ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ನಾಯಿಯೂ
ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಮಹಾ ಮಾರಣ ಹೋಮಕ್ಕೆ ಸಜ್ಜಾಗಿದೆ.. ದುಃಖದ ವಿಷಯವೆಂದರೆ ಮನೇಕಾ ಗಾಂಧಿಯವರು ನಾಯಿಗಳನ್ನು ಸಾಯಿಸ ಬಾರದೆಂದು ಹೇಳಿದ್ದಾರೆ. ಅಂದರೆ ಮಕ್ಕಳ ಜೀವಕ್ಕಿಂತ ನಾಯಿಗಳ ಜೀವ ಅಮೂಲ್ಯವಾದದ್ದು. ಇಲ್ಲಿ ಮುಖ್ಯವಾಗಿ ನಾವು ಚಿಂತಿಸಬೇಕಾದ ವಿಷಯ ನಾಯಿಗಳು ಯಾಕೆ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ? ಇಂದಿನ ನಗರ ಜೀವನದಲ್ಲಿ ಪ್ರಿಡ್ಜ ಸಂಕೃತಿಯಲ್ಲಿ ,ಕಸದ ತೊಟ್ಟಿ ಕಾಣೆಯಾಗುತ್ತಿರುವ ಈ ದಿನಗಳಲ್ಲಿ ಅವಕ್ಕೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಅಲ್ಲದೇ ನಗರ ಪಾಲಿಕೆಯವರೇ ಹೇಳುವಂತೆ ಮಾಂಸದ ಅಂಗಡಿಯವರು ಚುರು ಪಾರುಗಳನ್ನು ಬಿಸಾಡಿ ಅವನ್ನು ರಕ್ತಪಿಪಾಸುಗಳನ್ನಾಗಿ ಮಾಡಿರುವದು. ಇದರಿಂದ ಇಂದು ನಗರ ಸಂಸ್ಕೃತಿಗೆ ನಾಯಿ ಬೆಕ್ಕು ಸಾಕಾಣಿಕೆ ಹೊಂದಾಣಿಕೆ ಆಗುವದಿಲ್ಲ ವಾಗಿ ನಗರ ಸಭೆಯವರು ಇವನ್ನು ಸಾಕುವವರಿಗೆ ಪರವಾನಗಿ ನೀಡುವ ಕಾನೂನು ಮಾಡಬೇಕು. ಅಲ್ಲದೆ ಅಂತವರು ಅವನ್ನು ಸಾಯುವತನಕ ಸಾಕುವ ಜವಾಬ್ದಾರಿ ವಹಿಸಬೇಕು. ತಪ್ಪಿದರೆ ಉಗ್ರ ಶಿಕ್ಷೆ ,ದಂಡ ವಿಧಿಸಬೇಕು.
ಮತ್ತು ಈಗಿರುವ ನಾಯಿಗಳನ್ನು ಪ್ರಾಣಿದಯಾಸಂಘ ದವರಿಗೆ ಕೊಡಬೇಕು. ಅವರಿಗೆ ಇಷ್ಟ ವಿಲ್ಲದವುಗಳನ್ನು ಸಾಯಿಸುವದು ಅನಿವಾರ್ಯ. ಇಂದಿನ ನಗರಸಭೆ ವ್ಯಾಪ್ತಿಯನ್ನು ನಾಯಿ, ಬೆಕ್ಕು ಮುಕ್ತ ಗೊಳಿಸುವದು ಅತ್ಯಾವಶ್ಯಕ. ಯಾಕೆಂದರೆ ಇವೆರಡೂ ಹಸಿದಾಗ ಆಕ್ರಮಣ ಕಾರಿ ಆಗಬಲ್ಲವು. ಇನ್ನೊಂದು ವಿಷಯ, ಮೊನ್ನೆ ಸತ್ತ ಹುಡುಗನ ಕುಟುಂಬಕ್ಕೆ ೧ ಲಕ್ಷ ಪರಿಹಾರ ಕೊಡಲಾಯಿತು. ಎನ್.ಜಿ.ಓ . ಗಳಿಗೆ ನಗರ ಪಾಲಿಕೆ ಈ ಕೆಲಸ ವಹಿಸಿ ಹಣ ಕೊಡುತ್ತಿದೆ ಎಂದಮೇಲೆ ಈ ೧ ಲಕ್ಷವನ್ನು ಅವರಿಂದ ದಂಡ ರೂಪದಲ್ಲಿ ವಸೂಲಿ ಮಾಡಬೇಕು. ಅವರು ನಗರ ಸಭೆಯವರು ತಮಗೆ ಸರಿಯಾಗಿ ಹಣ ಪಾವತಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ ಹಾಗಾದರೆ ಅವರು ನಗರ ಸಭೆಯವರಿಗೆ ನೋಟೀಸ್ ನೀಡಿದ್ದಾರೆಯೆ. ತಮಗೆ ಈ ಕೆಲಸ ನಿರ್ವಹಿಸಲಾಗುವದಿಲ್ಲ ಎಂದು ತಿಳಿಸಿದ್ದಾರೆಯೆ? ಇಲ್ಲ ವೆಂದಾದಮೇಲೆ ಇದಕ್ಕೆ ಅವರೇ ಜವಾಬುದಾರರು. ನಮ್ಮ ಇಂದಿನ ವ್ಯವಸ್ಥೆಯಲ್ಲಿ ದುರಂತ ವೆಂದರೆ ಯಾರಿಗೂ ಹೊಣೆಗಾರಿಕೆ ಇಲ್ಲದಿರುವದು. ಇದರಿಂದ ಕೋಟ್ಯಂತರ ಸಾರ್ವಜನಿಕ ಹಣ ಪೋಲಾಗುತ್ತಿದೆ.
ಆದ್ದರಿಂದ ರಾಜಕೀಯ ದವರ ಸಹಿತ ಎಲ್ಲರಿಗೂ ಹೊಣೆಗಾರಿಕೆ ನಿರ್ಧರಿಸಿ ತಪ್ಪಿದ್ದರೆ ಉಗ್ರ ಶಿಕ್ಷೆ ವಿಧಿಸುವ ಪರಿಪಾಠ ಬಂದರೆ ಆಗ ಲಂಚಾವತಾರವೂ ಕಡಿಮೆ ಆಗುತ್ತದೆ ಸಾರ್ವಜನಿಕ ಹಣ ಪೋಲಾಗುವದೂ ತಪ್ಪುತ್ತದೆ. ಅಲ್ಲದೆ ಇಂತಹ ವಿಚಾರಗಳಿಗೆ ಮಕ್ಕಳು ಅಸಹಾಯಕರು ಜೀವ ತೆರುವದೂ ತಪ್ಪುತ್ತದೆ.
ಅನಂತ ಪಂಡಿತ
Comments
ಕಕ್ಕಿಲಯರ ಲೇಖನ ಓದಿ
In reply to ಕಕ್ಕಿಲಯರ ಲೇಖನ ಓದಿ by hpn
Re: ಕಕ್ಕಿಲಯರ ಲೇಖನ ಓದಿ