ಬಿಗ್ ಬಾಂಗ್ ಬಗ್ಗೆ ತಿಳಿಯ ಬೇಕೆ????

ಬಿಗ್ ಬಾಂಗ್ ಬಗ್ಗೆ ತಿಳಿಯ ಬೇಕೆ????

ಬರಹ

ಲಂಡನ್: ಇಡೀ ಪ್ರಪಂಚದ ಸರ್ವನಾಶ ಬುಧವಾರ ಆರಂಭವಾಗುವುದೇ? ಬಿಗ್‌ಬ್ಯಾಂಗ್ ಅಗ್ನಿಪರೀಕ್ಷೆಯಲ್ಲಿ ಭೂಮಿ ಉಳಿಯುವುದೇ? ಬ್ರಹ್ಮಾಂಡ ರಚನೆ ಬಗ್ಗೆ ತಿಳಿಯ ಹೊರಟವರು ಭೂಮಿಯನ್ನೇ ಛಿದ್ರಮಾಡುವರೇ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕೆ? ಬುಧವಾರದ ವರೆಗೆ ನಿಮ್ಮ ಉಸಿರು ಬಿಗಿಹಿಡಿದುಕೊಂಡು ಕಾಯಿರಿ. ಹಾಗಾದರೆ ಸೆ.10 ರಂದು ನಡೆಯುವುದು ಏನು?

ಜಿನಿವಾದಲ್ಲಿ ವಿಜ್ಞಾನಿಗಳು ಬ್ರಹ್ಮಾಂಡ ಸೃಷ್ಟಿ ಸಂದರ್ಭದಲ್ಲಿ ಉಂಟಾದ ಭಾರೀ ಸ್ಫೋಟವನ್ನು ಮರುಸೃಷ್ಟಿ ಮಾಡುತ್ತಿದ್ದಾರೆ. ಈ ಸ್ಫೋಟಕ್ಕೆ ಇಡೀ ಭೂಮಂಡಲವೇ ನಾಶವಾಗುತ್ತದೆಂಬ ಆತಂಕ ಪ್ರಪಂಚದೆಲ್ಲೆಡೆ ವ್ಯಕ್ತವಾಗಿದೆ. ಆದರೆ ವಿಜ್ಞಾನಿಗಳು ಕೊಂಚವೂ ಅಳುಕದೆ ಮಹಾಸ್ಫೋಟ 'ಬಿಗ್‌ಬ್ಯಾಂಗ್'ಗೆ ಸಿದ್ಧರಾಗಿದ್ದಾರೆ.

ಬುಧವಾರ ಅಣುಗಳನ್ನು ಪರಸ್ಪರ ಡಿಕ್ಕಿ ಹೊಡೆಸುವ ಪ್ರಕ್ರಿಯೆ ಶುರುವಾಗಲಿದೆ. ಅಂತಿಮ ಸ್ಫೋಟ ಅಕ್ಟೋಬರಲ್ಲಿ ನಡೆಯಲಿದೆ.

ಏನಿದು ಬಿಗ್‌ಬ್ಯಾಂಗ್?.

14 ಬಿಲಿಯನ್ ವರ್ಷಗಳ ಹಿಂದೆ ಭಾರೀ ಸ್ಫೋಟವೊಂದು ಸಂಭವಿಸಿತು. ಸ್ಫೋಟದ ಮೂಲಸ್ಥಳದಿಂದ ಹಲವಾರು ಕಣಗಳು ಸಿಡಿದವು. ಸಾವಿರಾರು ಡಿಗ್ರಿಯಷ್ಟು ತಾಪಮಾನದಿಂದ ಕೂಡಿದ್ದ ಈ ಕಣಗಳು ಕ್ರಮೇಣ ತಣ್ಣಗಾಗಿ ಬ್ರಹ್ಮಾಂಡ ಸೃಷ್ಟಿಯಾಯಿತು ಎಂಬ ಕಥೆ ನಿಮಗೆಲ್ಲಾ ಗೊತ್ತು.

ಬಿಗ್ ಬ್ಯಾಂಗ್ ಎಂದು ಕರೆಯಲಾಗುವ ಈ ಮಹಾಸ್ಫೋಟವನ್ನು ವಿಜ್ಞಾನಿಗಳ ತಂಡ ಮರುಸೃಷ್ಟಿ ಮಾಡುತ್ತಿದೆ. ಪ್ರಪಂಚಾದ್ಯಂತ ಸಾವಿರಾರು ವಿಜ್ಞಾನಿಗಳು ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ತಂಡದ ಪೈಕಿ ಪ್ರಮುಖವಾಗಿ ಕೇಳಿಬರುತ್ತಿರುವ ವಿಜ್ಞಾನಿ ಹೆಸರು ಡಾ.ಲಿನ್ ಇವಾನ್.

ಈ ಪ್ರಯೋಗ ಏಕೆ?:

ಬ್ರಹ್ಮಾಂಡ ಸೃಷ್ಟಿಯಾದಾಗ ಹಲವಾರು ವೈಜ್ಞಾನಿಕ ಕೌತುಕಗಳು ಉಂಟಾದವು. ಅವು ಯಾವುವು, ಅದು ಹೇಗಿತ್ತು ಎಂಬ ವಿಷಯ ಸ್ಪಷ್ಟವಾಗಿ ತಿಳಿದಿಲ್ಲ. ಈ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಫ್ರಾನ್ಸ್ ಮತ್ತು ಸ್ವಿಜರ್‌ಲೆಂಡ್ ಗಡಿಯಲ್ಲಿ ಬಿಗ್‌ಬ್ಯಾಂಗ್ ಅರ್ಥಾತ್ ಮಹಾ ಸ್ಫೋಟ ನಡೆಯುತ್ತಿದೆ. ಜಿನಿವಾದಲ್ಲಿರುವ ಯೂರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯಾರ್ ರಿಸರ್ಜ್ ಎಂಬ ಸಂಸ್ಥೆ ಈ ಪ್ರಯೋಗ ನಡೆಸುತ್ತಿದೆ. ಈ ಸಂಸ್ಥೆಯ ಕಚೇರಿ ಸಮೀಪದಲ್ಲಿ ಈ ಸ್ಫೋಟಕ್ಕೆ ಸಿದ್ಧತೆ ನಡೆದಿದೆ.

ಸ್ಫೋಟ ಹೇಗೆ?

ಪ್ರತಿಯೊಂದು ಕಣದಲ್ಲೂ ಮಧ್ಯದಲ್ಲಿ ನ್ಯೂಕ್ಲಿಯಸ್, ಇದರ ಸುತ್ತ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್‌ಗಳಿರುತ್ತದೆ. ನ್ಯೂಟ್ರಾನ್‌ಗಳನ್ನು ಬೆಳಕು ಚಲಿಸುವ ವೇಗದಲ್ಲಿ ಅಂದರೆ ಪ್ರತಿಸೆಂಕೆಂಡಿಗೆ 3 ಲಕ್ಷ ಕಿ.ಮೀ ವೇಗದಲ್ಲಿ ಚಲಿಸುವಂತೆ ಮಾಡಿ ಪರಸ್ಪರ ಡಿಕ್ಕಿ ಹೊಡೆಸುತ್ತಾರೆ. ಆಗ ಮಹಾ ಸ್ಫೋಟ ಉಂಟಾಗುತ್ತದೆ. ಈ ಸ್ಫೋಟದ ಪರಿಣಾಮ ಬಿಗ್‌ಬ್ಯಾಂಗ್ ರೀತಿಯಲ್ಲೇ ಇರುತ್ತದೆ. ಲಾರ್ಜ್ ಹಾಡ್ರನ್ ಕೊಲೈಡರ್ ಎಂಬ ಬೃಹತ್ ಉಪಕರಣದಿಂದ ಹೊರಡುವ ಕಣಗಳು ಅಯಸ್ಕಾಂತೀಯ ಕೊಳವೆ ಮಾರ್ಗದಲ್ಲಿ ಸಂಚರಿಸುತ್ತವೆ.

ಕೇಂದ್ರ ಸ್ಥಳದಿಂದ ಎರಡು ಮಾರ್ಗದಲ್ಲಿ ಆಗಮಿಸುವ ಈ ಕಣಗಳ ನ್ಯೂಟ್ರಾನ್‌ಗಳು ನಿಗದಿತ ಸ್ಥಳದಲ್ಲಿ ಭಾರೀ ವೇಗದಲ್ಲಿ ಡಿಕ್ಕಿ ಹೊಡೆಯುತ್ತವೆ. ಮೊದಲ ಮಾರ್ಗದಲ್ಲಿ ಕಣಗಳನ್ನು ಹರಿಬಿಡುವ ಕಾರ್ಯ ಬುಧವಾರ ಆರಂಭವಾಗುತ್ತದೆ.

27 ಕಿ.ಮೀ. ಸುರಂಗ, 80,000 ಕಂಪ್ಯೂಟರ್

ಕಣಗಳು ಡಿಕ್ಕಿಹೊಡೆಯುವ ಸ್ಥಳ ತಲುಪುವ ಮೊದಲು 27 ಕಿ.ಮೀ.ಉದ್ದದಷ್ಟು ಆಯಸ್ಕಾಂತೀಯ ಕೊಳವೆ ಮಾರ್ಗದಲ್ಲಿ ಚಲಿಸುತ್ತದೆ.ಫ್ರಾನ್ಸ್-ಸ್ವಿಜರ್ಲೆಂಡ್ ಗಡಿಯಲ್ಲಿ ವೃತ್ತಾಕಾರದಲ್ಲಿ ಸುರಂಗಕೊರೆದು ಕೊಳವೆ ಮಾರ್ಗ ಹಾಕಲಾಗಿದೆ. ಈ ಸುರಂಗ ಭೂಮಿ ಮೇಲಿಂದ 170-600 ಅಡಿಗಳಷ್ಟು ಆಳದಲ್ಲಿದೆ. ಕಣಗಳು ಚಲಿಸುವ, ಸ್ಫೋಟವಾಗುವ ಪ್ರತಿಕ್ಷಣವನ್ನೂ ಕಂಪ್ಯೂಟರ್‌ಗಳಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಈ ಕಾರ್ಯಕ್ಕಾಗಿಯೇ ಸುಮಾರು 80,000 ಕಂಪ್ಯೂಟರ್‌ಗಳನ್ನು ಜೋಡಿಸಲಾಗಿದೆ. ಈ ಕಂಪ್ಯೂಟರ್‌ನಲ್ಲಿ ಶೇಖರವಾಗುವ ಮಾಹಿತಿ ಪ್ರಪಂಚದ ಎಲ್ಲೆಡೆ ಇರುವ ಸಂಶೋಧಕರಿಗೂ ಲಭ್ಯವಾಗುವಂತೆ ಸಂಪರ್ಕ ಕಲ್ಪಿಸಲಾಗಿದೆ.

ಆತಂಕ ಏಕೆ?

ಮಹಾಸ್ಫೋಟ ಸಂಭವಿಸಿದಾಗ ಬ್ಲಾಕ್‌ಹೋಲ್‌ಗಳು ಸೃಷ್ಟಿಯಾಗುತ್ತದೆ. ಇವು ಭೂಮಿಯನ್ನೇ ನುಂಗುವ ಶಕ್ತಿಹೊಂದಿರುತ್ತದೆ. ಅಷ್ಟೇ ಅಲ್ಲದೆ ಭೂಕಂಪ, ಸುನಾಮಿಗಳು ಉಂಟಾಗುತ್ತವೆಂದು ಹೇಳಲಾಗಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಈ ಪ್ರಯೋಗ ನಡೆಸುತ್ತಿರುವ ವಿಜ್ಞಾನಿಗಳಿಗೆ ಬೆದರಿಕೆ ಕರೆಗಳು, ಈಮೇಲ್‌ಗಳೂ ಬಂದಿವೆ. ಈ ಹುಚ್ಚಾಟವನ್ನು ನಿಲ್ಲಿಸಬೇಕೆಂದು ಕೋರ್ಟಲ್ಲಿ ಅರ್ಜಿಗಳನ್ನೂ ಹಾಕಲಾಗಿದೆ. ಆದರೆ ವಿಜ್ಞಾನಿಗಳು ಇವುಗಳಿಗೆ ಸೊಪ್ಪು ಹಾಕಿಲ್ಲ. ಮಹಾಸ್ಫೋಟದಿಂದ ತಲೆಹೋಗು ವಂತಹದ್ದೇನೂ ಆಗದು ಎಂದಿದ್ದಾರೆ.

ಖರ್ಚು 33,000 ಕೋಟಿ

ಬಿಗ್‌ಬ್ಯಾಂಗ್ ಯೋಜನೆಗೆ ಖರ್ಚು ಸುಮಾರು 33,000 ಕೋಟಿ ರು. ಈ ಮೊತ್ತವನ್ನು 85 ದೇಶಗಳು ಭರಿಸಿವೆ.

(ಇದು ನನ್ನ ಬರಹವಲ್ಲ)