜನ್ಮವೆತ್ತಿರುವೆ, ಜೀವಿಸುವೆ, ಒಂದು ದಿನ ಮರಣಿಸುವೆ. ಮರಣ ತಲೆಯ ಮೇಲಿನ ತೂಗುಕತ್ತಿ, ಎಷ್ಟು ಹೊತ್ತಿಗೂ ಕೊರಳಿಗೆ ಬೀಳಬಹುದು.

ಕಣ್ಣಿಗೆ ಕಾಣಿಸದ ದಿವ್ಯ ಶಕ್ತಿ ಯನ್ನು ಸದಾ ನಂಬು, ಇಂಬು ನೀಡಬಹುದು. ನಿರಾಸೆ ಬೇಡ, ಮೇಲೆತ್ತುವನು, ಪಾಪ-ಪುಣ್ಯ ಗಳನ್ನು ನೋಡಿಕೊಂಡು.

(ಆಧಾರ:ಜ್ಞಾನ ಗಂಗಾ ದೀಪಿಕಾ)

-ರತ್ನಾ ಭಟ್ ತಲಂಜೇರಿ