ಬೀ Chi ಯವರ ಅಂದನಾ ತಿಮ್ಮ

ಬೀ Chi ಯವರ ಅಂದನಾ ತಿಮ್ಮ

 

 

            ಈಗ್ಗೆ 40 ವರ್ಷಗಳ ಹಿಂದೆಯೇ ಒಂದು ಅತ್ಯುತ್ತಮ ಕೃತಿಯನ್ನು ರಚಿಸಿ ಅದರಲ್ಲಿ ಜ್ಞಾನ, ಲೋಕಾನುಭವ ಇವೆರಡನ್ನೂ  ಹದವಾಗಿ ಮಿಶ್ರಮಾಡಿ ನಮ್ಮಂತಹವರಿಗೆ ಬಿಟ್ಟು ಹೋಗಿದ್ದಾರೆ.   ಅದೇ ಅಂದನಾ ತಿಮ್ಮ. ಬೀ Chi ಯವರ ಮಾತಿನಲ್ಲೇ   ಹೇಳಬೇಕೆಂದರೆ ಈ ಕೃತಿ  ಇವರ 51 ನೆ   ಅಪರಾಧ!                  ಈ ಪುಸ್ತಕದ ಮುನ್ನುಡಿಯಲ್ಲಿ ಬೀ Chi ಯವರು " ನಡೆಯುವವನಿಗೆ ಕಾಲು ಮತ್ತು ಗುರಿ ಎರಡೇ ಇದ್ದರೆ ಸಾಲದು, ಮುಖ್ಯವಾಗಿ ಇನ್ನೊಂದು ಬೇಕು--ಕಣ್ಣು . ಅಷ್ಟು ದೂರ ಸಾಗಿಬಂದ ನಂತರ ಕೊಂಚ ನಿಂತು, ವಿಶ್ರಮಿಸಿ, ಒಂದು ಬಾರಿ ಹಿಂದೆ  ತಿರುಗಿ ನೋಡುವುದು ಜಾಣ ದಾರಿಹೋಕನ ಲಕ್ಷಣ. ಎಷ್ಟು ದೂರ ನಡೆದಿದ್ದೇನೆ, ನಡೆದು ಬಂದ ದಾರಿ ಸರಿಯೇ ಎಂಬುದು ಹೆಚ್ಚು ಮುಖ್ಯ. ಇದನ್ನರಿಯಬೇಡವೆ ?  ಆತ್ಮವಿಮರ್ಶೆ ಅವಶ್ಯ.  ಒಂದು ಸಮಗ್ರ ಚಿತ್ರ ಕಣ್ ಮುಂದು ಇರಲೆಂದು ಈ ಪ್ರಯತ್ನ."  ಹೇಳಿದ್ದಾರೆ .

           ಇಂತಹ ಸುಂದರ ಕವನಗಳ ಸಾಲಿನ ಆಯ್ದ ಭಾಗಗಳನ್ನು ಸಂಪದ ಓದುಗರೊಂದಿಗೆ ನಿಯಮಿತವಾಗಿ ಹಂಚಿಕೊಳ್ಳಲು ತುಂಬಾ ಸಂತೋಷ ಪಡುತ್ತೇನೆ.

 

ಸಿಹಿ ಬೇಕು ನಾಲಿಗೆಗೆ, ಕಹಿ ಒಲ್ಲೆನೆಂಬುವುದು |

ಇಹವೆರಡು   ಬಾಳಿನಲಿ ಹಗಲು ರಾತ್ರಿಗಳಂತೆ||

ಕಹಿಉಂಡು ಸಿಹಿ ಉಣ್ಣು,   ಹೇಗಿದೀಗ?|

ಬಹು ಉಪಕಾರಿ ಕಹಿ,  ರುಚಿ ನೋಡು ತಿಂಮ||

 

ದೊಡ್ಡ ಜೇಬಿದೆ ಇವಗೆ ಹೃದಯ ಬಹುಚಿಕ್ಕದು|

ದೊಡ್ಡ ಹೃದಯದವಗೆ ಚಿಕ್ಕ ಜೇಬು ||

ನೋಡಲ್ಲಿ, ಬರಿ ಜೇಬಿನ ಮುಂದು ಹೃದಯ ಹೀನನು |

ಕೈಯೊಡ್ಡಿ ನಿಂತಿಹನು,  ವಿಧಿವಿಲಾಸವಿದು ಕೇಳೋ ತಿಂಮ ||

 

                                                                                                           (ಮುಂದಿನ ದಿನಕ್ಕೆ ಇನ್ನಷ್ಟು)

Comments

Submitted by kavinagaraj Tue, 10/09/2012 - 10:51

<<ನೋಡಲ್ಲಿ, ಬರಿ ಜೇಬಿನ ಮುಂದು ಹೃದಯ ಹೀನನು | ಕೈಯೊಡ್ಡಿ ನಿಂತಿಹನು, ವಿಧಿವಿಲಾಸ>> ವಾಸ್ತವತೆಯ ಕಟು ಚಿತ್ರಣ!! ಧನ್ಯವಾದ, ಪ್ರಕಾಶರೇ.