ಬೆಲ್ಲದ ತಾಕತ್ತು, ಸವಿದವನಿಗೇ ಗೊತ್ತು ! (ಭಾಗ ೧)

ಬೆಲ್ಲದ ತಾಕತ್ತು, ಸವಿದವನಿಗೇ ಗೊತ್ತು ! (ಭಾಗ ೧)

ಬೆಲ್ಲ ಬಹುತೇಕ ಜನರಿಗೆ ಗೊತ್ತು ಇದನ್ನು ನಾವೆಲ್ಲರೂ ಸಿಹಿ ಖಾದ್ಯಗಳ ತಯಾರಿಕೆಯಲ್ಲಿ ಬಳಸುತ್ತೇವೆ ಅಂತಾ. ಹಾಗಾಗಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಅನೇಕ ಕಡೆಗಳಲ್ಲಿ ಬಳಸಲಾಗುತ್ತದೆ. ಹಬ್ಬದ ದಿನಗಳಂದು ವಿಶೇಷ ಸಿಹಿ ತಿಂಡಿ ತಯಾರಿಕೆಯಲ್ಲಿ ಬಹುತೇಕ ಬೆಲ್ಲವನ್ನೇ ಬಳಸುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯವಾಗಿದೆ.

ಸಾಮಾನ್ಯವಾಗಿ ಜನರು ಊಟವಾದ ಮೇಲೆ ಬೆಲ್ಲ ತಿನ್ನುತ್ತಾರೆ. ಆದರೆ ಅದೇಕೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ಕಾರಣದಿಂದ ಈ ಸಹಜ ಸಿಹಿ ಭಾರತದಲ್ಲಿ ಅತೀ ಜನಪ್ರಿಯ ಹಾಗಾಗಿ ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ನಾವೆಲ್ಲರೂ ಕಂಡಿದ್ದೇವೆ.ವಿಶೇಷವೆಂದರೆ ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚಿನ ಆರೋಗ್ಯಕಾರಿ ಉಪಯೋಗಳು ಇರುವುದರಿಂದ ಅದು ಸಕ್ಕರೆಗಿಂತ ವಿಶೇಷ ಎನಿಸಿದೆ. ಹಾಗಾದರೆ ಬೆಲ್ಲದ ತಾಕತ್ತಿನ ಪ್ರಾಮುಖ್ಯತೆ ಹಾಗೂ ಅದರಿಂದಾಗುವ ಪ್ರಯೋಜನ ಏನೆಂಬುದನ್ನು ನಾವೆಲ್ಲರೂ ತಿಳಿಯಲೇಬೇಕಾಗಿದೆ.  ಈ ಹಿನ್ನೆಲೆಯಲ್ಲಿ ಬೆಲ್ಲವು ಯಾವ ರೀತಿಯಲ್ಲಿ ಮಾನವರಿಗೆ ಸಹಕಾರಿ ಮತ್ತು ಉಪಯೋಗವಾಗುತ್ತದೆ ಎಂಬುದು ಇಲ್ಲಿ ತಿಳಿಸಲು ಸಣ್ಣ ಪ್ರಯತ್ನ ಮಾಡಲಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ ಬೆಲ್ಲದ ತಾಕತ್ತು : ಮನುಷ್ಯನ ಜೀರ್ಣಕ್ರಿಯೆ ಚನ್ನಾಗಿಯಾಗಿ ಸಾಗಿದರೆ, ಆ ಮನುಷ್ಯನಿಗೆ ಖಂಡಿತಾವಾಗಿಯೂ ಯಾವುದೇ ರೋಗ ಬರುವುದಿಲ್ಲ ಎನ್ನುವ ಮಾತು ಸತ್ಯವಾದರೆ.ಇನ್ನೊಂದು ಕಡೆಯಲ್ಲಿ ಒಂದು ವೇಳೆ ಆ ಮಾನವನಿಗೆ ಪಚನಕ್ರಿಯೆ ಸರಿಯಾಗಿ ಆಗದೇ ಹೋದರೆ, ಆ ವ್ಯಕ್ತಿಗೆ ನೂರಾರು ಕಾಯಿಲೆಗಳು ಖಂಡಿತಾ ಆವರಿಸಿಕೊಳ್ಳುತ್ತವೆ - ಆವರಿಸಿಕೊಳ್ಳಬಹುದಾಗಿದೆ ಎಂಬ ಮಾತು ನಿಜ.ಆದರಿಂದ ಈ ದಿಸೆಯಲ್ಲಿ ಬೆಲ್ಲದ ತಾಕತ್ತಿನ ಅಂಶಗಳನ್ನು ನಾವು ಇಲ್ಲಿ ಗಮನಿಸಿದಾಗ ಇದರ ಶಕ್ತಿ ಸಾಮರ್ಥ್ಯ ಎಂತಹದು ಎನ್ನುವುದು ನಮಗೆ ಅರಿವಾಗುತ್ತದೆ.

ಬೆಲ್ಲದ ಬಳಕೆ ಇಂದು, ನಿನ್ನೆಯದಲ್ಲ ಪ್ರಾಚೀನ ಕಾಲದಿಂದಲೂ ಸಹಾ ಬೆಲ್ಲವನ್ನು ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಬೆಲ್ಲ ರುಚಿಯಲ್ಲಿ ಎಷ್ಟು ಸಿಹಿ ಇದಿಯೋ ಅಷ್ಟೇ ಇದರ ಸರಿಯಾದ ಬಳಕೆಯು ಪ್ರಾಮುಖ್ಯತೆ ಪಡೆದಿದೆ.ನಮ್ಮ ದೇಹದ ಆರೋಗ್ಯ ದೃಷ್ಟಿಯಿಂದ ಸುಮಧುರವೆಂದರೆ ತಪ್ಪಿಲ್ಲ. ಏಕೆಂದರೆ ಬೆಲ್ಲ ದೇಹದಲ್ಲಿನ ರಕ್ತವನ್ನು ಶುದ್ಧೀಕರಣ ಮಾಡಲು ನೆರವು ನೀಡುತ್ತದೆ. ಬೆಲ್ಲ ಸೇವನೆಯು ಜೀರ್ಣ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ನೆರವು ನೀಡುತ್ತದೆ. 

ಅಜೀರ್ಣ ಎನಿಸಿದಾಗ ಸ್ವತ ಬೆಲ್ಲವನ್ನು ಈರುಳ್ಳಿ ಜೊತೆ ಸೇರಿಸಿ ತಿನ್ನುವುದರಿಂದ, ಉಪಶಮನ ದೊರೆಯುತ್ತದೆ. ಬೆಲ್ಲ ನಮ್ಮ ಹೊಟ್ಟೆಯನ್ನು ಕೂಡಾ ತಂಪಾಗಿಡಲು ನೆರವಾಗಿತ್ತದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಇರುವುದರಿಂದ, ರಕ್ತ ಹೀನತೆಯ ಸಮಸ್ಯೆ ಎದುರಿಸುತ್ತಿರುವ ಬಹು ಜನರಿಗೆ ಇದು ಖಂಡಿತಾ  ಉಪಯೋಗಕ್ಕೆ ಬರುತ್ತದೆ.ಕೆಮ್ಮು ಅಥವಾ ಗಂಟಲಿನಲ್ಲಿ ನವೆ ಅಥವಾ ಕೆರೆತ ಉಂಟಾದಲ್ಲಿ ಆಗ ಸ್ವಲ್ಪ ಈರುಳ್ಳಿಯನ್ನು ಸುಟ್ಟು ಅದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಕೆಮ್ಮಿನಿಂದ ಉಪಶಮನ ನೀಡುತ್ತದೆ. ಬೆಲ್ಲದ ಚೂರನ್ನು ಬಾಯಿಯಲ್ಲಿ ಹಾಕಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹದಿಹರೆಯದ ಹೆಣ್ಣು - ಗಂಡು ಮಕ್ಕಳಲ್ಲಿ ಉಂಟಾಗುವ ರಕ್ತ ಹೀನತೆ ಸಮಸ್ಯೆಯನ್ನು ಶಮನಗೊಳಿಸಲು ಬೆಲ್ಲವು ಸಹಾಯಕವಾಗುತ್ತದೆ ಮತ್ತೆ ಬೆಲ್ಲದ ಸೇವನೆಯು ಮುಖದ ಛಾಯೆಯನ್ನು ಹೆಚ್ಚಿಸುತ್ತದೆ ಎನ್ನುವುದು ಸತ್ಯ ಹಾಗೂ ರಾತ್ರಿ ಮಲಗುವ ಮುನ್ನ ಹಾಲಿಗೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಸುಗಮವಾಗಿ ಜೀರ್ಣಕ್ರಿಯೆಯು ಸರಿಯಾಗಿ ನಡೆಯುತ್ತದೆ ಹೀಗೆ ಜೀರ್ಣಕ್ರಿಯೆ ಸಮಸ್ಯೆಯ ಪರಿಹಾರದ ಜೊತೆಗೆ ಇನ್ನೂ ನಮ್ಮ ನೂರಾರು ಆರೋಗ್ಯ ಸಮಸ್ಯೆಗಳಿಗೆ ಬೆಲ್ಲ ತಿನ್ನುವುದರಿಂದ ಪರಿಹಾರ ದೊರೆಯುತ್ತದೆ.

ಹಲವು ಉಪಯೋಗಗಳ ಆಗರ ಬೆಲ್ಲದ ತಾಕತ್ತು: ಅತಿಯಾದ ರಕ್ತಹೀನತೆಯಿಂದ ನಿತ್ರಾಣವಾಗುವವರಿಗೆ ಬೆಲ್ಲ ಸೇವನೆ ಅತ್ಯುತ್ತಮ ಪರಿಹಾರ ಮಾರ್ಗ, ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ.ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹಾಲು ಮತ್ತು ಬೆಲ್ಲ ಸೇರಿದರೆ, ಎರಡರಲ್ಲಿನ ಉತ್ತಮ ಗುಣಗಳು ದೇಹಕ್ಕೆ ಸೇರ್ಪಡೆಯಾಗುತ್ತವೆ ಇದರಿಂದ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಜೊತೆಗೆ ಪ್ರತಿದಿನ ಒಂದು ತುಂಡು ಬೆಲ್ಲವನ್ನು ಕುಟ್ಟಿ ಪುಡಿಮಾಡಿ ಹಾಲಿನ ಜತೆ ಬೆರೆಸಿ ಕುಡಿದರೆ ಆರೋಗ್ಯ ಸುಧಾರಣೆಯುತ್ತ ಸಾಗುತ್ತದೆ ಹಾಗೆ ಅತ್ಯುತ್ತಮ ಪರಿಣಾಮ ಸಹ ಬೀರಲಿದೆ.ಬೆಲ್ಲ ಸೇರಿಸಿದ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧೀಕರಣಕ್ಕೆ ನೆರವಾಗಲಿದೆ ಇದರಿಂದ ರಕ್ತದಲ್ಲಿ ಇರುವ ವಿಷ ಅಂಶವನ್ನು ನಾಶ ಮಾಡಲು ಸಾಧ್ಯವಾಗುತ್ತದೆ.( ಬೆಲ್ಲದ ಅತೀ ಲಾಭವೆಂದರೆ ರಕ್ತ ಶುದ್ಧೀಕರಣ,ನಿತ್ಯವೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.)

ಇದಲ್ಲದೆ, ಬೆಲ್ಲ ಬೆರೆಸಿದ ಹಾಲು ಸೇವನೆಯಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳಲಿದೆ. ಬೆಲ್ಲವನ್ನು ನೀರಿನೊಂದಿಗೆ ಸೇವಿಸುವ ಬದಲಿಗೆ ಹಾಲಿನೊಂದಿಗೆ ಸೇವಿಸಿದರೆ ಉತ್ತಮ ಎಂಬ ಅಂಶವನ್ನು ಆಯುರ್ವೇದ ವಿಜ್ಞಾನ ಪ್ರತಿಪಾದಿಸುತ್ತದೆ. ಸಕ್ಕರೆ ಸೇವನೆಯಿಂದ ದೇಹದ ತೂಕ ಹೆಚ್ಚುವುದು ಖಚಿತ. ಆದರೆ, ಬೆಲ್ಲ ಸೇವನೆಯಿಂದ ಈ ರೀತಿಯ ಪ್ರಮಾದ ಆಗುವುದಿಲ್ಲ.ಇದಲ್ಲದೆ ಬೆಲ್ಲ ಮಿಶ್ರಿತ ಹಾಲಿನ ಜತೆಗೆ ಚಿಕ್ಕದೊಂದು ಶುಂಠಿ ತುಂಡನ್ನು ಸೇರಿಸಿ ಕುಡಿದರೆ, ಮೂಳೆಗಳ ಸಂದುಗಳಲ್ಲಿ ಆಗುವ ನೋವನ್ನು ಕ್ರಮೇಣ ನಿವಾರಿಸಲಿದೆ. ಪ್ರತಿನಿತ್ಯ ಈ ಅಭ್ಯಾಸವನ್ನು ರೂಢಿಸಿಕೊಂಡರೆ ಒಳ್ಳೆಯದು ಜೊತೆಗೆ ಬೆಲ್ಲ ಸೇರಿಸಿದ ಹಾಲು ಕುಡಿದರೆ ಚರ್ಮದ ಕಾಂತಿ ವೃದ್ಧಿಯಾಗಲಿದೆ. ತುಂಡು ಬೆಲ್ಲವನ್ನು ಪ್ರತಿದಿನ ನಾವು ತೆಗೆದುಕೊಳ್ಳುವ ಆಹಾರದೊಂದಿಗೆ ಸೇವಿಸಿದರೆ ಮುಖದಲ್ಲಿ ಮೊಡವೆಗಳಾಗುವ ಸಾಧ್ಯತೆಗಳು ಕಡಿಮೆಯಿರುತ್ತವೆ. ಜೊತೆಗೆ ಬೆಲ್ಲ ಸೇವನೆಯಿಂದ ಚಳಿಗಾಲದಲ್ಲಿ ಬ್ಯಾಕ್ಟೀರಿಯಾದ ಜೊತೆ ಹೋರಾಡಲು ವಿನಾಯಿತಿ ನೀಡುವಂತಹ ಶಕ್ತಿಯನ್ನು ನೀಡುತ್ತದೆ.ಹೆಚ್ಚಿನ ವ್ಯಕ್ತಿಗಳಿಗೆ ಜೀರ್ಣಕ್ರಿಯೆ ಸಾಮಾನ್ಯ ಸಮಸ್ಯೆಯಾಗಿದೆ. ಜಂಕ್ ಫುಡ್ ಅನಿಯಮಿತ ಜೀವನಶೈಲಿ ಅಥವಾ ಕಡುಬಯಕೆಯ ಕಾರಣದಿಂದಾಗಿ ಅಜೀರ್ಣ ಉಂಟಾಗುವುದು. ಅಜೀರ್ಣ ಸಮಸ್ಯೆ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ವ್ಯಕ್ತಿಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಾವೆಲ್ಲರೂ ಅಜೀರ್ಣ, ಮಲಬದ್ಧತೆ, ಅನಿಯಮಿತ ಕರುಳಿನ ಚಲನೆ, ಇತ್ಯಾದಿಗಳಿಂದ ಬಳಲುತ್ತಿದ್ದರೆ ಅಂತಹ ಸಮಯದಲ್ಲಿ   ಬೆಲ್ಲ  ಸೇವಿಸುವುದು ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗುತ್ತದೆ ಎನ್ನುವುದು ದಯವಿಟ್ಟು ಮರಿಯಬೇಡಿ. ಹಾಗೂ ನಮ್ಮ ಮೂಳೆ ಗಟ್ಟಿಮುಟ್ಟಾಗಿರಲು ಹಾಲಿನ ಜೊತೆ ಬೆಲ್ಲ ಸೇವನೆಯನ್ನು ದಿನ ನಿತ್ಯ ಮಾಡುವುದು ಒಳ್ಳೆಯದು ಇದರಿಂದ ನಮ್ಮ ಆರೋಗ್ಯ - ಮೂಳೆಗಳು ಸುಸ್ಥಿತಿಯಲ್ಲಿ ಇರುತ್ತದೆ. ಹಾಗೆ ಸುಸ್ತು ನಿವಾರಿಸುತ್ತದೆ ಎನ್ನುವುದು ಸುಳ್ಳಲ್ಲ.

 ಬೆಲ್ಲದಲ್ಲಿ ಹಲವು ಆಂಟಿ ಆಕ್ಸಿಡಂಟ್‌ಗಳು ಮತ್ತು ಲವಣಗಳಾದ ಸತು ಮತ್ತು ಸೆಲೆನಿಯಂ ಇವೆ. ಇವು ಸ್ವತಂತ್ರ ಕಣಗಳಿಗೆ ಹಾನಿಯಾಗದಂತೆ ನೆರವಾಗುತ್ತದೆ. ಸೋಂಕುಗಳ ವಿರುದ್ಧವೂ ನೆರವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಏರಿಸಲೂ ಬೆಲ್ಲ ಸಹಕಾರಿಯಾಗಿದೆ. ಇಂತಹ ಅನೇಕ ರೋಗಗಳ ಆಗಾರಕ್ಕೆ ಬೆಲ್ಲ ಮಹಾ ಮದ್ದಾಗಿ, ನಮ್ಮಲ್ಲರ ಆರೋಗ್ಯವನ್ನು ಕಾಪಾಡುತ್ತದೆ. ಆದರಿಂದ ಬೆಲ್ಲದ ಬಗ್ಗೆ ಉದಾಸೀನ ಮಾಡದೇ, ದಿನನಿತ್ಯದ ನಮ್ಮ ಅಡಿಯಲ್ಲಿ ಬಳಕೆ ಮಾಡುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳೋಣ.

ವಯಸ್ಕರ/ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳಿಗೆ - ಪರಿಹಾರ ಬೆಲ್ಲ: ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ(ಅನೀಮಿಯದಿಂದ ರಕ್ಷಣೆ ಪಡೆಯಲು ಸಾಧ್ಯ.- ಗರ್ಭಿಣಿಯರು ರಕ್ತಹೀನತೆಯಿಂದ ಬಳಲುವುದು ಸಾಮಾನ್ಯ ಸಂಗತಿ. ಇದರ ಪರಿಹಾರಕ್ಕೆ ನಿತ್ಯವೂ ಬೆಲ್ಲ ಸೇರಿಸಿದ ಹಾಲು ಕುಡಿದರೆ, ಈ ಕೊರತೆ ನಿವಾರಣೆಯಾಗಲಿದೆ.) ತಡೆಗಟ್ಟಬಹುದು.ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಮೂಲಕ ದೇಹದ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇಡುತ್ತದೆ.

ಹಾಗೂ ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ {ಮಹಿಳೆಯರು ಮಾಸಿಕ ದಿನಗಳಲ್ಲಿ ಅನುಭವಿಸುವ ನೋವನ್ನು ತಡೆಯಲು ಬೆಲ್ಲದಷ್ಟು ಸಮರ್ಥವಾಗಿ ಕಡಿಮೆಗೊಳಿಸುವ ಔಷಧಿ ಇನ್ನೊಂದಿಲ್ಲ ಎಂಬ ಮಾತಿದೆ ಆದ್ದರಿಂದ ಬೆಲ್ಲವನ್ನು ತಿನ್ನುವುದು ಸೊಕ್ತ -ಮಾಸಿಕ ದಿನಗಳ ಹಿಂದಿನ ಮತ್ತು ನಂತರದ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವಿನಿಂದ ಪಾರಾಗಲು ಚಿಕ್ಕಚಮಚದಷ್ಟು ಬೆಲ್ಲದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ, ದಿನಕ್ಕೆರೆಡು ಬಾರಿ ಕುಡಿದರೆ, ನೋವು ಕ್ರಮೇಣ ಕಡಿಮೆಯಾಗಲಿದೆ.} ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‌ಗಳು ದೇಹಕ್ಕೆ ಆರಾಮ ಕೊಡುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಇವುಗಳಲ್ಲದೆ

ಸಂಧಿವಾತ, ಅಸ್ತಮಾಗಳಿಗೂ ಬೆಲ್ಲ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.ಜೊತೆಗೆ ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ. ಇದು ಮೊಡವೆಯನ್ನು ಕಡಿಮೆಗೊಳಿಸುತ್ತದೆ. ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ ಮತ್ತು ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಿಡಲು ನೆರವಾಗುತ್ತದೆ. ಬೆಲ್ಲದ ತಂಪು ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ಪ್ರಯೋಜನಕಾರಿ ಯಾಗಲಿದೆ ಜೊತೆಗೆ ಹೊಟ್ಟೆಗೆ ತಂಪು ನೀಡುತ್ತದೆ.ಹೀಗೆ ಹತ್ತು ಹಲವು ರೀತಿಯ ಆರೋಗ್ಯ ಸಮಸ್ಯಗಳಿಗೆ ಪರಿಹಾರ ಖಂಡಿತಾ ನೀಡುತ್ತದೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ/ವಯಸ್ಕರರಿಗೆ ಮತ್ತು ಮಕ್ಕಳ ಆರೋಗ್ಯಕ್ಕೆ ಬೆಲ್ಲವು ಅತ್ಯುತ್ತಮ ಮನೆಯ ಸಂಪ್ರದಾಯಿಕ ಮದ್ದಾಗಿದೆ. 

(ಇನ್ನೂ ಇದೆ)

-ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ.

ಚಿತ್ರ ಕೃಪೆ: ಇಂಟರ್ನೆಟ್ ತಾಣ