ಬಾಳ ಪಲ್ಲವಿ

ಬಾಳ ಪಲ್ಲವಿ

ಕವನ

ಬಾಳ ಪಲ್ಲವಿ ನಿನ್ನ ಸುತ್ತಲು

ನೀಳ ಚೆಲುವನು ಚೆಲ್ಲಿ ಸಾಗಿದೆ

ತಾಳ ಹಾಕುತ ರಮ್ಯ ಬದುಕದು ಜೀವ ಪಯಣದಲಿ

ಹೂಳು ತೆಗೆಯುವ ಜನರು ಬಂದಿರೆ

ಹಾಳು ಮಾಡದೆ ಮುಂದೆ ಹೋಗಿರೆ

ಹೇಳು ಚೆಲುವಿನ ಸುಖದ ಮಡಿಲಿದೆ ನನ್ನ ತನುವಿನಲಿ

 

ಕರುಣೆ ತೋರುವ ಮನದಿ ಮುಗುದೆಗೆ

ತರುಣಿ ಪಾಲನೆ ಮಾಡಿ ಸುಖದಲಿ

ಬರಣಿ ತುಂಬಲಿ ಮದುವೆ ಸಂಭ್ರಮ ತುಂಬಿ ಮನೆಯೊಳಗೆ

ಹರಣ ಬಾರದೆ ಚೆಂದ ಚೆಲುವಲಿ

ಹರಿಣಿ ದೇವಿಯ ಮಡಿಲು ಬೆಳಗಲಿ

ತರಹ ವೇದನೆ ಬರದೆ ಇರಲದು ಹಣತೆ ಉರಿಯುತಲಿ

 

ಮಧುರ ರಶ್ಮಿಯ ಹರಸಿ ನಡೆಯಲು

ಮಧುವ ಹರಿಸುತ ಬಾಳು ಸವಿಯಲಿ

ಮದನ ಮೋಹನ ಕೈಯ ಹಿಡಿಯುತ ಮನದ ಬೆಸುಗೆಯೊಳು

ಮದಿಸಿ ನಿರ್ಮಲ ಮೋಹ ಕಾಮನೆ

ಮುದದಿ ನಿರ್ಮಲ ಪ್ರೀತಿ ನೀಡುತ

ರುಧಿರ ನಿಮಿಷವ ದೂರ ಮಾಡಲು ಪ್ರೇಮ ಸಡಗರವು

-ಹಾ ಮ ಸತೀಶ

 

ಚಿತ್ರ್