ಬೇವಿನ ಸೊಪ್ಪಿನ ಸಾದಾ ಗೊಜ್ಜು
ಬೇಕಿರುವ ಸಾಮಗ್ರಿ
೧೦ ಬೇವಿನಸೊಪ್ಪಿನ ಎಸಳುಗಳು, ೧ ಕಪ್ ತೆಂಗಿನತುರಿ, ಹಸಿಮೆಣಸು( ಸೂಜಿಮೆಣಸು) ಖಾರಕ್ಕೆ೩, ಹುರಿಕಡಲೆ ೨ ಚಮಚ, ರುಚಿಗೆ ಉಪ್ಪು, ಹುಳಿ .ಒಗ್ಗರಣೆಗೆ ಮೆಣಸು, ಸಾಸಿವೆ, ಎಣ್ಣೆ.
ತಯಾರಿಸುವ ವಿಧಾನ
ಬೇವಿನ ಸೊಪ್ಪು, ತೆಂಗಿನ ತುರಿ, ಉಪ್ಪು, ಹುಳಿ, ಹುರಿಕಡಲೆಯನ್ನು ಒಟ್ಟಾಗಿ ಬೀಸಿ ಒಗ್ಗರಣೆ ಹಾಕಿದರೆ ಬೇವಿನ ಸೊಪ್ಪಿನ ಸಾದಾ ಗೊಜ್ಜು ತಯಾರು.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ