ಬೆಟ್ಟಗಳ ಮಧ್ಯಾನ್ಹದ ಜೋಂಪು

ಬೆಟ್ಟಗಳ ಮಧ್ಯಾನ್ಹದ ಜೋಂಪು

ಬರಹ

ಬಿರು ಬಿಸಿಲಿನ ಜಳಕೆ ಬಳಲಿ ಬಸವಳಿದು ಮಲಗಿವೆ ಬೆಟ್ಟಗಳು...!!!
ಮಲಗಿವೆ ಬೆಟ್ಟಗಳು ಮೋಡಗಳ ಹೊದಿಕೆ ಹೊದ್ದು!!!

ಪಾಪ ಇರುವುದೊಂದೆ ಹೊದಿಕೆ, ಬಿಳಿಮೋಡದ ಹೊದಿಕೆ...!!
ಈ ಬೆಟ್ಟದಿಂದ ಆ ಬೆಟ್ಟಕೆ, ಅದರಿಂದ ಮತ್ತೊಂದಕೆ
ಹೀಗೇ ಹೊತ್ತು ಹೊದಿಸಿ ನಡೆಯುತ್ತಾನೆ ಗಾಳಿರಾಯ!!!
ಒಂದೇ ಹೊದಿಕೆಯ ಎಲ್ಲರಿಗೂ ಹೊದಿಸುತ್ತಾ ಸಾಗುತ್ತಾನೆ..
ಐಕ್ಯಮತವ ಸಾರುತಾ!!!

ಬಿಸಿಲಲಿ ಬಸವಳಿದಾಗ, ಬೆವರೊಳು ತೋಯ್ದು ಹೋದಾಗ...
ಅದೇ ಸಮಯದಿ ಈ ಹೊದಿಕೆಯ ನೆಳಲು ಬಂದಾಗ...
ಮತ್ತದರ ಜೊತೆಯಲಿ ಬಿಸಿಗಾಳಿ ತೀಡಿದಾಗ...
ಬೆವರಿದಾ ದೇಹ ತಣ್ಣಗಾಯ್ತು ಬೀಸಿದ ಬಿಸಿಗಾಳಿಗೆ
ಹಾಗೇ ಜೋಂಪು ಬಂದು ನಿದ್ರೆಯಲಿ ಜಾರಿತ್ತು....!!!

ಸರಿ ಇನ್ನೇನು ಮಧ್ಯಾಹ್ನದ ಕನಸು ಕಾಣಬೇಕು...
ಅಷ್ಟರಲ್ಲೇ ಸುಡುಬಿಸಿಲು ಚುರುಗುಟ್ಟಿತ್ತು...!!
ಹೊದಿಕೆ ಸರಿದಿತ್ತು!! ಬಿಸಿಲ ಬಿಸಿ ಹರಡಿತ್ತು....!!
ಗಾಳಿರಾಯ ಆ ಹೊದಿಕೆಯ ಹೊತ್ತು ನಡೆದಿದ್ದ..
ಮತ್ತೊಂದಕೆ ಹೊದಿಸಲು!!!!

ಸಂಕೇತ್ ಗುರುದತ್ತ,
ಹೈದರಾಬಾದ್