ಬಾಳೆದಿಂಡಿನ ಸಾಸಿವೆ

ಬಾಳೆದಿಂಡಿನ ಸಾಸಿವೆ

ಬೇಕಿರುವ ಸಾಮಗ್ರಿ

ಬಾಳೆ ದಿಂಡಿನ ವೃತ್ತಾಕಾರದ ತುಂಡುಗಳು ೨೦, ಸಾಸಿವೆ ಅರ್ಧ ಚಮಚ, ತೆಂಗಿನ ತುರಿ ೧ ಕಪ್, ಒಣ ಮೆಣಸು ೪, ರುಚಿಗೆ ಉಪ್ಪು, ಹಸಿ ಮೆಣಸು ೨, ಸಿಹಿ ಮಜ್ಜಿಗೆ ಅರ್ಧ ಕಪ್

ತಯಾರಿಸುವ ವಿಧಾನ

ವೃತ್ತಾಕಾರವಾಗಿ ಕತ್ತರಿಸಿದ ಬಾಳೆದಿಂಡಿನ ತುಂಡುಗಳೊಂದಿಗೆ, ಸಾಸಿವೆ, ತೆಂಗಿನ ತುರಿ, ಒಣಮೆಣಸು, ಉಪ್ಪು, ಕಾಯಿ ಮೆಣಸು ರುಬ್ಬಬೇಕು. ಸಿಹಿ ಮಜ್ಜಿಗೆ(ಆ ದಿನ ಮಾಡಿದ ಮಜ್ಜಿಗೆ) ಸೇರಿಸಿ ಮಿಶ್ರ ಮಾಡಿ. ಒಗ್ಗರಣೆ ನೀಡಿ. (ಗಾಂಧಾರಿ ಮೆಣಸು ಸಹ ಬಳಸಬಹುದು).

ಬಾಳೆದಿಂಡಿನ ಹಸಿ ಸಲಾಡ್, ಜ್ಯೂಸ್, ಪಲ್ಯ, ಸಾಂಬಾರು, ರೊಟ್ಟಿ, ದೋಸೆ ಸಹ ಮಾಡಬಹುದು. ಆರೋಗ್ಯಕ್ಕೆ ತುಂಬಾ ಒಳ್ಳೆಯದು.

-ರತ್ನಾ ಕೆ ಭಟ್,ತಲಂಜೇರಿ