ಬಿ ಜಿ ಎಲ್ ರ ಪುಸ್ತಕಗಳು
ಬರಹ
೧೯೭೫ರಲ್ಲಿ ಪ್ರಕಟವಾದ ಬಿ ಜಿ ಎಲ್ ರವರ "ಕಾಲೇಜು ರಂಗ" ಪುಸ್ತಕಕ್ಕೆ ಕೀರ್ತಿನಾಥ ಕುರ್ತಕೋಟಿಯವರು ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಯಲ್ಲಿ
"ಕನ್ನಡದಲ್ಲಿ ಇವರು ಹೆಚ್ಚಾಗಿ ಬರೆದಿಲ್ಲ ಬರೆಯಬೇಕಾದದ್ದು ಬಹಳ ಇದೆ... [...] ... ಇನ್ನು ಮೇಲೆ ಪ್ರಕಟವಾಗಲಿರುವ 'ದೌರ್ಗಂಧಿಕಾಪಹರಣ' ಮತ್ತು 'ನೀನಾರ್ಗೆ' ಎಂಬ ಪುಸ್ತಕಗಳು ಸಸ್ಯಶಾಸ್ತ್ರವನ್ನೇ ಆಧಾರವಾಗಿಟ್ಟುಕೊಂಡವುಗಳು"
ಎಂದು ಕುರ್ತಕೋಟಿಯವರು ಬರೆದಿದ್ದಾರೆ.
ಬಿ ಜಿ ಎಲ್ ಸ್ವಾಮಿಯವರ ದೌರ್ಗಂಧಿಕಾಪಹರಣ ನಾನು ಓದಿರುವೆ (ಪುಸ್ತಕ ಎರವಲು ಪಡೆದ ಸ್ನೇಹಿತ ವಾಪಸ್ ತಂದುಕೊಟ್ಟಿಲ್ಲವಷ್ಟೆ). ಆದರೆ ಇವರ 'ನೀನಾರ್ಗೆ' ಎಂಬ ಪುಸ್ತಕದ ಬಗ್ಗೆ ಮೊದಲ ಬಾರಿ ಕೇಳಿಬಂದದ್ದು. ಈ ಪುಸ್ತಕದ ಬಗ್ಗೆ ನಿಮ್ಮಲ್ಲಿ ಯಾರಿಗಾದರೂ ಹೆಚ್ಚು ಮಾಹಿತಿಯಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ