ಬಾಳಿಗೊಂದು ಚಿಂತನೆ - 78

ಬಾಳಿಗೊಂದು ಚಿಂತನೆ - 78

ನಮ್ಮ ಹತ್ತಿರ ಯಾರಾದರೂ ಮಾತನಾಡಿಸುವಾಗ ಮೊದಮೊದಲು ಅವರ ಗುಟ್ಟು ಗೊತ್ತಾಗದು. ದಿನಕಳೆದಂತೆ  ಅವರ ಮನಸ್ಸು ಹೇಗೆ ಎಂದು ಅರ್ಥೈಸಿಕೊಳ್ಳಬಹುದು. ಹಳ್ಳಿಯಲ್ಲಿ ಒಂದು ಮಾತಿದೆ ‘ಹಲಸಿನಕಾಯಿಯನ್ನು ತೋಡಿ (ಚುಚ್ಚಿ ತೆಗೆದು) ನೋಡಬಹುದು, ಮನುಷ್ಯನ ಮನಸ್ಸನ್ನು ನೋಡಲು ಸಾಧ್ಯವಿಲ್ಲ’ ಎಂಬುದಾಗಿ. ಹಾಗೆಯೇ ಸಹಜವಾದ ಒಣಜಂಭವಿಲ್ಲದ, ಬೂಟಾಟಿಕೆಯಿಲ್ಲದ, ಪ್ರೀತಿ ವಿಶ್ವಾಸಗಳಿಂದ ಕೂಡಿದ ಪ್ರೇಮವಾಗಲಿ, ಒಲವಾಗಲಿ, ಮಾತಾಗಲಿ ದೂರವಿದ್ದರೂ ಹತ್ತಿರವಿದ್ದಂತೆ ತಿಳಿಯುವುದು, ಹೊಳೆಯುವುದು. ಯಾವುದೂ ಒಟ್ಟಿಗೆ ಹತ್ತಿರವೇ ಇರಬೇಕೆಂದೇನಿಲ್ಲ. ಒಂದು ಸುಭಾಷಿತದಲ್ಲಿ ಇದ್ದಂತೆ ಚಂದ್ರ ಮತ್ತು ಚಕೋರ ಪಕ್ಷಿ ಎಷ್ಟು ದೂರದಲ್ಲಿದ್ದರೂ, ಚಂದ್ರನನ್ನು ಕಂಡೊಡನೆ ಚಕೋರ ಪಕ್ಷಿಗಳ ಕಣ್ಣಲ್ಲಿ ಮಿಂಚುವ ಆ ಬೆಳಕೇ ಸಾಕ್ಷಿ.

*ಅಹೋ ಸಾಹಜಿಕಂ ಪ್ರೇಮ*

*ದೂರಾದಪಿ ವಿರಾಜತೇ।*

*ಚಕೋರ ನಯನ ದ್ವಂದ್ವ*

*ಮಾಹ್ಲಾದಯತಿ ಚಂದ್ರಮಾಃ॥*

ಸ್ನೇಹ ಮಾಡುವಾಗ,ಮಾತನಾಡುವಾಗ,ನೋಡಿ ಯೋಚಿಸಿ ಮಾಡೋಣ.

(ಶ್ಲೋಕ -ಸುಭಾಷಿತ ರತ್ನ ಭಾಂಡಾಗಾರ)

ಸಂಗ್ರಹ: ರತ್ನಾ ಭಟ್ ತಲಂಜೇರಿ

ಚಿತ್ರ: ಇಂಟರ್ನೆಟ್ ತಾಣ