ಭಯ....( ಕಥೆ)
ಎಲ್ಲಿ ನೋಡಿದರೂ ರಕ್ತದ ಕಲೆಗಳು...
ಮಚ್ಚಿನಿಂದ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ...
ಮಚ್ಚು ಹಿಡಿದ ವ್ಯಕ್ತಿಯ ಬಟ್ಟೆಯ ಮೇಲೆಲ್ಲಾ ರಕ್ತದ ಕಲೆಗಳು...
ಮಚ್ಚಿನಿಂದ ಕಚಕಚನೆ ಕತ್ತರಿಸುತ್ತಿದ್ದಾನೆ..ಆದರೂ ಅವನ ಮುಖದಲ್ಲಿ ಯಾವುದೇ ಭಾವನೆ ಗಳು ಇರಲಿಲ್ಲ...
ಇವೆಲ್ಲವನ್ನೂ ನೋಡುತ್ತಾ ಮಹೇಶ್, ಸುಂದರ್, ಅವಿನಾಶ್, ವಿಕ್ರಂ, ಡೆನಿಯಲ್ ಹಾಗೂ ನಾನು (ಸಚಿನ್) A1 ಮಟನ್ ಸ್ಟಾಲ್ ಮುಂದೆ ನಿಂತಿದ್ದೆವು. ನಾವೆಲ್ಲಾ ಬೆಂಗಳೂರಿ ನ ಕಾಲೇಜ್ ಒಂದರಲ್ಲಿ ಕೊನೆಯ ವರ್ಷದ ಡಿಗ್ರಿ ಓದುತ್ತಿದ್ದೇ ವೆ. ಈಗಷ್ಟೇ ಪರೀಕ್ಷೆಗಳು ಮುಗಿದು ರ ಜ ಬಂದಿದ್ದರಿಂದ ಎಲ್ಲರೂ ಸೇರಿ ಪಾಷಾ ಅವರ ಊರಾದ ಹೈದರಾಬಾದ್ ಗೆ ಹೋಗಲು ನಿರ್ ಧರಿಸಿದ್ದೆವು. ರಾತ್ರಿ ೭ ಗಂಟೆಗೆ ಎ ಲ್ಲರೂ ಶಿವಾಜಿನಗರದಲ್ಲಿರುವ ಪಾಷಾ ಅವರ ಮನೆ ಬಳಿ ಕ್ವಾಲಿಸ್ ಒಂದರಲ್ಲಿ ಬಂದೆವು. ಅವರ ಮನೆ ಎದುರೆ A1 ಮಟನ್ ಸ್ಟಾಲ್ ಇತ್ತು. ಪಾಷಾ ಬರುವ ವರೆಗೂ ಆ ಮಟನ್ ಸ್ಟಾಲ್ ಅನ್ನೇ ನೋಡುತ್ತಿದ್ದೆ . ನಮ್ಮ ಗುಂಪಿನಲ್ಲಿ ನಾನೊಬ್ಬನೇ ಸಸ ್ಯಾಹಾರಿ. ಅಷ್ಟರಲ್ಲಿ ಪಾಷಾ ಬಂದ. ಎ ಲ್ಲರೂ ಸೇರಿ ಅಲ್ಲಿಂದ ಹೊರಟಾಗ ಎಂಟಾಗಿತ್ತು . ನಗರ ಪ್ರದೇಶ ದಾಟಿ ಹೈವೇ ಬರುವಷ್ ಟರಲ್ಲಿ ೯ ಗಂಟೆ ಆಗಿತ್ತು. ಮನೆ ಬೇಗ ಬಿಟ್ಟಿದ್ದರಿಂದ ಯಾರೂ ಊಟ ಮಾಡಿರಲಿಲ್ಲ. ಚಿಕ್ಕಬಳ್ಳಾಪುರ ಆದ ಮೇಲೆ ಒಂದು ಡಾಬಾ ಬಳಿ ಗಾಡಿ ನಿಲ್ಲಿಸಿ ಊಟ ಕ್ಕೆ ನಿಲ್ಲಿಸಿದೆವು. ನಾನು ಹಾಗೂ ಪಾಷಾ ಇಬ್ಬರನ್ನು ಬಿಟ್ಟು ಉಳಿದೆಲ್ ಲರೂ ಬಿಯರು ಕುಡಿದು ಊಟ ಮಾಡಿದರು. ನ ಾನು ಮತ್ತು ಪಾಷಾ ಬರೀ ಊಟ ಮಾಡಿ ಅಲ್ಲಿಂದ ಹೊರಟಾಗ ೧೧ ಗಂಟೆ ಆಗಿತ್ತು. ಕ್ವಾಲಿಸ್ ಗಾಡಿ ಡೆನಿಯಲ್ ದೇ ಆಗಿತ್ತು ಹಾಗೂ ಅವನೇ ಓಡಿಸುತ್ತಿದ್ದ. ಅವನು ಮ ೊದಲೇ ಹೇಳಿದ್ದ ರಾತ್ರಿ ಯಾರೂ ಮಲಗಬಾರದು ಎಲ್ಲರೂ ನನಗೆ ಕಂ ಪನಿ ಕೊಡಬೇಕು ಎಂದು. ಮನೆಯಿಂದ ಬರು ವಾಗ ಒಂದಷ್ಟು ಫಿಲಂ DVD ಗಳನ್ನೂ ತಂ ದಿದ್ದ. ಅದರಲ್ಲಿ ಬಹುಪಾಲು ಎಲ್ಲವೂ ಆಂಗ್ಲ ಸಿನೆಮಾಗಳು ಹಾಗು ಎಲ್ಲವೂ ದೆ ವ್ವದ ಸಿನೆಮಾಗಳು. ಅವನಿಗೆ ದೆವ್ವದ ಸಿನೆ ಮಾಗಳೆಂದರೆ ವಿಪರೀತ ಕುತೂಹಲ ಒಂದೊಂ ದು ಸಿನೆಮಾವನ್ನು ಹತ್ತತ್ತು ಸಲ ನೋ ಡಿದ್ದಾನೆ ಹಾಗೆ ಅಷ್ಟೇ ಧೈರ್ಯವಂತ. ಗಾಡಿ ಓಡಿಸುತ್ತಾ ನನಗೆ ಹೇಳಿದ ಅದರಲ ್ಲಿ "Brain Dead " DVD ಇದೆ ಅದನ್ನು ಹ ಾಕು ಎಂದು. ನಾನು ಮುಂದೆ ಡೆನಿಯಲ್ ಪಕ್ಕದಲ್ಲೇ ಕೂತಿದ್ದೆ. ಹಿ ಂದಿನಿಂದ ಪಾಷಾ ಸನ್ನೆ ಮಾಡುತ್ತಿದ್ದ . ದಯವಿಟ್ಟು ಹಾಕಬೇಡ ಎಂದು. ಏಕೆಂ ದರೆ ಪಾಷಾ ಗೆ ದೆವ್ವ, ಭೂತ, ದೆವ್ವದ ಸಿನೆಮಾಗಳೆಂದರೆ ವಿಪರೀತ ಭಯ. ಆದರೆ ಡೆನಿಯಲ್ ಬಿಡಬೇಕಲ್ಲ. ಅಂ ತೂ ಇಂತೂ ಹಾಕಿದೆ. ಪಾಷಾ ಕಣ್ಣು ಮುಚ್ಚಿ ಮಲಗಿಬಿಟ್ಟ. ಕ ಾರು ಕರ್ನಾಟಕ ದಾಟಿ ಆಂಧ್ರ ಪ್ರದೇ ಶಕ್ಕೆ ಬಂದಿದೆ.
ಕಾರು ೧೦೦-೧೨೦ ಕಿ.ಮೀ ವೇಗದಲ್ಲಿ ಸಾ ಗುತ್ತಿದೆ...
ಸುತ್ತಲೂ ಕಾರ್ಗತ್ತಲು ತುಂಬಿಕೊಂಡು ಕಾರಿನ ಬೆಳಕಿನಲ್ಲಿ ರಸ್ತೆ ಮಾತ್ರ ಕ ಾಣುತ್ತಿದೆ...ಇಲ್ಲಿ ಕಾರಿನಲ್ಲಿ ಸಿ ನೆಮಾ ಬರುತ್ತಿದೆ. ಡೆನಿಯಲ್ ಹಾಗು ಪ ಾಷಾ ಇಬ್ಬರನ್ನು ಬಿಟ್ಟು ಇನ್ನೆಲ್ ಲರೂ ಸಿನೆಮಾ ನೋಡುವುದರಲ್ಲಿ ತಲ್ಲೀ ನರಾಗಿದ್ದೆವು. ನಾನು ಹಿಂದೆ ಹೋಗಿ ಕೂರುತ್ತೇನೆ ನನಗೆ ಎದುರು ಬರುವ ಗಾಡಿಯ ಲೈಟ್ ಬೆಳಕು ಕಣ್ಣಿಗೆ ಹೊಡೆಯುತ್ತಿದೆ ಎಂದು ಹಿಂದಕ್ಕೆ ಬಂದೆ. ಸುಂದರ್ ಮುಂದೆ ಹೋಗಿ ಕುಳಿತ. ನಾನು ಮಹೇಶ ವಿಕ್ರಂ ಮಧ್ಯದಲ್ಲಿ, ಮುಂದೆ ಸುಂದರ್ ಹಾಗೂ ಡ್ಯಾನಿ. ಹಿಂದೆ ಪಾಶ ಮಲಗಿದ್ದ. ನಾನು ಸಿನೆಮಾ ನೋಡುತ್ತಾ ಕೂತಿದ್ದೇನೆ. ಇದ್ದಕ್ಕಿದ್ದಂತೆ ಕಾರಿನ ಬಾನೆಟ್ ಮೇಲೆ ಧಪ್ ಎಂದು ಏನೋ ಬಿದ್ದಂತಾಯಿತು. ಡ್ಯಾನಿ ಬ್ರೇಕ್ ಹಾಕಿ ನಿಲ್ಲಿಸಿದ. ಅದು ಎಲ್ಲ್ಲಿಂದ ಬಂತೋ ಹೇಗೆ ಬಂತೋ ಗೊತ್ತಿಲ್ಲ ಒಂದು ನಾಯಿಯ ಶವ. ಕಾರಿನ ಬಾನೆಟ್, ಹಾಗೂ ಗ್ಲಾಸ್ ಮೇಲೆಲ್ಲಾ ರಕ್ತ ಆಗಿತ್ತು. ಎಲ್ಲರೂ ಕ್ಷಣ ಕಾಲ ಭಯಭೀತರಾಗಿದ್ದೆವು. ಆಮೇಲೆ ಡ್ಯಾನಿಯೇ ಅದನ್ನು ಪಕ್ಕಕ್ಕೆ ತಳ್ಳಿ ಬಹುಶಃ ಪಕ್ಕದಲ್ಲಿ ಹೋದ ಲಾರಿ ಹೊಡೆದಿರಬೇಕು ಎಂದು ಹೇಳಿ ನೀರು ಹಾಕಿ ಆ ರಕ್ತವನ್ನೆಲ್ಲಾ ತೊಳೆದು ಮುಂದೆ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಏನಕ್ಕೋ ಹಿಂದೆ ತಿರುಗಿದರೆ ಪಾಷಾ ಕಾಣಿಸುತ್ತಿಲ್ಲ. ತಕ್ಷಣ ಡ್ಯಾನಿ ಗಾಡಿ ನಿಲ್ಲಿಸು ಪಾಷಾ ಕಾಣಿಸುತ್ತಿಲ್ಲ ಎಂದೇ. ಅದಕ್ಕೆ ಡ್ಯಾನಿ ನಿನಗೆ ತಲೆ ಗಿಲೆ ಕೆಟ್ಟಿದ್ಯ ಪಾಷಾ ಎಲ್ಲಿ ನಮ್ಮ ಜೊತೆ ಬಂದಿದ್ದಾನೆ ಪಾಷಾ ಬರಲ್ಲ ಅಂತ ಹೇಳಿಲ್ಲವಾ ಅಂದ. ನನಗೆ ಯಾಕೋ ವಿಚಿತ್ರ ಅನಿಸಿ ಲೇ ಇಷ್ಟೊತ್ತು ಇಲ್ಲೇ ಮಲಗಿದ್ನಲ್ಲೋ ಅಂದಿದ್ದಕ್ಕೆ ಏನು ಹುಚ್ಚಾ ನಿಂಗೆ ಪಾಷಾ ಬಂದೆ ಇಲ್ಲ ಎಂದ...ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು.
ಅಷ್ಟರಲ್ಲಿ ಮುಂದೆ ಹೋಗುತ್ತಿದ್ದ ಲಾರಿ ಸಡನ್ನಾಗಿ ಬ್ರೇಕ್ ಹಾಕಿದ. ಅವನು ಬ್ರೇಕ್ ಹಾಕಿದ ಪರಿಣಾಮವಾಗಿ ಆ ಲಾರಿಯಲ್ಲಿದ್ದ ಕಬ್ಬಿಣದ ರಾಡೊಂದು ಜಾರಿ ಬಂದು ಸೀದಾ ನಮ್ಮ ಕಾರಿನ ಮುಂದಿನ ಗಾಜನ್ನು ಒಡೆದು ಸೀದಾ ಸುಂದರ ಗಂಟಲಿನ ಒಳಗೆ ನುಗ್ಗಿತ್ತು. ಲಾರಿಯವನು ಹೊರಟು ಬಿಟ್ಟ. ನಮಗೆಲ್ಲರಿಗೂ ಈ ಘಟನೆಯಿಂದ ಶಾಕ್ ಆದಂತಾಗಿತ್ತು. ಯಾರಿಗೂ ಏನು ಮಾಡಲು ತೋಚುತ್ತಿಲ್ಲ. ನಾನು ತಕ್ಷಣ ಡ್ಯಾನಿಗೆ ನೀನು ಮುಂದೆ ಯಾವುದಾದರೂ ಆಸ್ಪತ್ರೆ ಇದ್ಯಾ ನೋಡು ನಾನು ಪೋಲಿಸ್ ಗೆ ಫೋನ್ ಮಾಡ್ತೀನಿ ಎಂದು ಫೋನ್ ತೆಗೆದೇ ನೆಟ್ವರ್ಕ್ ಇರಲಿಲ್ಲ. ನಿನ್ನ ಫೋನ್ ನೋಡು ವಿಕ್ರಂ ಎಂದು ವಿಕ್ರಂ ಕಡೆ ತಿರುಗಿದರೆ ವಿಕ್ರಂ ದೇಹ ಹಾಗೆ ಇದೆ ಕತ್ತು ಮಾತ್ರ ಉಲ್ಟಾ ತಿರುಗಿದೆ. ವಿಕ್ರಂ ಏನೋ ಆಗಿದೆ ನಿನಗೆ ಎಂದರೆ ನನಗೇನಾಗಿದೆ ಸರಿಯಾಗೇ ಇದ್ದೀನಿ ನಿನಗೆನಾಯಿತು ಎಂದು ಕೇಳಿದ. ನಾನು, ಮತ್ತೆ ನಿನ್ನ ಕತ್ತು ಯಾಕೆ ಆ ಕಡೆ ತಿರುಗಿದೆ ಎಂದು ಕೇಳಿದ್ದಕ್ಕೆ. ದೆವ್ವಗಳಿಗೆ ಕತ್ತು ಹಿಂದೆ ಇರದೇ ಮುಂದೆ ಇರುತಾ ಎಂದು ಜೋರಾಗಿ ನಗುತ್ತ ಹೇಳಿದ. ಮಹೇಶ ನೀನಾದರೂ ಕೇಳೋ ವಿಕ್ರಂ ನ ಎಂದು ಮಹೇಶನ್ ಭುಜದ ಮೇಲೆ ಕೈ ಇತ್ತೇ. ನನ್ನ ಕೈ ಮಹೇಶ ದೇಹದೊಳಗೆ ಹೊರಟು ಹೋಯಿತು. ನಾನು ಕೂಡಲೇ ಭಯದಿಂದ ಕೈ ಆಚೆ ತೆಗೆದೇ. ನನ್ನ ಕೈ ಎಲ್ಲ ರಕ್ತ. ಕಾಲಿನಿಂದ ಕಂಪನ ಶುರುವಾಯಿತು. ಡ್ಯಾನಿ ಎಂದು ಕೂಗಲು ಪ್ರಯತ್ನಿಸುತ್ತಿದ್ದೇನೆ ಆದರೆ ಮಾತು ಗಂಟಲಿನಿಂದ ಆಚೆ ಬರುತ್ತಿಲ್ಲ. ಕಷ್ಟ ಪಟ್ಟು ಡ್ಯಾನಿ ಎಂದೇ. ಡ್ಯಾನಿ ಹಿಂದಕ್ಕೆ ತಿರುಗಿದ. ಡ್ಯಾನಿಯ ಕಣ್ಣುಗಳು ಕೆಂಡದ ಹಾಗೆ ಹೊಳೆಯುತ್ತಿವೆ, ಕಣ್ಣುಗಳಿಂದ ಹೊಗೆ ಬರುತ್ತಿದೆ. ಮುಖ ಅರ್ಧಕ್ಕೆ ಸೀಳಿ ಹೋಗಿದೆ. ಎರಡು ಕೈ ಸ್ಟೇರಿಂಗ್ ಮೇಲಿದೆ. ಇನ್ನೆರಡು ಕೈ ಇಂದ ನನ್ನ ಕತ್ತನ್ನು ಹಿಚುಕಲು ಬರುತ್ತಿದ್ದಾನೆ. ನನಗೆ ಏನು ಮಾಡಲು ತೋಚುತ್ತಿಲ್ಲ...ಡ್ಯಾನಿ ಬೇಡ ನಾವೆಲ್ಲರೂ ಸ್ನೇಹಿತರು ಬೇಡ ಬೇಡಾ ಎನ್ನುತ್ತಿದ್ದೇನೆ ಅಷ್ಟರಲ್ಲಿ ಸುಂದರ್ ಗಂಟಲಿನಿಂದ ರಾಡನ್ನು ತೆಗೆದು ನನ್ನ ಕಣ್ಣಿಗೆ ಚುಚ್ಚಲು ಬರುತ್ತಿದ್ದಾನೆ ಈ ಕಡೆ ವಿಕ್ರಂ ನನ್ನ ಕೈಯನ್ನು ಕಿತ್ತು ತಿನ್ನುತ್ತಿದ್ದಾನೆ. ಎಷ್ಟು ಕೇಳಿದರೂ ಬಿಡುತ್ತಿಲ್ಲ ಅಷ್ಟರಲ್ಲಿ ತಲೆಯ ಮೇಲೆ ಧಪ್ ಎಂದು ಒಂದು ಬಲವಾದ ಹೊಡೆದ ಬಿತ್ತು. ಕೆಲ ಕಾಲ ಕಣ್ಣು ಮಬ್ಬಾಯಿತು.
ಮತ್ತೆ ಕಣ್ಣು ಬಿಟ್ಟರೆ ಕಾರಿನಲ್ಲಿ ನಾನೊಬ್ಬನೇ ಇದ್ದೀನಿ. ಆಚೆ ಬೆಳಕು ಹರಿದಿದೆ. ಆಚೆ ನೋಡಿದೆ ಎಲ್ಲರೂ ಕೆಳಗೆ ನಿಂತುಕೊಂಡು ಟೀ ಕುಡಿಯುತ್ತಿದ್ದಾರೆ. ಪಾಷಾ ಹೇಳುತ್ತಿದ್ದಾನೆ ಲೇ ಬಾರೋ ಅದೇನು ನಿದ್ದೆ ಮಾಡುತ್ತಿಯೋ ಪುಣ್ಯಾತ್ಮ ನೀನು ಎಷ್ಟು ಎಬ್ಬಿಸಿದರೂ ಏಳುವುದಿಲ್ಲ. ಬಾ ಹೋಗಲಿ ಟೀ ಕುಡಿ ಎಂದು ಕರೆದ. ಆಗ ಅರಿವಾಯಿತು. ಮುಂದಿನಿಂದ ಹಿಂದೆ ಬಂದು ಕುಳಿತು ಸಿನೆಮಾ ನೋಡುತ್ತಿದ್ದ ಹಾಗೆ ನಿದ್ದೆ ಮಾಡಿಬಿಟ್ಟಿದ್ದೇನೆ ಎಂದು...
Comments
ಉ: ಭಯ....( ಕಥೆ)
In reply to ಉ: ಭಯ....( ಕಥೆ) by krishnarajb
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by partha1059
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by gopinatha
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by makara
ಉ: ಭಯ....( ಕಥೆ)
In reply to ಉ: ಭಯ....( ಕಥೆ) by Jayanth Ramachar
ಉ: ಭಯ....( ಕಥೆ)
In reply to ಉ: ಭಯ....( ಕಥೆ) by sumangala badami
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by govind123
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by venkatb83
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by neela devi kn
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by sathishnasa
ಉ: ಭಯ....( ಕಥೆ)
ಉ: ಭಯ....( ಕಥೆ)
In reply to ಉ: ಭಯ....( ಕಥೆ) by pkumar
ಉ: ಭಯ....( ಕಥೆ)