ಭಜನೆ - ಬಾಳಿಗೊಂದು ಮಂತ್ರ
ಬರಹ
ಸುಖದ ಸಮೃದ್ಧಿಯಲ್ಲಿ ಬಾಳಪಥದಿ ಸಾಗಿರಲು
ಅರ್ಥ ಕಾಮಗಳನು ಭೊಗಿಸುತ್ತ ಜೀವ ನಡೆದಿರಲು ||
ಇನಿತು ಬಿಸಿಲು, ಇನಿತು ನೆಳಲು, ಎಲ್ಲೆಡೆ ಸೊಗಸಿರಲು
ಪಂಚಾಕ್ಷರಿ ಮನದೊಳಿರಲಿ "ಓಂ ನಮಃ ಶಿವಾಯ" || ೧ ||
ನೋಟ ಕುಗ್ಗಿ ಮನದಿ ಮಬ್ಬು ಕವಿದು ಮಂದವಾಗಲು
ದಾರಿಯೆಂದು ಬಗೆದು ವ್ಯೂಹದಲ್ಲಿ ಸುತ್ತಿ ಸೊರಗಲು ||
ಗುರಿಯಿಲ್ಲದ ಬದುಕನಾವೆ ಬರಿದೆ ತೇಲಿ ತಿರುಗಲು
ಬೆಳಕ ತೋರೊ ಪದವ ಪೇಳೊ "ಓಂ ನಮಃ ಶಿವಾಯ" || ೨ ||
ದುಗುಡ ದುಮ್ಮಾನಗಳಾ ಹಿಡಿತದಲ್ಲಿ ನಲುಗಿರಲು
ಸಂಸಾರದ ಸಾಗರದಿ ಈಸಿ ಮೀಸಿ ದಣಿದಿರಲು ||
ಕಯ್ಯಿ ಕಾಲು ಸೋತು ಇನ್ನು ಮುಳುಗುವುದೇ ಲೇಸೆನಲು
ಪಾರಗೊಳಲು ಕೂಗಿಕೊಳ್ಳೊ "ಓಂ ನಮಃ ಶಿವಾಯ" || ೩ ||
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಓಂ ನಮಃ ಶಿವಾಯ, ಓಂ ನಮಃ ಶಿವಾಯ ||
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಓಂ ನಮಃ ಶಿವಾಯ, ಓಂ ನಮಃ ಶಿವಾಯ || ೪ ||
ಕೆ. ಭ. ಶ್ರೀ. ರಾಮಚಂದ್ರ