ಬೆವರಿನ ಹನಿಗಳೆ!?

ಬೆವರಿನ ಹನಿಗಳೆ!?

ಕವನ

ಬೆವರಿನ ಹನಿಗಳು ಮೂಡಿತೆ ತನುವಲಿ

ಇನಿಯನ ಸರಸದ ದೆಸೆಯಿಂದ

ನಿನ್ನಯ ಸುಂದರ ನಗುವನು ನೋಡುಲು

ಮನದಲಿ ಉಕ್ಕಿದೆ ಆನಂದ

 

ಗಿಡದಲಿ ಅರಳಿದ ಹೂವಿನ ಸೊಬಗಿದು

ನೋಡಲು ಕಣ್ಣಿಗೆ ಬಲು ಚಂದ

ಹೂವಿನ ಎದೆಯಲಿ ತುಂಬಿದ ಜೇನಿದೆ

ದುಂಬಿಗೆ ಔತಣ ಮಕರಂದ

 

ಘಮಘಮ ಪರಿಮಳ ಹೊಮ್ಮುತಲಿರುವುದು

ಎಲ್ಲರ ತನ್ನೆಡೆ ಸೆಳೆಯುತಿದೆ

ಸಂತಸ ಸಂಭ್ರಮಗೊಂಡಿಹ ಮನವಿದು

ಮೌನದೆ ಗಾನವ ಹಾಡುತಿದೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್