ಬುದ್ಧಿಗೆ ಕಸರತ್ತು: ಸಂಪದಬಂಧ - ೨

ಬುದ್ಧಿಗೆ ಕಸರತ್ತು: ಸಂಪದಬಂಧ - ೨

ಬರಹ

ಆತ್ಮೀಯ ಸಂಪದಿಗರೇ,

ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರುತ್ತದೆ ಮತ್ತು ಭಾಗವಹಿಸಲು ಅವಕಾಶವಿರುತ್ತದೆ.

ಈ ಬಾರಿಯ ಸಂಪದಬಂಧದ ಉತ್ತರ ಮಾರ್ಚ್ ೨೦ (ಮುಂದಿನ ಮಂಗಳವಾರ) ಪ್ರಕಟವಾಗುತ್ತದೆ.

ಕಳೆದ ಬಾರಿಯಂತೆ ಈ ಸಾರ್ತಿ ಕೂಡಾ ಉತ್ಸಾಹದಿಂದ ಭಾಗವಹಿಸುತ್ತೀರಾ ಎಂದು ಭಾವಿಸಿದ್ದೇನೆ. ತಮ್ಮ ಸಲಹೆ-ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ.

1 2          
    3 4 5    
      6      
  7 8 9 10  
  11  
   
  12 13 14  
      15 16      
    17 18 19    
          20

ಮೇಲಿನಿಂದ ಕೆಳಕ್ಕೆ:
1. ಸತ್ಯ, ಅಹಿಂಸೆಗಳ ಜತೆಗೇ ಇದನ್ನೂ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಒಂದು ಅಸ್ತ್ರವನ್ನಾಗಿ ಬಳಸಿದರು (3)
2. ಗುಹೆ ಎನ್ನುವುದಕ್ಕೆ ಇನ್ನೊಂದು ಪದ (2)
5. "ರತ್ನ" ಎನ್ನುವುದನ್ನು ಸ್ವಲ್ಪ ಹಿಗ್ಗಿಸಿ, ಕಾವ್ಯಾತ್ಮಕವಾಗಿ ಹೀಗೂ ಹೇಳಬಹುದು (3)
7. ಪಂಪ ಕನ್ನಡದ "----" ಎಂದೇ ಹೆಸರಾಗಿದ್ದಾನೆ (4)
8. ಪಾಪ, ಗರ್ಭಿಣಿ ಮಹಿಳೆ ತಿರುಗಿ ನಿಂತಿದ್ದಾಳೇಕೆ? (ಕೆಳಗಿನಿಂದ ಮೇಲಕ್ಕೆ) (3)
9. ತನ್ನ ಗಂಡನಿಗಾಗಿ ಯಮನನ್ನೇ ಸೋಲಿಸಿದಾಕೆ. ಅರವಿಂದರ ಮಹಾಕಾವ್ಯದ ಹೆಸರೂ ಕೂಡಾ (3)
10. "ಡಿಸ್ಕೌಂಟ್" ಎನ್ನುವುದಕ್ಕೆ ಕನ್ನಡ ಪದ ನೆನಪಿಸಿಕೊಳ್ಳಿ ನೋಡೋಣ (4)
11. ಜಹ್ನು ಮಹರ್ಷಿ ತನ್ನ ಕಿವಿಯಿಂದ ಹೊರಬಿಟ್ಟ ಕಾರಣಕ್ಕೆ ಗಂಗಾನದಿಗೆ ಈ ಹೆಸರು ಬಂದಿದೆ (3)
13. ಅಂಚೆಯ ಮೂಲಕ ಬರುತ್ತಿದ್ದ ಪತ್ರಗಳಿಗೆ ಹೀಗೆ ಕೂಡಾ ಕರೆಯುತ್ತಾರೆ ಗೊತ್ತೇ? (3)
14. ಮುನಿಯ ಕೋಪಿಸಿಕೊಂಡು ಕುಳಿತಿದ್ದಾನೆ. ಏಕೆಂದು ಕೇಳುತ್ತೀರಾ? (3)
16. ಎಲೆ-ಅಡಿಕೆಯ ಮಿಶ್ರಣಕ್ಕೆ ಹೀಗೆನ್ನುತ್ತಾರೆ. ಭಿಕ್ಷದವರು "ಇದನ್ನು ನೀಡಿ ತಾಯೀ" ಎಂದೇ ಬೇಡುತ್ತಿದ್ದದ್ದು (3)
18. ಈಗ ನಮಗೆ ಕಾರುಗಳಿರುವಂತೆ, ರಾಜ-ಮಹಾರಾಜರಿಗೆ ಈ ವಾಹನಗಳಿದ್ದವು (2)

ಎಡದಿಂದ ಬಲಕ್ಕೆ:
1. ಕನ್ನಡದ ಪ್ರಸಿದ್ಧ ಲೇಖಕರಾದ ಸುಬ್ರಹ್ಮಣ್ಯ ರಾಜೇ ಅರಸ್ ಅವರ ಕಾವ್ಯನಾಮ ಹೇಳಿ ನೋಡೋಣ? (4)
3. ಶಿವ ಮತ್ತು ವಿಷ್ಣು ಇಬ್ಬರೂ ಈ ಊರಿನಲ್ಲಿ ಒಟ್ಟಿಗೇ ಇದ್ದಾರಲ್ಲ! (4)
4. ಹಕ್ಕ-ಬುಕ್ಕರಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಬೆನ್ನೆಲುಬಾಗಿ ನಿಂತ ಧರ್ಮಗುರು (4)
6. ಕಿತ್ತೂರು ರಾಣಿ ಚೆನ್ನಮ್ಮ ಇದನ್ನು ಕೊಡುವುದಿಲ್ಲವೆಂದೇ ಬ್ರಿಟಿಷರ ವಿರುದ್ಧ ತಿರುಗಿ ನಿಂತದ್ದು (2)
7. ಅಯ್ಯೋ, ಇದು ಪ್ರಾರಂಭವಲ್ಲ! ವ್ಯವಸಾಯ ಎನ್ನುವುದಕ್ಕೆ ಹಳ್ಳಿ ಕಡೆ ಹೀಗೆ ಹೇಳುತ್ತಾರೆ. (3)
9. ಧಾರವಾಡದಲ್ಲಿನ ಸುಪ್ರಸಿದ್ಧ "ಸಾಹಿತಿಗಳ ಬೀದಿ". ಇಲ್ಲಿಗೆ "ಬಾರೋ" ಎಂದೇ ಬೇಂದ್ರೆಯವರು ಕೂಗಿ ಕರೆದದ್ದು. (5)
12. ತೆನಾಲಿರಾಮನಿಗಿದ್ದ ಬಿರುದು. ಎಡದಿಂದ ಅಥವಾ ಬಲದಿಂದ ಹೇಗೆ ಓದಿದರೂ ಅದೇ ಪದ! (5)
14. ಗುರುವಿನ ಗುಲಾಮನಾಗದ ತನಕ ಇದು ದೊರೆಯುವುದಿಲ್ಲ (3)
15. ತೆರಿಗೆ ಎನ್ನುವುದಕ್ಕೆ ಕನ್ನಡ ಪದ. ಹೋಗೀ ಹೋಗೀ "ಇವನ" ಮುಂದೆ ಸುಖ-ದುಃಖ ಹೇಳಿಕೊಡಂತೆ ಎಂಬ ಗಾದೆ ಮಾತೂ ಇದೆ. (2)
17. ಹಳ್ಳಿಗಾಡಿನ ತಿಮ್ಮಕ್ಕ ಇವುಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆಯ ಬಗ್ಗೆ ಏನೆಲ್ಲ ಕ್ರಾಂತಿ ಉಂಟುಮಾಡಿದರು ಅಲ್ಲವೇ? (4)
19. ಕಾಡಿನ ಹೂವು. ನಮ್ಮ ಬದುಕು ಹೀಗಿದ್ದಲ್ಲಿ ಚೆನ್ನ ಎಂದು ಡಿ.ವಿ.ಜಿ. ಹೇಳುತ್ತಾರೆ. (4)
20. ಹಿತ್ತಾಳೆ ಪಾತ್ರೆಯನ್ನು ಹುಣಿಸೇಹಣ್ಣಿನಿಂದ ತಿಕ್ಕಿ ತೊಳೆದರೆ ಹೀಗೆ ಹೊಳೆಯುತ್ತದೆ ಎಂದು ಹೇಳುತ್ತಾರೆ. ಇದೊಂದು ಜೋಡಿಪದ. (4)