ಭಾವನೆ

ಭಾವನೆ

ಕವನ

ಗತಿಸಿರುವ ಭಾವದೊಳು

ಮಥಿಸಿ ನಡೆಯಲು ಬಹುದೆ

ಕಾತರದ ಕನಸುಗಳ ಕಾಣಬಹುದೆ

ಜೀವನದ ಮೌಲ್ಯಗಳ

ಒಳಗೆ ತೂರುತ ನಡೆಯೆ 

ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ 

 

ಚಿತ್ತವಿಲ್ಲದೆ ಗುಡಿಯ

ಸುತ್ತುತಲೇ ಸಾಗುತಲಿ

ಚಿತ್ತ ಬ್ರಾಂತಿಯ ಒಳಗೆ ನಡೆಯಬಹುದೆ

ಆತುರದ ಹುಡುಕಾಟ

ಜೀವನದಿ ಎಳೆದಾಟ

ಪ್ರೀತಿ ತಪ್ಪಿದ ಬದುಕ ಕಾಣಬಹುದೆ

 

ಚಿಂತೆ ಇರುತಲಿ ಮನದಿ

ಇರದಂತೆ ತೋರಿಸುತ

ಸಾಗುವ ಬದುಕನ್ನು ಸವಿಯಬಹುದೆ

ಬಾಳು ಕರಗುತಲಿರಲು

ಕರಗದಂತೇ ಇರುವೆ

ತಾಯ ಮಡಿಲಿನ ಭಾಗ್ಯ ಸಿಗಲುಬಹುದೆ

***

ಇದ್ದಾಗ

ಯಾರೂ ಇಲ್ಲದ ಜಾಗಕ್ಕೆ

ಪಯಣಿಸಬೇಕು ಎಂದಿದ್ದೆ

ಸಾಧ್ಯವಾಗಲೇ ಇಲ್ಲ ಕಾರಣ 

ಹೆಂಡತಿ ಮಕ್ಕಳು ಇದ್ದಾರಲ್ಲ

 

ಯಾರೂ ಇಲ್ಲದ ಜಾಗಕ್ಕೆ

ಪಯಣಿಸಬೇಕು ಎಂದಿದ್ದೆ

ಸಾಧ್ಯವಾಗಲೇ ಇಲ್ಲ ಕಾರಣ 

ಬಂಧುಗಳ ಋಣ ಇನ್ನೂ ಇದೆಯಲ್ಲ

 

ಯಾರೂ ಇಲ್ಲದ ಜಾಗಕ್ಕೆ

ಪಯಣಿಸಬೇಕು ಎಂದಿದ್ದೆ

ಸಾಧ್ಯವಾಗಲೇ ಇಲ್ಲ ಕಾರಣ 

ಸಾಲ ಕೊಟ್ಟವರ ಋಣ ಇನ್ನೂ ಇದೆಯಲ್ಲ

 

ಯಾರೂ ಇಲ್ಲದ ಜಾಗಕ್ಕೆ

ಪಯಣಿಸಬೇಕು ಎಂದಿದ್ದೆ

ಸಾಧ್ಯವಾಗಲೇ ಇಲ್ಲ ಕಾರಣ 

ಸ್ನೇಹಿತರ ವಾತ್ಸಲ್ಯ ಇನ್ನೂ ಇದೆಯಲ್ಲ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್