laden interview with siddesa tv |
ಸರಿ ಸ್ಟುಡಿಯೋ ಸೆಟ್ ಅಪ್ ಮಾಡ್ಕಂಡು ಯಾವಾಗ ಬತ್ತಾನೆ ಅಂತ ಕಾಯ್ತಾ ಇದ್ವಿ. ದಿನಾ ಊಟ ಮಾಡೋದು ಸ್ಟುಡಿಯೋ ಒಳಗೆ ಮಕ್ಕಳೋದು. ಒಂದು ದಿನ ನಮ್ಮ ಕ್ಯಾಮೆರಾ ಮೆನ್, ಏನ್ ಸರ್ ಇದು ಹಂದಿ ಸತ್ತ ವಾಸನೆ ಬತ್ತದೆ. ತಡೆಯಕ್ಕೆ ಆಯ್ತಾ ಇಲ್ಲಾ ಅಂತಾ ಹೋಗಿ ವಾಂತಿ ಮಾಡ್ದ. ಲೇ ಲಾಡೆನ್ ಬಂದ ಎಲ್ಲಾ ಸಿದ್ದ ಮಾಡ್ಕಳಲೇ ಅಂದೆ. ಏ ನಿಮಗೆ ಹೆಂಗೆ ಗೊತ್ತಾತು ಸರ್ ಅವರೇ ಬಂದ್ರು ಅಂತ. ನೋಡಲಾ ಮರಳುಗಾಡಿನಲ್ಲಿ ಕುಡಿಯೋಕ್ಕೆ ನೀರು ಸಿಗಕ್ಕಿಲ್ಲ. ಇನ್ನು ತೊಳಕೊಳೋಕೆ ಅಂದ್ರೆ ಸಾನ ಮಾಡಕ್ಕೆ ಎಲ್ಲಲಾ ನೀರು ಸಿಗ್ತದೆ. ಅಂಗೇ ಅವರು ಹಾಕೋ ಕುರ್ತಾ ಜುಬ್ಬದಾಗೆ ಗಾಳಿ ಹೊರಗೆ ಹೋಗಕ್ಕಿಲ್ಲ. ಅದು ಒಳಗೇ ಬರ್ನ್ ಆಗಿ, H2O + NaCl + H2So4 ಕೆಮಿಕಲ್ ರಿಯಾಕ್ಸನ್ ಆಗಿ ಹಿಂಗೆ ಹಂದಿ ಸತ್ತ ವಾಸನೆ ಬತ್ತದೆ. ಇದನ್ನ ಅನಸ್ತೀಷಿಯಾಕ್ಕೆ ಬಳಸಬೋದು ಕಲಾ ಅಂದೆ. ಸರಿ ಲಾಡೆನ್ ಜೊತೆ ಒಂದು 10ಜನಾ ಗನ್ ಹಿಡಕಂಡು ಬಂದ್ರು. ಲಾಡೆನ್ ಅವರಿಗೆಲ್ಲಾ " ಇತ್ರಸಾ ಹೀಕ್ ಲಾ ಥಾಂ ಥೂಚಿ. ಇಕಾಂಪಾ ಆಹ್ ಥೂ" ಅಂದೋನೆ ಉಗಳೋ ತೊಟ್ಟಿಯಲ್ಲಿ ಕಫ ಉಗೆದ. ಏನ್ ಸರ್ ಅಂಗಂದ್ರೆ. ನೀವೇಲ್ಲಾ ಹೊರಗಿರಿ, ಅಂಗೇ ಒಂಟೇನಾ ಕೊಟ್ಟಿಗೆ ಕಟ್ರಿ ಅಂದ ಕಲಾ. ಸರ್ ಈ ಭಾಸೆ ನಿಮಗೆ ಬತ್ತದೆ ಅಂದ ಕ್ಯಾಮೆರಾ ಮನ್, ನೋಡಲಾ ನಾನು ದಿನಾ ಬೆಳಗ್ಗೆ Q-tv ನೋತ್ತೀನಿ ಅದ್ರಾಗೆ ಇದೇ ಭಾಸೆ ಬತ್ತದೆ. ಸರ್ ಅವನು ಕಫ ಯಾಕೆ ಉಗಿದಿದ್ದ ಅಂದ ಕ್ಯಾಮೆರಾ ಮನ್, ನೋಡಲಾ ಮರಳುಗಾಡಿನಾಗೆ ಹೀಟ್ ಐತೆ ಅಂಗಾಗಿ ಆ ಭಾಸೆ ಅಲ್ಲಿ ಮಾತಾಡಿದ್ರೆ ಕಫ ಬರಕ್ಕಿಲ್ಲಾ. ಆದರೆ ಇಲ್ಲಿ ವಾತಾವರಣ ಯತ್ಯಾಸ ಆಗಿರುವುದರಿಂದ ಕಫ ಬತ್ತದೆ ಕಲಾ. ಇವರು ಒಂದು ತರಾ ತುಪ್ಪ ಮ್ಯಾನ್ಯುಫಾಕ್ಚರಿಂಗ್ ಕಂಪೆನಿ ಕಲಾ ಅಂದೆ. ಸರಿ ಸ್ಟುಡಿಯೋ ಒಳಗೆ ಒಂದು ಹತ್ತು ಬಾಟ್ಲ್ ಫಿನಾಯಿಲ್ ಅಂಗೇ ರೂಂ ಪ್ರೆಸ್ನನರ್ ಹಾಕಿದ್ದಾತು.
ನೋಡಿ ವೀಕ್ಸಕರೆ ಇವತ್ತು ನಮ್ಮ ಸ್ಟುಡಿಯೋದಲ್ಲಿ ಪೇಮಸ್ ಟೆರರಿಸ್ಟ್ ಬಿನ್ ಲಾಡೆನ್ ಇದಾರೆ. ಅವರೊಂದಿಗೆ ನೇರ ಸಂದರ್ಸನ ಅಂಗೇ ನೀವು ಲೈವ್ ಆಗಿ ನೋಡಬಹುದು.
ಸಿದ್ದೇಸ ಟಿವಿ : ಸರ್ ನೀವು ಯಾವಾಗಲೂ ಈ ರೀತಿ ಜಮಖಾನ ಮೈ ಮೇಲೆ ಹಾಕಂಡಿರ್ತೀರಲಾ ನಿಮಗೆ ಸೆಕೆ ಆಗಕ್ಕೆ ಇಲ್ವಾ, ಅಂಗೇ ಬೆವರಿಂದ ಕಜ್ಜಿ, ಹುಳಕಡ್ಡಿ ಆಗಕಿಲ್ವಾ.
ಲಾಡೆನ್ : ನೋಡಿ ಕೋಮಲ್, ಸರ್ ನಿಮಗೆ ಕನ್ನಡ ಬತ್ತದಾ. ನನ್ನ 66ನೇ ಹೆಂಡರು ಇಲ್ಲೇ ಕ್ಯಾತಸಂದ್ರದೋಳು ಕಣ್ರೀ. ಮೊನ್ನೆ ಅವಳಿಗೂ ಮಗು ಆಗೈತೆ. ಅಬ್ದುಲ್ ಖಾನ್ ಉಲ್ಲಾ ಅಂತಾ ಅವನ ಹೆಸರು. ನೀವು ಸಾನೇ ಸ್ಟ್ರಾಂಗ್ ಬುಡಿ ಸಾ. ಈಗ ಇಸಯಕ್ಕೆ ಬತ್ತೀನಿ. ನಾವು ಈ ಬಟ್ಟೆ ಹಾಕೋದ್ರಿಂದ, ದೇಹಕ್ಕೆ ವ್ಯಾಯಾಮ ಮಾಡಿದಂಗೆ ಆಯ್ತದೆ. ಭಾರ ಇತ್ತದಲ್ಲಾ ಅದಕ್ಕೆ. ಅಂಗೇ ಬೇಕು ಅಂದಾಗ ಇದೇ ಬಟ್ಟೆಯಲ್ಲಿ ಟೆಂಟ್ ಹಾಕಂತೀವಿ. ಮೈಮ್ಯಾಕೆ ಸಾನೇ ಗಾಯ ಆಗೈತೆ ಏನ್ ಮಾಡಕ್ಕೆ ಆಯ್ತದೆ. ಈಗ ಇಂಡಿಯಾಕ್ಕೆ ಬಂದೀದಿವಲ್ಲಾ ಇಲ್ಲಿನ ನೀರಲ್ಲೇ ತೊಳ್ಕಂಡು ಹೋಯ್ತೀವಿ ಅಂದ್ರು ಲಾಡೆನ್್ರವರು. ಸರ್ ಈ ನನ್ಮಕ್ಕಳು ನಮ್ಮ ನೀರನ್ನು ಗಬ್ಬೆಬ್ಬಿಸಿ ಹೋಯ್ತಾರೆ ಸಾರ್ ಅಂದ ಕಾಮೆರಾ ಮನ್. ಃಇಕಾಸಾ ಇಂಫೂ ಕಿತಾರಾ ಆ ಆ ಆ ಥೂ. ಅಂದು ಬಾಡಿಗಾರ್ಡ್ ಕಫ ಉಗೆದ. ಏನ್ ಸಾ ಅಂಗಂದ್ರೆ. ಮುಚ್ಕಂಡು ಸೂಟಿಂಗ್ ಮಾಡು ಇಲ್ಲಾ ಅಂದ್ರೆ ಸ್ಟುಡಿಯೋ ಮುಂದೆ ಹೊಗೆ ಹಾಕಿಸ್ತೀವಿ ಅಂದ್ರಲಾ.
ಸಿದ್ದೇಸ ಟಿವಿ : ಸರ್ ನೀವು ಯಾವಾಗಲೂ ಗುಹೆಯಲ್ಲೇ ಇರುತ್ತೀರಲ್ಲಾ ಇದರ ಬಗ್ಗೆಗಿನ ಅನುಭವ ತಿಳಿಸಿ.
ಲಾಡೆನ್ : ನೋಡಿ ಮೊದಲು ಅಲ್ಲಿ ಇರೋ ಪ್ರಾಣಿನೆಲ್ಲಾ ಹೊರಗೆ ಕಳಿಸಿ. ಎ.ಸಿ. ಬಾತ್ ರೂಂ ಫಿಟ್ಟಿಂಗ್ ಮಾಡಿಸಿ ಆಮ್ಯಾಕೆ ಉಳ್ಕಂತೀವಿ. ನಿಮ್ಮಂಗೆ ನಾವು ನೇರವಾಗಿ ಓಡಾಡೋಕ್ಕೆ ಆಗಕ್ಕಿಲ್ಲ. ಬೆನ್ನು ಬಗ್ಗಿಸಿಕೊಂಡೇ ಓಡಾಡಬೇಕು. ಅದಕ್ಕೆ ನಮ್ಮ ಬೆನ್ನೆಲ್ಲಾ ಗೂನು ಬೆನ್ನು ಆಗೈತೆ. ಯಾರಾದರೂ ನೋಡಿದ್ರೆ ವರ್ಸಾನು ಗಟ್ಟಲೆ ಗೋಡೌನ್ ನಲ್ಲಿ ಮೂಟೆ ಹೊತ್ತಿದ್ದಾರೆ ಅನ್ಕಂಬೇಕು ಅಂಗೈತೆ ನಮ್ಮ ಬಾಡಿ ಸೇಪು ಅಂದ. ಸಾ ಇವರನ್ನು ನೋಡಿದ್ರೆ ನಮ್ಮ ಕಟ್ಟಿಗೆ ಒಡಿಯೋ ಕಿಸ್ನ ಇದ್ದಂಗೆ ಇಲ್ವರಾ. ಅವನಿಗೆ ಗಡ್ಡ ಅಂಟಿಸಿದರೆ ಹಿಂಗೇ ಕಾಣ್ತಾನೆ ಅಂದ ಕಾಮೆರಾಮನ್.
ಸಿದ್ದೇಸ ಟಿವಿ : ಸರ್ ನಿಮಗೆ 66ಹೆಂಡರು ಅಂತೀರಿ, ಅವರೆಲ್ಲಾ ಎಲ್ಲವ್ರೆ, ಅಂಗೇ ನಿಮಗೆ ಎಷ್ಟು ಬಚ್ಚಾ ಐತೆ.
ಲಾಡೆನ್ : ನೋಡಿ ಇವರೇ. ಕೋಮಲ್ ಸಾ. ಮರಳುಗಾಡಿನಲ್ಲಿ ಸುತ್ತುತ್ತಿರುವಾಗಲೆಲ್ಲಾ ಮದುವೆ ಆಗ್ತಾ ಇರುತ್ತೆ. ಅಂಗೇ ಮಕ್ಕಳು ಆಗ್ತಾ ಇರುತ್ತೆ. ಆಫ್ಘಾನಿಸ್ತಾನದಲ್ಲಿ ಒಂದು ಏರಿಯಾ ತುಂಬಾ ನನ್ನ ಮಕ್ಕಳೇ ಇದ್ದಾರೆ. ಅಲ್ಲಿನ ಕಾರ್ಪೋರೇಸನ್ ಎಲೆಕ್ಸನ್್ನಲ್ಲಿ ನಮ್ಮದೇ ಮೆಜಾರಿಟಿ. ಈಗ ಬೆಂಗಳೂರಿಗೆ ಬಂದಾಗ ಕಲಾಸಿ ಪಾಳ್ಯದಲ್ಲಿ ಒಂದು 5ಜನ ಬಂದು ಅಬ್ಬಾ ಅಂದ್ವು. ನೋಡಿದ್ರೆ ನನ್ನ 35ನೇ ಹೆಂಡರು ಬೀಬೀಜಾನ್ ಮಕ್ಕಳು. ಈಗ ಅದಕ್ಕೆ ಒಂದು ಡೈರಿ ಮಾಡಿದೀನಿ. ಗಜನಿ ತರಾ.
ಸಿದ್ದೇಸ ಟಿವಿ : ಸಾ ನೀವು ಯಾವಾಗಲೂ ಗನ್ ಹಿಡಕಂಡು ಹೋಯ್ತೀರಾ. ಅಂಗೇ ಭಯೋತ್ಪಾದನೆ ಯಾಕೆ ಸಾ.
ಲಾಡೆನ್ : ನೋಡ್ರೀ ನಮ್ಮ ಗನ್ ಏನಿಲ್ಲಾ ಅಂದ್ರು, 30ಕೆಜಿ ಭಾರ ಐತೆ. ಬುಲೆಟ್ ಸೇರಿದ್ರೆ 40ಕೆಜಿ ಆಯ್ತದೆ ಅಂದ್ರು. ಹಿಂದಗಡೆ ಇದ್ದ ಬಾಡಿ ಗಾರ್ಡ್ ಕೈ ಲಟಿಗೆ ಮುರೀತಾ ಇದ್ದ. ಯಾಕಲಾ. ಏ 50ಕೆಜಿ ಭಾರ ಐತೆ ಅಂದು. ಗನ್ನನ್ನು ಎಡಗೈಯಿಂದ ಬಲಗೈಗೆ ಹಾಕಿದ. ನೋಡಿ ಕೋಮಲ್. ಇಷ್ಟೊಂದು ಭಾರದ ಗನ್ನು ಹೊರುವುದರಿಂದ ಸುಗರ್ ಡೌನ್ ಆಯ್ತದೆ. ಅಂಗೇ ಬೈಸೆಪ್ಸ್, ಟ್ರೈಸೆಪ್ಸ್ ಬತ್ತದೆ. ಅಂಗಂದು ಕೈ ತೋರಿಸಿದ. ಮಗಂದು ಬಾಡಿ ಮಾತ್ರ ನಾಯಿ ಇದ್ದಂಗೆ ಇತ್ತು. ತೋಳು ಕಟ್ಟಿಗೆ ಒಡೆಯೋರು ತರಾ ಇತ್ತು. ಭಯೋತ್ಪಾದನೆ ನಾವು ಮಾಡಬೇಕು ಅಂತ ಮಾಡುತ್ತಿಲ್ಲ. ಒಂದು ಸಾರಿ ಅಮೆರಿಕಾದೋನು ನಮ್ಮ ಹಳ್ಳಿಗೆ ಬಂದು ಕೆರೆತಾವ ಹೋಗಬೇಕಾದ್ರೆ ಚೊಂಬಿಗೆ ಜಗಳ ಆಡಿ. ಪಂಚಾಯ್ತಿಯಲ್ಲಿ ನನ್ನ ಮಾನ ಮರ್ವಾದೆ ತೆಗೆದ. ಆ ಸಿಟ್ಟನ್ನು ಈಗ ತೀರಿಸ್ಕಂತಾ ಇದೀನಿ.
ಸಿದ್ದೇಸ ಟಿವಿ : ಸರ್ ಈ ಗಡ್ಡ ಬಿಟ್ಟೀದ್ದೀರಲ್ಲಾ ನಿಮಗೆ ತೊಂದರೆ ಆಗಕ್ಕಿಲ್ಲಾ
ಲಾಡೆನ್ : ನೋಡಿ ಈ ದಾಡಿ ಸುಮಾರು 30 ವರ್ಸದಿಂದ ಅಂಗೇ ಐತೆ. ಇದನ್ನ ಬೋಳಿಸಬೇಕು ಅಂದ್ರೆ ಒಂದು 40ಬಿಲೇಡ್ ಬೇಕು. ಮೊನ್ನೆ ವಾಕಿನ್ ಸನ್ ಬ್ಲೇಡ್ ಕಂಪೆನಿಯೋರು ಕರೆದಿದ್ರು ನಾನೇ ಬರಕ್ಕಿಲ್ಲ ಅಂದೆ. ಇದಕ್ಕೆ ಕಲ್ಲು ಕಟ್ಟಿಕೊಂಡು ಹೊಡೆದ್ರೆ. ಮುಖದಗೆ ರಕ್ತ ಬತ್ತದೆ. ಇದು ಎದುರಾಳಿಯನ್ನು ಮೋಸ ಮಾಡುವುದಿಕ್ಕೆ ಅಂದ. ಸಾ ನೀವು ಒಂದು ತರಾ ಜಾಕಿಚಾನ್ ಇದ್ದಂಗೆ ಬುಡಿ.
ಸಿದ್ದೇಸ ಟಿವಿ : ಸರ್ ಕಡೇ ಪ್ರಸ್ನೆ. ನಿಮಗೆ ಪ್ರಾಣ ಭಯ ಇಲ್ವಾ,
ಲಾಡೆನ್ : ನೋಡ್ರೀ, ಒಬಾಮಾ ನನ್ನ ಅಕ್ಕನ ಮಗನೇ, ಈಗ ನಾನು ಅಮೆರಿಕಾದಲ್ಲೇ ಇದೀನಿ, ಯಾರೂ ಗುರುತು ಹಿಡಿಯಕ್ಕೆ ಇಲ್ಲಾ. ಯಾಕೇಂದ್ರೆ ಪಾಕಿಸ್ತಾನದಿಂದ ಯಾವದೋ ಮುಲ್ಲಾ ಬಂದಾವ್ರೆ ಅಂತ ಸುಮ್ನಾಗಿದಾರೆ ಅಂತು.
ಸರಿ ಮಧ್ಯರಾತ್ರಿ 2ಕ್ಕೆ ಕಾರ್ಯಕ್ರಮ ಮುಗೀತು. ಓಡಿ ಹೋಗಿ ಟಿ. ಆರ್.ಪಿ ನೋಡಿದ್ರೆ ಬರೀ 3ಜನ ಟಿವಿ ನೋಡಿದ್ರು. ಯಾಕಲಾ. ಯಾವುದೋ ಬಕ್ರೀದ್ ಕಾರ್ಯಕ್ರಮ ಅಂತಾ ಟಿವಿ ಆಫ್ ಮಾಡಿ ಮಕ್ಕೊಂಡವ್ರೆ. ನೋಡ್ರಲಾ ಅಲ್ಲಿರೋ ಸಗಣಿ ಬಾಚಿ ಅಂಗೇ ಒಂಟೆ ತೊಳೀರಿ ಅಂದು ಲಾಡೆನ್ ಹೋತು. ಎಲ್ಲಾವೂ ಪಿಕಾಲೋ ತಂತೂಚಿ ಆ ಥೂ ಅಂದ್ವು. ಏನ್ ಸಾ. ಒಂಟೇ ತೊಳೆಯೋದು ತಪ್ತು ಅಂತಾವೆ ಕಲಾ. ಲೇ ಉಗಳೋ ತೊಟ್ಟಿ ಮಾನೇಜರ್ ರೂಂನಾಗೆ ಇಡಲೇ. ಮಗಾ ಅವನಿಗೂ ಲಾಡೆನ್ ಅಂದ್ರೆ ಏನೂ ಅಂತಾ ಗೊತ್ತಾಗಲಿ ಅಂದೆ. ಈಗ ಭಯೋತ್ಪಾದಕರ ಸಂದರ್ಸನ ಮಾಡಕ್ಕಿಲ್ಲ.
Comments
ಉ: ಬಿನ್ ಲಾಡೆನ್ ವಿಶೇಷ ಸಂದರ್ಸನ
ಉ: ಬಿನ್ ಲಾಡೆನ್ ವಿಶೇಷ ಸಂದರ್ಸನ
In reply to ಉ: ಬಿನ್ ಲಾಡೆನ್ ವಿಶೇಷ ಸಂದರ್ಸನ by Jayanth Ramachar
ಉ: ಬಿನ್ ಲಾಡೆನ್ ವಿಶೇಷ ಸಂದರ್ಸನ