ಬಾಳ್, ಬಾೞ್

ಬಾಳ್, ಬಾೞ್

Comments

ಬರಹ

ಬಾಳ್=ಕತ್ತಿ, ಚೂರಿ
ಉದಾಹರಣೆ: ಜೈಮಿನಿಭಾರತದ ಈ ಪದ್ಯ ನೋಡಿ

ವ್ಯಾಳದಂಗದ ನಯವೊ? ಗರ್ತಸಂಛಾದಿತ ತೃ-
ಣಾಳಿಗಳೊ? ಮಕರದಿಕ್ಕೆಯ ಮಡುವಿನಂಬುಜವೊ?
ಬಾಳಧಾರೆಗೆ ಲೇಪಿಸಿದ ಮಧುವೊ? ಕಮಲಾಂಬಕಿಯರ ಕೃತಕದ ಬೇಟವೋ|
ಕಾಳಕೂಟಂ ಬೆರಸಿದಮೃತಾನ್ನಭೋಜನವೊ
ಪೇೞಲಱಿಯದೆನೆ, ಸೊಗಸಿತು ದುಷ್ಟಬುದ್ಧಿ ಘಾ-
ತಾಳಿಕೆಯನೊಳಗೊಂಡು ಹರುಷಲಾಂಛನದಿಂದ ನಸುನಗುತ ನುಡಿದ ಮಾತು||

ಬಾಳ ಧಾರೆ= ಕತ್ತಿಯ ಅಲಗು (ಹರಿತವಾದ ಭಾಗ)

ಬಾೞ್(ಕ್ರಿಯಾಪದ ಹಾಗೂ ನಾಮಪದ)=ಬದುಕು, ಜೀವಿಸು
ಬಾೞ್ ಗೆ ಉದಾಹರಣೆ: ಅದೇ ಜೈಮಿನಿಭಾರತದಿಂದ

ರಾಕಾಶಶಾಂಕನಭ್ಯುದಯಮಂ ಕೆಡಿಸಿ ತ-
ನ್ನಾಕಾರಮಂ ತೋಱಿಸುವೆನೆಂಬ ಕತ್ತಲೆಯೊ
ಲಾ ಕಮಲಲೋಚನನ ಭೃತ್ಯನಂ ಕೊಲಿಸಿ ತಾ ಬಾೞ್ವೆನೆಂಬುಜ್ಜುಗದೊಳು|
ಆ ಕುಮತಿಯಹ ಮಂತ್ರಿ ಬೞಿಕೊಂದು ಲೇಖನಮ-
ನೇಕಾಂತದೊಳ್ ಬರೆದು ಮೇಣದಕೆ ಮುದ್ರೆಯಂ
ಜೋಕೆಯಿಂದಳವಡಿಸಿ ಕರೆಸಿ ಶಶಿಹಾಸನಂ ನೋಡಿ ನಗುತಿಂತೆಂದನು||
ಭಾವನಾಮಗಳು: ಬಾೞ್ಕೆ/ಬಾೞಿಕೆ, ಬಾೞ್/ಬಾೞು, ಬಾೞ್ವೆ
ಭೂತಕೃದ್ವಾಚಿ: ಬಾೞ್ದು/ಬಾೞಿ(ಹೊಸಗನ್ನಡದಲ್ಲಿ)
ವರ್ತಮಾನಕೃದ್ವಾಚಿ: ಬಾೞ್ವ/ಬಾೞುವ(ಹೊಸಗನ್ನಡದಲ್ಲಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet