ಬಾ ಗೊಂಬೆ...
ಕವನ
ಬಾನೊಂದಿಗೆ ಆಗುಂಬೆ
ನನ್ನೊಂದಿಗೆ ಈ ಗೊಂಬೆ
ಮುತ್ತಿಕ್ಕುತ್ತಿದೆ ಕ್ಷಣಕೊಮ್ಮೆ
ಇರುವ ಲೋಕವ ಮರೆತು
ಸಾಲು ಬೆಟ್ಟವ ದಾಟಿ
ಮುತ್ತ ಮೊಡವ ಹೊತ್ತು
ಅದರ ಅಮೃತ ಸುರಿಸು
ಪ್ರೇಮ ಬಿಸಿಯನು ತನಿಸು
ಕಾಂತಿ ತುಂಬಿದ ಸೂರ್ಯ
ನಿನ್ನನ್ನೇ ಹುಡುಕುವನು
ಕನ್ನೋಡೆದು ನೋಡುವನು
ನನ್ನವಳೆನ್ನುದ ಮರೆತು
ಚಂದಿರನು ಬಂದಾಗ
ಭೂಮಿ ತಂಪಾಗಿಹುದು
ಬಳಿ ಬಂದಿರುವಾಗ
ಒಲವು ಗೆಲುವಾಗಿದೆ
***
*ಗಜಲ್*
ಹಚ್ಚಿದ ಒಲೆಯಲ್ಲಿ ಮಾಡಿದ ಅಡಿಗೆ ಒಡಲ ತುಂಬಿತ್ತು
ನಿಷ್ಕಲ್ಮಶ ಪ್ರೇಮದಲ್ಲಿ ಮಾಡಿದ ಮೋಸ ಒಡಲ ಕಿಚ್ಚು ತುಂಬಿತ್ತು
ಆಡಿದ ಮಾತಿನ ನೆನಪು ನಗುವ ಮುಖ ಚೆಂಚಲವಾಗಿತ್ತು
ಜೊತೆಯಾಗಿ ಇಳಿಸಿದ ಭಾವ ಚಿತ್ರ ಕಣ್ಣೀರ ತುಂಬಿತ್ತು
ಸುರಿಯುವ ಕಣ್ಣೀರು ಭೋರ್ಗರೆವ ಜಲಪಾತ ಮರೆಸಿತ್ತು
ಸೂರ್ಯನಿರದ ಬಾನಂತೆ ನೀನಿಲ್ಲದೆ ಬದುಕು ಕತ್ತಲೆ ತುಂಬಿತ್ತು
ಸೋ ಕಾಲ್ಡ್ ಶಿಕ್ಷಣವನ್ನು ಪಡೆದವಳು ನೀನು
ಜೀವನದಲ್ಲಿ ಎಸ್ಟೊಂದು ಸಿಹಿಗನಸು ತುಂಬಿತ್ತು
ಯೌವ್ವನದ ಹೊಸ್ತಿಲದ ಗಾಯ ಎಂದು ಮಾಯುವುದಿಲ್ಲ
ಮನಸಿನ ಪುಟಗಳ ತುಂಬೆಲ್ಲ ನಿನ್ನ ಹೆಸರಿನ ಹಚ್ಚೆ ತುಂಬಿತ್ತು
-ಹನುಮಂತಪ್ಪ ವಿ.ಎಸ್.
ಚಿತ್ರ್