ಬಾಳೆ ಮೂತಿ ಪಲ್ಯ
ಬೇಕಿರುವ ಸಾಮಗ್ರಿ
ಹೆಚ್ಚಿದ ಬಾಳೆ ಮೂತಿಯ (ಹೂವು) ಬಿಳಿಯ ಭಾಗ ೧ ಬಟ್ಟಲು, ಒಣಮೆಣಸು ೫, ಕಾಯಿತುರಿ ಅರ್ಧ ಬಟ್ಟಲು, ಒಗ್ಗರಣೆಗೆ ಕಡ್ಲೆಬೇಳೆ, ಉದ್ದಿನಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಎಣ್ಣೆ ೪ ಚಮಚ, ಹುಣಸೆರಸ ೪ ಚಮಚ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಬಾಳೆಮೂತಿಯನ್ನು ನೀರು ಹಾಕಿ ಒಂದು ಕುದಿ ಬರಿಸಿ ಸೋಸಿಕೊಳ್ಳಿ. ನಂತರ ಒಗ್ಗರಣೆ ಹಾಕಿ ಹುರಿಯಿರಿ. ಒಣಮೆಣಸು, ಸಾಸಿವೆ ಅರ್ಧ ಚಮಚ ಹಾಕಿ ಹುರಿದು ಕಾಯಿಯೊಂದಿಗೆ ಪುಡಿಮಾಡಿ ಹುರಿದ ಬಾಳೆ ಮೂತಿಗೆ ಬೆರೆಸಿ, ಉಪ್ಪು, ಬೆಲ್ಲ, ಹುಣಸೆ ರಸ ಹಾಕಿ, ಚೆನ್ನಾಗಿ ಹುರಿಯಿರಿ.
-ಶೃತಿ ಗದ್ದೆಗಲ್, ಉ.ಕ.