ಬೆಂಗಳೂರಿನ ಮಾಲ್ -ಗಳು

ಬೆಂಗಳೂರಿನ ಮಾಲ್ -ಗಳು

Comments

ಬರಹ

ಈಗ ಬೆಂಗಳೂರಿನಲ್ಲಿ ದಿನಸಿ ಅಂಗಡಿಗಳ ಕಾಲ ಮುಗಿದಂತೆ ಆಗಿದೆ. ಎಲ್ಲೆಲ್ಲೂ ಮಾಲ್ -ಗಳ ಹಾವಳಿ. ನಮ್ಮ ಮನೆಗಳಿಗೆ ಬೇಕಾಗುವ ದಿನಬಳಕೆಯ ಪದಾರ್ಥಗಳಿಗಾಗಿ ನಾವು ಈ ಮಾಲ್ಗಳ ಮೇಲೆ ಸಾಕಷ್ಟು ಅವಲಂಬಿತರಾಗಿದ್ದೇವೆ.

ಆದ್ರೆ ಬೆಂಗಳೂರಿನ ಈ ದೊಡ್ಡ ಮಳಿಗೆಗಳು ಇಲ್ಲಿನ ಜನರ ನುಡಿಯಬಗ್ಗೆ, ಇಲ್ಲಿನ ಹಬ್ಬಗಳ ಬಗ್ಗೆ ಅಷ್ಟಾಗಿ ಗಮನ ಹರಿಸಿದಂತೆ ಇಲ್ಲ.. ಇಂತಹ ಮಳಿಗೆಗಳನ್ನು ನಡೆಸುವವರು ಇಲ್ಲಿ ಯಾರೂ ಕನ್ನಡಿಗರು ಬರುವುದಿಲ್ಲವೆಂದು ತಿಳಿದಂತಿದೆ. ದೀಪಾವಳಿ ಹಬ್ಬ ಬಂದಾಗ "ದಿವಾಳಿ" ಯೆಂದು ಕನ್ನಡಿಗರಿಗೆ ಹಾರೈಸುತ್ತಾರೆ. ನಮ್ಮ ಸಂಕ್ರಾಂತಿ ಯುಗಾದಿಗಳ ಬಂದಾಗ ಯಾವೊಂದೂ ವಿಷೇಶತೆ ಇಲ್ಲಿ ಇರುವುದಿಲ್ಲ..

ಇನ್ನು ಇಲ್ಲಿ ಸಿಗುವ ಪದಾರ್ಥಗಳ ಮೇಲೆ ಇರುವ ಹೆಸರುಗಳೋ, ದೇವರಿಗೇ(??) ಪ್ರೀತಿ.. ನಮಗೆ ಇಲ್ಲಿ ಬೇಳೆಗಳು ಬೂದುಗಾಜು ಇಟ್ಟು ಹುಡುಕಿದರೂ ಸಿಗಲಾರವು. ಸಿಗುವುದೇನಿದ್ದರೂ ದಾಲ್-ಗಳು.ಯಾವುದೋ ಒಂದು ಪ್ಯಾಕ್ ಮೇಲೆ CHE-MOONG ಅನ್ತ ಇರತ್ತೆ. ಇದೇನು chemical ವಸ್ತುಅಲ್ಲ.. ನೋಡುದ್ರೆ ಹೆಸ್ರು-ಬೇಳೆ.. ಒಮ್ಮೆ ಈ ವಸ್ಥುಗಳೇನಾದ್ರೂ ಬೇರೆ ರಾಜ್ಯಗಳಿಂದ ಪ್ಯಾಕ್ ಆಗಿ ಬಂದಿವೆಯೇನೋ ಅಂತ ನೋಡಿದ್ರೆ, ಅವೆಲ್ಲ ಇಲ್ಲೆ ನಮ್ಮ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲೋ, ಇಲ್ಲ ಕಗ್ಗದಾಸಪುರದಲ್ಲೋ, ಕನಕಪುರದಲ್ಲೋ ಆಗಿರುತ್ತವೆ. ಇಲ್ಲೆ ಪ್ಯಾಕ್ ಮಾಡಲಾಗುತ್ತಿರುವ ಈ ವಸ್ತುಗಳಿಗೆ ಕನ್ನಡದ ಹೆಸರುಗಳನ್ನು ಹಾಕಲು ಇವರಿಗೇನು ಕಷ್ಟ ಅಂತ ನನಗೆ ತಿಳಿಯಲಿಲ್ಲ. ಕನ್ನಡಿಗರಿಗೆಲ್ಲಾ ಎಲ್ಲಾ ಬೇಳೆಗಳ ಕಾಳುಗಳ ಹಿಂದಿ ಹೆಸರುಗಳನ್ನು ಕಲಿಸುವುದೇ ಇವರ ಮುಖ್ಯ ಉದ್ದೇಶವಾಗಿರಬಹುದು. 

ಇವರುಗಳು ಪತ್ರಿಕೆಗಳಲ್ಲಿ ಕೊಡುವ ಜಾಹೀರಾತುಗಳಲ್ಲು ತರಕಾರಿಗಳ ಹೆಸರುಗಳು ಹಿಂದಿಯಲ್ಲಿರುತ್ತವೆ. ಗೋಡಂಬಿ ದ್ರಾಕ್ಷಿಗಳು ಕಾಜು-ಕಿಸ್ಮಿಸ್ ಆಗಿರುತ್ತವೆ.(ಇಂಗ್ಲೀಷಿನಲ್ಲಿ ಇವುಗಳ ಹೆಸರು ಏನೆಂದು ಇವರ ಮಾರ್ಕೆಟಿಂಗ್ ಟೀಮ್-ಗೆ ಗೊತ್ತಿಲ್ಲದಿರಬಹುದು)..  

ಒಂದು ವರದಿಯ ಪ್ರಕಾರ ಬೆಂಗಳೂರಿನಲ್ಲಿ ಮಾಲ್-ಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿರುವುದು: ಅತೀ ಹೆಚ್ಚು ಕೊಳ್ಳುವ ಸಾಮರ್ಥ್ಯ ಇರುವುದು ಕನ್ನಡಿಗರಿಗೆ(http://epaper.timesofindia.com/Repository/ml.asp?Ref=VE9JQkcvMjAwOC8wMS8yMiNBcjAyMDAy&Mode=HTML&Locale=english-skin-custom). ವಿಷ್ಯ ಹೀಗಿದ್ರೂ ಸಹ ಈ ದೊಡ್ಡ ಮಳಿಗೆಗಳವರು..(spencers, total, big-bazar) ಇವರೆಲ್ಲ ಕನ್ನಡವನ್ನ ಬಳಸುವುದರಲ್ಲಿ ಏಕೆ ಹಿಂದೆ ಬಿದ್ದಿದ್ದಾರೆ?

ಗ್ರಾಹಕರಾಗಿ ನಾವು ಇಂತಹ ಜಾಗಗಳಲ್ಲಿ ಕನ್ನಡಕ್ಕಾಗಿ ಒತ್ತಾಯ ಮಾಡಬೇಕು ಎಂಬುದು ನನ್ನ ಅನಿಸಿಕೆ. ಹೀಗೆ ಮಾಡುವುದರಿಂದ ನಮಗೇ ಒಳ್ಳೆಯದು. ನಾವು ಕನ್ನಡಕ್ಕಾಗಿ ಕೇಳೀದಷ್ಟೂ ಇಲ್ಲಿ ಕನ್ನಡಿಗ ಕೆಲಸಗಾರರಿಗೆ ಬೇಡಿಕೆ ಹುಟ್ಟುತ್ತದೆ. ನಮ್ಮ ವಸ್ತುಗಳು ನಮ್ಮ ನುಡಿಯ ಹೆಸರುಗಳನ್ನೇ ಪಡೆಯುತ್ತವೆ.. ಏನಂತೀರಿ?
 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet