ಬೇಡಿಕೆ

ಬೇಡಿಕೆ

ಕವನ


ಬಂದದ್ದು ಬರಲೆನೆಗೆ
ಬೇಡೆನು ಬೇಡೆಂದು,
ಇರಲೆನಗೆ ಸರ್ವದಾ
ಬಂಧ ಬಂಧುವೆ ನಿನದು.

ಹರಿಹಾಯ್ದು ಕರೆಹೊಯ್ದು
ಕೂಗಲದು ಫಲವೇನು,
ಇರಿವ ಶೂಲದ ಜಾಲ
ಹರಿಯದೆ ಇರದೇನು.

ಅನವರತ ಹರಸುತಾ
ಕೈ ಬಿಡದೆ ನಡೆಸುತಾ,
ಜೀವಿತದಿ ಸಲಹೆಮ್ಮ
ನಮ್ಮಮ್ಮ ಮಸಿಯಮ್ಮ..