ಬೇಕವಳು ಈ ಜಗಕೆ,,,,
ಅವಳ ಹೋರಾಟದಿಂದ ನಮ್ಮ ಹುಟ್ಟು ಚಂದಿರನನ್ನು ತೋರಿಸಿ ತಿನಿಸುವಳು
ಕೈ ತುತ್ತು ಸಂಬಂಧವನ್ನು ಬೆರಸಿ
ಪ್ರೀತಿಯಿಂದ,ಮಮತೆಯಿಂದ,ಬೈಗುಳ
ದಿಂದ ಬೆಳೆಸುವವಳು ವ್ಯಕ್ತಿತ್ವವನ್ನು
ಬೇಕವಳು ಈ ಜಗಕೆ,,,,,,,,,,,,,,,,,,,,,
ಒಂದು ದಿನದ ದಿನಾಚರಣೆಗೆ ಸೀಮಿತವಾದ ವ್ಯಕ್ತಿತ್ವ ಅವಳದಲ್ಲ ಅವಳ ದಿನಾಚರಣೆ ಅನುದಿನವು,ಇಂದು ಅವಳ
ಕೀರ್ತಿಪತಾಕೆ ಅಡುಗೆಮನೆಯಿಂದ ಶುರುವಾಗಿ ಬಾಹ್ಯಕಾಶದವರೆಗೆ ಹಬ್ಬಿದೆ,ಕೆಲ ದಿನಗಳಯಿಂದೆ ನಮ್ಮ ISROದವರು ಏಕ
ಕಾಲಕ್ಕೆ 114 ಉಪಗ್ರಹಗಳನ್ನು ಉಡಾವಣೆ ಮಾಡಿ ಇಡೀ ವಿಶ್ವವೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು,ಈ ಸಾಧನೆಯ
ಹಿಂದೆ ಅವಳ ಪರಿಶ್ರಮವಿತ್ತು ಎಂದೂ ಕೆಲವರಿಗೆ ತಿಳಿದಿಲ್ಲ. ಹೆಣ್ಣು ಗೌರವಿಸಲ್ಪಡುವ ಸ್ಥಳದಲ್ಲಿ ದೇವರು ನೆಲಸಿರುತ್ತಾನೆಂಬ
ಹಿರಿಯರ ಉಕ್ತಿಯನ್ನು ಮರೆತಂತಿದೆ ನಮ್ಮ ಈ ಸಮಾಜ,ಹೆಣ್ಣನ್ನು ಅಡುಗೆಮನೆಗೆ ಸೀಮಿತಗೋಳಿಸಿ ಭೋಗದ ವಸ್ತುವನ್ನಾಗಿ
ಮಾಡಿಕೊಂಡಿದ್ದೆವೆ,ಅವಳ ಆಸೆ ಆಕಾಂಕ್ಷೆ ನಮ್ಮೆಲ್ಲರಿಗೂ ಬೇಡವಾದವು ಅವಳ ದೇಹಸಿರಿ ಮಾತ್ರ ನಮಗೆ ಬೇಕು. ಆಧುನಿಕ
-ತೆಯ ಹೆಸರಿನಲ್ಲಿ ಅವಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಅವಳ ಸ್ವಾತಂತ್ರ್ಯವನ್ನು ಕಸಿದುಕೊಂಡಿ
-ದ್ದೆವೆ,ದಾರಿಯಲ್ಲಿ ಮೋಣಕಾಲ ಮೇಲೆ ಬಟ್ಟೆ ಧರಿಸಿ ಹೋದರೆ ಅವಳನ್ನೋಡಿದವರು ಅವಳ ನಡತೆಯನ್ನು ಪ್ರಶ್ನಿಸಿ ಅಲ್ಲೆ ಅವಳಿ
-ಗೆ ಪ್ರಮಾಣಪತ್ರ ನೀಡುತ್ತಾರೆ. ಇಂಥವರಿಗೊಂದು ನನ್ನ ಪ್ರಶ್ನೆ ನಿಮ್ಮ ತಾಯಿ ಅಥಾವ ನಿಮ್ಮ ಮನೆಯ ಹೆಣ್ಣು ಬಟ್ಟೆ ತೋಳೆ
-ಯುವಾಗ ಸೀರೆಯನ್ನು ಮೋಣಕಾಲವರೆಗೆ ಎತ್ತಿ ಕುಳಿತುಕೊಂಡು ಬಟ್ಟಿ ತೋಳೆಯುತ್ತಿರುತ್ತಾರೆ ಅಲ್ಲಿ ಮಾತ್ರ ತಾವುಗಳೂ ತದ್ವಿರುದ್ದವಾಗಿನೆಡೆದುಕೋಳ್ಳುತ್ತಿರಿ ಯಾಕೆ,,,,,,,,,? ನಿಮ್ಮ ಮನೆಯಲ್ಲಿರುವ ಹೆಣ್ಣನ್ನು ಗೌರವಿಸಿದರೆ ಸಾಲದು ಪರಸ್ತ್ರಿಯನ್ನು ಗೌರವದಿಂದ ಕಾಣುವುದು ನಮ್ಮೆಲರ ಕರ್ತವ್ಯವಾಗಿದೆ,ಅವಳ ಮೇಲೆ ಅತ್ಯಾಚಾರವಾದ್ರೆ ಅವಳ ಧರಿಸಿದ ಉಡುಪು ಕಾರಣ ಎನ್ನುತ್ತಾರೆ ಕೆಲವರು ಅವಳ ಉಡುಪಿನಲ್ಲಿ ದೋಷವಿಲ್ಲ ಸ್ವಾಮಿ ನಾವು ನೋಡುವ ದೃಷ್ಟಿಕೋನದಲ್ಲಿ ದೋಷವಿದೆ. ಮತ್ತು ಸರಿಯಿರದ ನಮ್ಮ ಶಿಕ್ಷಣಪಧ್ಧತಿ ಪಠ್ಯದಲ್ಲಿ ಅವಳಿಗೆ ಸರಿಯಾದ ಸ್ಥಾನಮಾನವನ್ನು ನೀಡಿಲ್ಲ. ಧರ್ಮದ ಚೌಕಟ್ಟಿನಲ್ಲಿ ಬಂಧಿಸಿ ಉಸಿರಿಗಟ್ಟಿಸ್ತಾಯಿದಿವಿ ಇದಕ್ಕೆ ತಾಜ ಉದಾಹರಣೆ ಮೊನ್ನೆ ಖಾಸಗಿ ಟಿ ವಿ ವಾಹಿನಿಯಲ್ಲಿ ನಿರ್ದಿಷ್ಟಕೋಮಕ್ಕೆ ಸೇರಿದ ಯುವತಿ ತನ್ನಲ್ಲಿರುವ ಕಲೆಯನ್ನುತೋರಿಸಿದರೆ ಅವಳಿಗೆ ಕೆಲಮಂತಾಂಧರಿಂದ ಜೀವಬೆದರಿಕೆಯ ಉಡೂಗೊರೆ ಬಂದಿದೆ,ಈ ಘಟನೆ ಹೆಣ್ಣಿನ ಸಬಲೀಕರಣವನ್ನು ಪ್ರಶ್ನೆಮಾಡುವಂತಿದೆ,ಅವಳು ಗಟ್ಟಿಗಿತ್ತಿ ಇದಕ್ಕೆಲ್ಲಾ ಅವಳು ಬಗ್ಗಲ್ಲ ಧರ್ಮದ ಚೌಕಟ್ಟನ್ನು ಮೀರಿ ಅವಳು ಗೆದ್ದು ಬರಲಿ ಎಂದೂಆಶಿಸೋಣ, ಜಾತಿ ಧರ್ಮ ಬೇದಬಾವ ಕೇವಲ ಮನಷ್ಯರಿಗೆ ಮಾತ್ರ ಕಲೆಗಲ್ಲ, ಕಲೆ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ.ಜಾಹಿರಾತುಗಳು ಹೆಣ್ಣಿನ ಆತ್ಮವಿಶ್ವಾಸವನ್ನು ಕುಗ್ಗಿಸಿ ಹಣ ಮಾಡುವದರಲ್ಲಿ ತಲ್ಲಿನವಾಗಿದ್ದಾವೆ ವಿಪರ್ಯಾಸವೆಂದರೆ ಅಂತಹಜಾಹಿರಾತುಗಳಲ್ಲಿ ಹೆಣ್ಣೆ ನಟಿಸಿರುತ್ತಾಳೆ,ಪ್ರಸ್ಥುತ ಹೆಣ್ಣು ಭ್ರೂಣಹತ್ಯಾ ಸಮಾಜಕ್ಕೆ ಅಂಟಿರುವ ಘೋರ ಶಾಪವಾಗಿದೆ ಅವಳನ್ನು ಕೊಂದರೆ ಸಾದಿಸುವಂತದು ಏನೂ ಇಲ್ಲಾ ಕಳೆದುಕೊಳ್ಳುವುದೆ ಜಾಸ್ತಿ. ದೇಶದ ಆರ್ಥಿಕತೆ ಸರಿದಾರಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅವಳ ಸಾಸುವೆ ಡಬ್ಬದಲ್ಲಿರುವಂತಹ ಹಣದಿಂದ. ಅವಳು ಅರ್ಥಶಾಸ್ತ್ರ ಪಂಡಿತೆ ಅಡುಗೆಮನೆಯಲ್ಲಿದ್ದುಕೊಂಡು ಕುಂಟುಂಬವನ್ನಷ್ಠೆ ಅಲ್ಲ ದೇಶದ ಆರ್ಥಿಕತೆಯನ್ನು ಸರಿದೂಗಿಸುತ್ತಾಳೆ ಆದರಿಂದ ಹೆಣ್ಣು ಭ್ರೂಣಹತ್ಯಾವನ್ನು ನಿಲ್ಲಿಸೋಣ. ದೇಶದ ಏಳೆಗೆಗೆ ಪಾತ್ರರಾಗೋಣ,,,,,,,,,,,,,,,,,,,,,,,,,,,,,,,,,ಅನುಕ್ಷಣವು ಆಚರಿಸೋಣ ಮಹಿಳೆಯರ ದಿನವನ್ನು,,,,,,,,,,,,,,,,,,,,,,,