ಬೆಂಗಳೂರು ಅನ್ನುವ ಮಾಯಾನಗರಿ...................................

ಬೆಂಗಳೂರು ಅನ್ನುವ ಮಾಯಾನಗರಿ...................................

ಬರಹ

ಇವತ್ತು ನಾನು ಕಂಪನಿಗೆ ಬರಲಿಕ್ಕೆ ನಮ್ಮ ಸ್ಟಾಪ್ ಹತ್ತಿರ ಕಂಪನಿ ಗಾಡಿಗಾಗಿ ಕಾಯುತ್ತಾ ಇದ್ದೆ. ಆಗ ನಮ್ಮ ಪಕ್ಕದಲ್ಲೆ ಒಂದು ಹೆಂಗಸು ಅವಳ ಮಗುವಿನ ಶಾಲೆಯ ಗಾಡಿಗಾಗಿ ಕಾದು ಆ ಗಾಡಿ ಬಂದ ಮೇಲೆ ಮಗೂನ ಒಳಗೆ ಕೂರಿಸಿ ಆ ಗಾಡಿ ಕಣ್ಮರೆಯಾಗುವ ವರೆಗೆ ಆ ಮಗುವಿಗೆ ಟಾಟ ಮಾಡುತ್ತಾ ಇದ್ದಳು ಮತ್ತೆ ಆ ಮಗೂನೂ ಕೂಡ ತನ್ನ ತಾಯಿಗೆ ಟಾಟ ಮಾಡುತ್ತಾ ಇತ್ತು.
ಇದನ್ನ ನೋಡಿ ನನ್ನ ಆ ಬಾಲ್ಯದ ದಿನಗಳು ಮತ್ತೆ ನನಗೆ ಮರಕಳಿಸುವಂತೆ ಬಾಸವಾಯಿತು.

ಹೌದು ರೀ ಎಲ್ಲರೂ ಬೆಂಗಳೂರನ್ನ ಸಿಲಿಕಾನ್ ಸಿಟಿ,ಉದ್ಯಾನ ನಗರಿ, ಮಾಯ ನಗರಿ ಅಂಥ ಅವರವ ಭಾವನೆಗಳಿಗೆ ತಕ್ಕಂತೆ ಕರೆಯುತ್ತಾರೆ ,ಅದೇ ರೀತಿ ಈ ಮಾಯನಗರಿಯ ಮಾಯಲೋಕಕ್ಕೆ ಮರುಳಾದವರಲ್ಲಿ ನಾನು ಒಬ್ಬ. ಬೆಂಗಳೂರಿಗೆ ಬಂದ ಮೊದಲ ದಿನಗಳಲಿ ,ಅಯ್ಯೋ ನಾನು ಯಾವುದೋ ಪ್ರಪಂಚಕ್ಕೆ ಬಂದಿದ್ದಿನೋ ಅನ್ನೋ ಭಾವನೆ ಮೂಡಿದಂತಹ ದಿನಗಳು ಏಕೆಂದರೆ ಪರಿಚಯವಿಲ್ಲದ ಜನ , ಆರ್ಥವಾಗದೆ ಇರೊ ಭಾಷೆಗಳು ,ಸಹಾಯಕ್ಕೆ ಸ್ಪಂದಿಸದ ಕೆಲವು ಜನಸಾಮಾನ್ಯರು ಇದೆಲ್ಲದರ ನಡುವೆನೆ ನನ್ನ ಕಾಲೇಜು ತದನಂತರ ಬೆಂಗಳೂರಲ್ಲೆ ಕೆಲಸ ಆಗಾಗಿ ಬೆಂಗಳೂರು ನಿದಾನವಾಗಿ ಹೊಂದುಕೊಳ್ಳುತ್ತು (ಹೋಂದುಕೊಳ್ಳುತ್ತು ಅನ್ನುವುದಕ್ಕಿಂತ ನಾನೆ ಹೊಂದುಕೊಂಡೆ ಅಂಥ ಹೇಳೋದೆ ಸರಿ)
ನನ್ನನ್ನ ಒಂದು ನಿಮಿಷವು ಬಿಟ್ಟಿರದ ನನ್ನ ತಾಯಿ ಮತ್ತು ನಾನು ಕೂಡ ಅವಳನ್ನ ಬಿಟ್ಟು ಇರುತಿರಲ್ಲಿಲ್ಲ ಕಾರಣ ಇಷ್ಟೇ ನನ್ನ ತಾಯಿಗೆ ನಾನು ಒಬ್ಬನೆ ಮಗ ಅದಲ್ಲದೆ ನನ್ನ ತಾಯಿಗೆ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳನ್ನ ಕಂಡರೆ ಸ್ವಲ್ಪ ಪ್ರಿತಿ ಜ್ಯಾಸ್ತಿ ,ಮನೆಯಲ್ಲಿ ಎಲ್ಲರಿಗಿಂತಲೂ ನಾನೇ ಚಿಕ್ಕವನು ಬೇರೆ ಇನ್ನು ಕೇಳಬೇಕ ಎಲ್ಲರಿಗೂ ನನ್ನ ಕಂಡರೆ ಪ್ರಿತಿ ಇದು ನನ್ನ ಹೆಗ್ಗಳಿಕೆ .
ನನ್ನ ಶಾಲೆ ದಿನಗಳಲ್ಲಿ ನಮ್ಮ ಗುರುಗಳು ಏನಾದರೂ ಪ್ರವಾಸಕ್ಕೆ ಹೋಗಬೇಕು ಕಳಿಸಿಕೊಡಿ ಅಂಥ ಹೇಳಿದರೆ ಸಾಕು ಅದಕ್ಕೆ ನಮ್ಮ ತಾಯಿ ಹೇಳುತ್ತಾ ಇದ್ದರೂ ಮುರು ನಾಲ್ಕು ದಿನನಾ , ಮುರು ನಾಲ್ಕು ದಿನ ನನ್ನ ಮಗನ ಬಿಟ್ಟು ಇರಬೇಕಾ ಮುರು ದಿನ ನನಗೆ ಮುನ್ನುರು ವರುಷ ತರಹ ಕಾಣುತ್ತೆ ನಾನು ಕಳಿಸಲ್ಲ ಅಂಥ ಹೇಳುತಿದ್ದರು.ನಾನು ಎಲ್ಲಿಗೆನಾದರು ಹೋಗಬೇಕಿದ್ದರೆ ಅದು ಒಂದು ದಿನಕ್ಕೆ ಸಿಮಿತಾವಾಗಿರಬೇಕು ನಾನು ಬರೋವರೆಗು ಅವರು ಊಟನೆ ಮಾಡುತಿರಲ್ಲಿಲ್ಲ ಆದರು ಅವರ ಕಣ್ಣು ತಪ್ಪಿಸಿ ಗಲಾಟೆಗೆ ಮತ್ತೆ ಬಂದ್ ಗೆ ಲ್ಲಾ ಹೋಗ್ತೀದ್ದೆ ಮನೆಯಲ್ಲಿ ಅಕ್ಕ,ಅಪ್ಪ ಎಲ್ಲಾ ಬೈಯೋದೇ ನಿನಗೆ ಯಾಕೊ ಊರಿನ ಊಸಾಬರೆ ಅಂಥ ಅದರೆ ಅಮ್ಮ ಮಾತ್ರ ನನ್ನ ಸಹಾಯಕ್ಕೆ ನಿಲ್ಲುತಿದ್ದರು ,ಅವರು ಆವಾಗ್ಗ ಆವಾಗ ಒಂದು ಮಾತನ್ನ ಹೇಳುತ್ತಿದ್ದರು ನಮ್ಮ ಅಕ್ಕ ಮತ್ತೆ ತಂದೆ ಹತ್ತಿರ ನನ್ನ ಮಗ ಹಾಳಾಗದೆ ನಾಲ್ಕು ಜನಕ್ಕೆ ಉಪಕಾರಿಯಾದರೆ ಸಾಕು ಆ ನಾಲ್ಕು ಜನ ನನ್ನ ಮಗನ್ನ ನಿನ್ನ ಹೆತ್ತರು ಎಂಥ ಪುಣ್ಯಶಾಲಿಗಳು ಇಂಥ ಮಗನ್ನ ಪಡೆದ್ದಿದ್ದಾರೆ ಅಂಥ ಹೇಳಿದರೆ ಸಾಕು ಅದೆ ತಾನೆ ಮಕ್ಕಳು ಹೇತ್ತವರಿಗೆ ತಂದು ಕೊಡೊ ಗೌರವ ,ಬಹುಶಃ ಚಿಕ್ಕಂದಿನಿಂದ ನನ್ನ ತಾಯಿ ಹೇಳೋ ಮಾತೆ ಬೆಂಗಳೂರಲ್ಲೂ ಕೂಡ ನಮ್ಮ ನಾಡು ನುಡಿಗೆ ಹೋರಾಡುವುದಕ್ಕೆ ಪ್ರೇರೆಪಿಸುತಿರುವುದು.
ಒಂದು ದಿನನೂ ಬಿಟ್ಟು ಇರದವರು ನನ್ನನ್ನ ಓದಲಿಕ್ಕೆ ಅಂಥ ಬೆಂಗಳೂರಿಗೆ ಹೇಗೆ ಕಳಿಸಿದರೋ ,ಕಳಿಸಿದ ಮ್ಯಾಲೆ ಅವರ ಮನಸ್ಸು ಹೇಗೆ ಸಮಾದಾನ ಮಾಡಿಕೊಂಡರೋ ಅದಕ್ಕೆ ಆ ದೇವರೆ ಬಲ್ಲ ,ನಾನು ಕಾಲೇಜು ದಿನಗಳಿಂದ ಹಿಡಿದು ಇಲ್ಲಿಯವರೆಗೂ ವಾರಕ್ಕೆ ಒಂದು ಅಥಾವ ಎರಡು ಸಾರಿ ಯಾದರೋ ಹೋಗಲೇಬೇಕು ಇಲ್ಲಾವಾದರೆ ದಿನಕ್ಕೊಮ್ಮೆ ಯಾದರೊ ಮನೆಗೆ ಪೋನ್ ಮಾಡಬೇಕು.
ನಮ್ಮ ತಂದೆ ಹೇಳುತ್ತಾ ಇರುತ್ತಾರೆ ನಮ್ಮ ತಾಯಿ ಹತ್ತಿರ ನಿನ್ನ ಇಷ್ಟು ಪಟ್ಟಂತೆ ಓದಿಸಿ ಆಯಿತ್ತು ಇನ್ಯಾಕೆ ಕೆಲಸ ಮಾಡಬೇಕು ಇರೋದನ್ನ ನೋಡಿಕೊಂಡು ಹೋದರೆ ಸಾಕಲ್ಲವ ಅಂಥ ,ಆದರೆ ನಮ್ಮ ತಾಯಿ ಆಸೆನೆ ಬೇರೆ ಅಪ್ಪ ಹಾಕಿದ ಆಲದ ಮರ ಅಂಥ ಇಲ್ಲೆ ಸಾಯುವುದಕ್ಕಿಂತ ನನ್ನ ಮಗ ಅವನ ಜೀವನದಲ್ಲಿ ಏನಾದರೊ ಸಾದಿಸಬೇಕು ಅನ್ನೋದೆ ಅವಳ ಆಸೆ ಅದನ್ನ ನಾನು ಯಾವಾಗ ಅವರ ಕನಸನ್ನ ನನಸು ಮಾಡುತಿನೋ ನನಗೆ ಗೊತ್ತಿಲ್ಲ.

ಆದರೆ ನಾನು ನನ್ನ ತಾಯಿಯನ್ನ ನೋಡಿ ಹತ್ತಿರ ೨ ತಿಂಗಳಾಯಿತು ಕಾರಣ ಬೆಂಗಳೂರಿನಲ್ಲಿ ನನ್ನ ಕಣ್ಣು ಮುಂದೆ ನೆ ಒಂದರ ಹಿಂದೆ ನಡೆದ ಅಪಘಾತ ನನ್ನ ಮನಸ್ಸಿಗೆ ತುಂಬನೆ ಘಾಸಿಯಾಯಿತು ,ಆ ಘಟನೆಗಳನ್ನ ಇನೋಂದು ಸಂಚಿಕೆಯಲ್ಲಿ ಬರೆಯುತ್ತೆನೆ

ಇಂದು ನಾನು ಬೆಳ್ಳಿಗ್ಗೆ ಆ ತಾಯಿ ಮತ್ತು ಮಗೂ ನೋಡಿದ ಮ್ಯಾಲೆ ನನ್ನ ತಾಯಿನ ನೋಡಬೇಕೆನ್ನುವ ಆಸೆ ಹೆಚ್ಚಾಯಿತು ಮತ್ತು ೨ ತಿಂಗಳಿಂದಲೂ ನನ್ನ ಮುಖನ ಅವರಿಗೆ ತೋರಿಸದೆ ಅವರ ಮನಸ್ಸನ್ನ ನೋವುನುಂಟು ಮಾಡಿದೆನೊ ಅನ್ನೋ ಭಾವನೆ ಯೋಚಿಸುತಿರುವಾಗಲೇ ನಮ್ಮ ಕಂಪನಿ ಗಾಡಿ ಬಂತು ,ನಾನು ಗಾಡಿ ಒಳಗೆ ಕೂತ ತಕ್ಷಣನೆ ಇದೆ ವಿಷಯವನ್ನ ನನ್ನ ಗೆಳೆಯನ ಜೊತೆ ಹೇಳಿದೆ ಅದಕ್ಕೆ ಅವನು ಹೇಳಿದ ಇದಕ್ಕೆ ನೀನೆ ಪರವಾಗಿಲ್ಲ ಬರಿ ೨ ತಿಂಗಳಿಗೆ ಈ ತರಹ ಯೋಚನೆ ಮಾಡುತ್ತಾ ಇದ್ದಿಯಾ ಆದರೆ ನಾನು ನಮ್ಮ ತಾಯಿ ನೋಡಿ ಮತ್ತು ಊರಿಗೆ ಹೋಗಿ ಸುಮಾರು ಒಂದೆರಡು ವರುಷವೆ ಆಯಿತು ಇದನ್ನ ಕೇಳಿ ಏಕಕಾಲದಲ್ಲಿ ವ್ಯಥೆ ಮತ್ತೆ ಆಶ್ಚರ್ಯವೆ ಆಯಿತು

ಯಾಕೆ ಈ ತರಹ ಅಂಥ ಕೇಳಿದ್ದಕ್ಕೆ ಅವನ ಉತ್ತರ ಇಷ್ಟೆ .. ಏನು ಮಾಡೋದು ಕೆಲಸ ,ವಾತವರಣ ಮತ್ತೆ ಇಲ್ಲಿನ ಮೋಜು ,ಇಲ್ಲಿ ಯಾರ ತೊಂದರೆ ಇಲ್ಲದೆ ಏಕಾಂಗಿಯಾಗಿರಬಹುದು ಇದೆಲ್ಲಾ ನನ್ನನ್ನ ಅಲ್ಲಿಗೆ ಹೋಗದ್ದ ಹಾಗೆ ಮಾಡಿದೆ ಅಲ್ಲಿಗೆ ಹೋದರೆ ಅಲ್ಲೆನಿದೆ ಅವರನ್ನ ನೋಡಬೆಕೆಂದರೆ ಪೋನ್ ಮಾಡುತೆನೆ ಅವರು ಇಲ್ಲಿಗೆ ಬರುತ್ತಾರೆ ಅಷ್ಟೆ, ಅಲ್ಲಾ ಅವನ ಉತ್ತರ ಎಷ್ಟು ಸಿಂಪಲ್ ಆಗಿದೆ ಅವನು ಹುಟ್ಟಿ ಆಡಿ ಬೆಳೆದ ಊರನ್ನೆ ಯಾಕೆ ಅವರ ಬಂದು ಬಳಗವನ್ನೆ ಮರೆಸಿದೆ ಈ ಮಾಯನಗರಿ ,ಕೆಲವರು ಬಯಸುವ ಏಕಾಂಗಿ ತನವನ್ನ ಯಾಕೆ ? . ನಮ್ಮಂತಹ ಯುವಕರು ಯಾಕೆ ಒಂಟಿ ಜೀವನ ಬಯೋಸೋದು ನಾ ಕಾಣೆ ,ಇದನ್ನೆಲ್ಲಾ ಕೇಳಿದ ತಕ್ಷಣವೆ ನಮ್ಮ ತಾಯಿಗೆ ಪೋನ್ ಮಾಡಿದೆ ,ಮಾಡಿದ ಮ್ಯಾಲೆ ನನ್ನ ಮನಸ್ಸಿಗೆ ಸಮಾದಾನವಾಯಿತು ,ಆದರೆ ಮನಸ್ಸು ಮಾತ್ರ ಏಕಾಂತದ ಬಗ್ಗೆ ಯೋಚಿಸುತ್ತಾ ಸಾಗಿತ್ತು ಉತ್ತರ ಮಾತ್ರ ಸೂನ್ಯ

ಏಯ್ ಮಾಯಾನಗರಿ ನೀ ಎಷ್ಟು ಮಾಯೆ ಯಾಕೆ ಎಲ್ಲರೂ ಮೋಹಗೋಳ್ಳುವರು ನಿನ್ನಲ್ಲಿ ?

ನಿಮ್ಮವ

ಮಧುಸೂದನ್ ಗೌಡ