ಬೆತ್ತಲಾದವರು

ಬೆತ್ತಲಾದವರು

ಕವನ

ಹೌದು ಬೆತ್ತಲಾದವರು ನಾವು

ಜಗತ್ತಿನ ಕಣ್ಣಿಗೆ ಬಹುದೊಡ್ಡ ಪ್ರಜಾಪ್ರಭುತ್ವ ಅನಿಸಿಕೊಂಡ

ಭಾರತೀಯ ಜನಸಾಮಾನ್ಯರಾದ ನಾವು

ಇಲ್ಲಿನ ಸಂವಿಧಾನದ ಒಳಗಿನ ರಾಜಕೀಯಕ್ಕೆ ಸಿಲುಕಿ ಬೆತ್ತಲಾದವರು !

 

ಬೆತ್ತಲಾಗಲು ಕಾರಣ ಒಂದೇ ಎರಡೇ ?

ಮಾನವ ಹಕ್ಕುಗಳ ಧಮನ ,ವ್ಯವಸ್ಥಿತ ವ್ಯವಸ್ಥೆಯ ಸಂಚು ;  

ಬಲಿಯಾದವನು ಬಲಿಯಾಗುತ್ತಿರುವವನು 

ಮಾತ್ರ ಜನಸಾಮಾನ್ಯ ! 

 

ಆದರೆ ಪ್ರಜಾಪ್ರಭುತ್ವ ಇದರ ಅಣಕ ನೋಡಿ ?! 

ಯಾರು ಹಣದಾಸೆಗೆ ಆಸೆ ಪಡದೇ ಜನರ ಸೇವೆಯನು 

ಸೇವಾ ಮನೋಭಾವದಿಂದ ಮಾಡಬೇಕೋ 

ಅವರೇ ಲಂಚದ ಜೊತೆಗೆ ಸಾವತನಕ ಪೆನ್ಸನ್ ಹಣದಿಂದ ಬದುಕುತಿಹರು ! 

ಇದನ್ನು ಪ್ರಶ್ನಿಸುವ ಹಕ್ಕೇ ಪ್ರಜಾಪ್ರಭುತ್ವ ದ ಸಂವಿಧಾನದಲ್ಲಿಲ್ಲ ?! 

ಎಂಥಾ ಸೋಜಿಗ ಈ ದೇಶ ? 

ಈ ದೇಶದ ಕಾನೂನು ಸುವ್ಯವಸ್ಥೆ !

 

ಅದೇ ಒಬ್ಬ ಬಡಪಾಯಿ ಪೆನ್ಸನ್ ದಾರನ 

ಸಾವಿರಾರು ರೂಪಾಯಿಗೆ ತಂದಿದ್ದಾರೆ ಸಂಚಕಾರ . 

ನ್ಯಾಯ ಎಲ್ಲಿದೆಯೆಂದರೆ ನ್ಯಾಯಕೊಡುವವರಿಗೆ 

ಮತ್ತು ಕೊಟ್ಟ ನ್ಯಾಯವನ್ನು ಕೂಲಂಕುಷವಾಗಿ ಅಧ್ಯಯನ 

ಮಾಡದೆ ಪರಿಪಾಲಿಸುವ ಸರಕಾರ ಐ ಪಿ ಯೆ ಸ್ ಅಧಿಕಾರಿ ವರ್ಗದವರಿಗೆ ?! 

ಯಾಕೆಂದರೆ ಅವರು ಸಾವತನಕ ಅವರ ಪಿಂಚಣಿಗೇನು ಕೊರತೆ ಇಲ್ಲ! 

ಇರುವುದೆಲ್ಲ ಬಡಪಾಯಿ ಪಿಂಚಣಿದಾರನಿಗೆ ಮಾತ್ರ ?!

ಇದು ಪ್ರಜಾಪ್ರಭುತ್ವ !

ಇದು ಮಾನವ ಹಕ್ಕುಗಳು !

ಇದು ಸಂವಿಧಾನ !

 

ಇನ್ಯಾರಿಗೆ ಹೇಳೋಣವೆಂದರೆ ? 

ಇಂತಹ ಭಾರತ ನೆಲದಲ್ಲಿ ಹುಟ್ಟಿದ ತಪ್ಪಿಗೆ 

ಪತಿವೃತೆಯಾದ ಸೀತಾಮಾತೆಯನ್ನು ಭೂಮಾತೆ ತನ್ನೊಡಲಿಗೆ 

ಸೇರಿಸಿಕೊಂಡಂತೆಯೇ ಪಿಂಚಣಿಯ ಪಡೆವ ಜನಸಾಮಾನ್ಯರನ್ನೂ 

ಭೂಮಾತೆ ಬಾಯಿತೆರೆದು ತನ್ನೊಡಲೊಳಗೆ ಸೆಳೆದುಕೊಳ್ಳಬಾರದೆ 

ಶಾಶ್ವತ ಪರಿಹಾರವನ್ನು ನೀಡಬಾರದೆ ?!

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್