ಬೆಳಕ ಪ್ರಭೆ

ಬೆಳಕ ಪ್ರಭೆ

ಕವನ

ಕಾಲ ಚಕ್ರವು ಸದಾ ಉರುಳುತಲಿದೆ

ಬೆಳಕ ಪ್ರಭೆ ಎಲ್ಲೆಡೆ ಬೀರುತಲಿದೆ

ನವನವೀನತೆ ಎದ್ದು ಕಾಣುತಲಿದೆ

ಹೊಸ ಹರುಷ ಬುವಿಯ ಪಸರಿಸುತಿದೆ

 

ಎದ್ದೇಳು ನರನೇ ಆಲಸ್ಯ ತೊರೆದು

ಮುಂಜಾವಿನ ಕೋಳಿ ಕೂಗನು ನೆನೆದು

ದಿನಕರನ ಹಾದಿಯನು ಎಂದೆಂದು ತುಳಿದು

ನರಸತ್ತ ಸತ್ವ ಹೀನತೆಯ ತೊರೆದು

 

ಪ್ರಕೃತಿ ಮಾತೆಯ ಒಡಲ ಸಿರಿಯಾಗು

ದೀನರಿಗೆ ಚಂದ್ರಮನ ಬೆಳಕಾಗು

ಮನೆಯ ಬೆಳಗುವ ದೀಪವಾಗು

ಕಷ್ಟಗಳ ಮೆಟ್ಟಿ ನಿಲ್ಲುವ ನರನಾಗು

 

ಜಗದೇಕ ವೀರ ಭರತಮಾತೆಯ ಕುವರ

ನೆಲ ಜಲ ಸಂಪತ್ತು ಯಾವತ್ತು ಅಮರ

ಕಳೆದುದ ನೆನೆಯದೆ ಮುನ್ನುಗ್ಗು ಜೀವನದಿ

ಕಾಯಕದ ನಿಷ್ಠೆ ಪ್ರಜ್ವಲಿಸಲಿ ನವೋಲ್ಲಾಸದಿ

 

ಒಬ್ಬರಿಗೊಬ್ಬರು ಕಷ್ಟ ಸುಖದಿ ನೆರವಾಗಿ

ತಬ್ಬುತ ಬದುಕ ಹಾದಿಯ ಗೆಲುವಾಗಿ

ಮಬ್ಬು ಸರಿಸುತ ಬಾಳಲಿ ಸಾಗಿ

ತಬ್ಬಿಬ್ಬುಗೊಳ್ಳದೆ ಉಸಿರ ನೀಡಿದ ದೇವಗೆ ಶಿರಬಾಗಿ

 

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್