ಬೀಟ್ ರೂಟ್ ಮಿಲ್ಕ್ ಶೇಕ್

ಬೀಟ್ ರೂಟ್ ಮಿಲ್ಕ್ ಶೇಕ್

ಬೇಕಿರುವ ಸಾಮಗ್ರಿ

ತುರಿದ ಬೀಟ್ ರೂಟ್ ಅರ್ಧ ಕಪ್, ಹಾಲು ೧ ಕಪ್, ಬಾದಾಮಿ ಚೂರುಗಳು ೧ ಚಮಚ, ಸಕ್ಕರೆ ೩-೪ ಚಮಚ, ವೆನಿಲ್ಲಾ ಎಸೆನ್ಸ್ ೨ ಬಿಂದು, ಸ್ವಲ್ಪ ಐಸ್ ತುಂಡುಗಳು

 

ತಯಾರಿಸುವ ವಿಧಾನ

ತುರಿದ ಬೀಟ್ ರೂಟ್, ಅರ್ಧ ಕಪ್ ಹಾಲು, ಬಾದಾಮಿ ಚೂರು, ಸಕ್ಕರೆ, ಐಸ್ ತುಂಡು ಹಾಕಿ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ ನಂತರ ಉಳಿದ ಹಾಲನ್ನು ಹಾಕಿ ಸರಿಯಾಗಿ ಬೆರೆಸಿ ಗ್ಲಾಸಿಗೆ ಹಾಕಿ ಸವಿಯಿರಿ. ಈ ಪಾನೀಯದಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ. ಇದು ಆರೋಗ್ಯದಾಯಕ ಮತ್ತು ಉತ್ತಮ ಪಾನೀಯವಾಗಿದೆ.