ಬಾಳ ಬಂಡಿ ಚಲಿಸುವಾಗ

ಬಾಳ ಬಂಡಿ ಚಲಿಸುವಾಗ

ಕವನ

ಬಾಳ ಬಂಡಿ ಚಲಿಸುವಾಗ

ಬಾಳ ಲತೆಯು ಮುದುಡದಿರಲಿ

ಬಾಳ ಪ್ರೇಮದಂಥ ಸವಿಯು ಸೇರಿ ಹೋಗಲಿ

ಬಾಳುಯಿರದ ಬದುಕು ಬೇಕೆ

ಬಾಳುಯಿರದ ಗಾನವೇಕೆ

ಬಾಳುವಂಥ ಬದುಕ ಪಾಠ ಸೇರಿ ಹೋಗಲಿ

 

ಮನದ ಭಾವ ತೊರೆಯಬೇಡ

ಮನಕೆ ಮನವ ಸೆರೆಯಮಾಡು

ಮನಸ್ಸಿನಾಳದೊಳಗೆ ಬೆರೆತು ಸೇರಿ ಹೋಗಲಿ

ಮನವು ಸೋಕೆ ತನುವು ಅರಳೆ

ಮನವ ಅರಿವ ಸಖಿಯು ಬರಲೆ

ಮನವಿನಾಳದೊಳಗೆ ಜೀವ ಸೇರಿ ಹೋಗಲಿ

 

ಮಧುರ ಮಾತು ನಡೆಯ ನುಡಿಯು

ಮಧುರವಾಗಿ ಒಲುಮೆಯೆನಿಸಿ

ಮಧುರತೆಯಲಿ ಉಲ್ಲಾಸವು ಸೇರಿ ಹೋಗಲಿ

ಮಧುರ ಮಧುವ ಒಳಗೆ ಕರೆದು

ಮಧುರವರಿತು ಜೊತೆಗೆ ಕುಳಿತು

ಮಧುರವಾದ ಪ್ರೀತಿಯೊಳಗೆ ಸೇರಿ ಹೋಗಲಿ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್