ಬಾಳೆ ಮೂತಿ ಪತ್ರೊಡೆ
ಬೇಕಿರುವ ಸಾಮಗ್ರಿ
ಹೆಚ್ಚಿದ ಬಿಳಿಯ ಭಾಗದ ಬಾಳೆ ಮೂತಿ (ಹೂವು)- ೨ ಬಟ್ಟಲು, ನೆನೆಸಿದ ಅಕ್ಕಿ- ೨ ಬಟ್ಟಲು, ಕಡ್ಲೆಬೇಳೆ- ೨ ಚಮಚ, ಉದ್ದಿನ ಬೇಳೆ ೨ ಚಮಚ, ಕೊತ್ತಂಬರಿ ೨ ಚಮಚ, ಜೀರಿಗೆ ಅರ್ಧ ಚಮಚ, ಕರಿಬೇವು ಸ್ವಲ್ಪ, ಸಾಸಿವೆ ಕಾಲು ಚಮಚ, ಕೊಬ್ಬರಿ ಎಣ್ಣೆ ೭ರಿಂದ ೮ ಚಮಚ, ಒಣಮೆಣಸು ೬, ಕಾಯಿತುರಿ ಅರ್ಧ ಕಪ್, ಹುಣಸೇ ರಸ ೪ ಚಮಚ, ಬೆಲ್ಲ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಕಡ್ಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಒಣಮೆಣಸು, ಕಾಲು ಚಮಚ ಜೀರಿಗೆ ಹಾಕಿ ಹುರಿದುಕೊಂಡು. ಪುಡಿಮಾಡಿ ಅಕ್ಕಿಯನ್ನು ಹಾಕಿ ತರಿತರಿಯಾಗಿ ರುಬ್ಬಿ ಹುಣಸೆರಸ, ಉಪ್ಪು, ಬೆಲ್ಲ ಹಾಗೂ ಹೆಚ್ಚಿದ ಬಾಳೆ ಮೂತಿ ಹಾಕಿ ಕಲಸಿ ತಟ್ಟೆಗೆ ಹಾಕಿ ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಬೇಕು. ನಂತರ ಎಣ್ಣೆ ಹಾಕಿ ಒಗ್ಗರಣೆ ಮಾಡಿ ಬೇಯಿಸಿದನ್ನು ಪುಡಿ ಮಾಡಿ ಹಾಕಿ ಚೆನ್ನಾಗಿ ಹುರಿದು ಕಾಯಿತುರಿ ಹಾಕಿದರೆ ಬಿಸಿಬಿಸಿ ಪತ್ರೊಡೆ ಸಿದ್ಧ.
-ಶೃತಿ ಗದ್ದೆಗಲ್, ಉ.ಕ.