ಭಾವಮೌನ
ಕವನ
ಏನೋ ಒಂಥರಾ ಭಾವಮೌನ
ಏನೋ ಒಂಥರಾ ನೀರವತೆ
ತಪ್ಪ್ಯಾರದೋ ಅರಿಯೆನು , ಆದೆವು ನಾವು ದೂರ-ದೂರ
ಮತ್ತೆ ಒಂದಾಗಲು ಸಾಧ್ಯವಾ ?
ಈ ದೂರವೇ ಆತ್ಮೀಯವಾಗಿರುವಾಗ , ಏಕೆ ಆ ಪ್ರಶ್ನೆ ?
ಹೋದರೇನು ನೀ ದೂರ
ನಿನ್ನ ಸಿಹಿ ನೆನಪಿನ ಶಿಖರವಿದೆ ನನ್ನಲ್ಲಿ ಜೀವಂತ.
ಬೇರೆಯಾಗಬೇಕ್ಕೆಂದೇ ಒಂದಾಗಿದ್ದೆವಾ ನಾವು
ಬೇರೆಯಾಗಬೇಕ್ಕೆಂದೇ ಒಂದಾಗಿದ್ದೆವಾ ನಾವು
ಭಾವಸಂಚಾರದ ವೇಗ ಮಿತಿಮೀರಿದೆ
ಬಿಕ್ಕಿ ಬಿಕ್ಕಿ ಅಳುವ ಆಸೆಯಾಗಿದೆ ಮನಕೆ
ತಿದ್ದಿ ತಿದ್ದಿ ಬರೆವ ಆಸೆಯಾಗಿದೆ ಅದಕೆ
ಎಲ್ಲಿ ನಿಲ್ಲುವುದೋ ಈ ಪಯಣ ತಿಳಿಯೆನು
ಏನೋ ಒಂಥರಾ ಭಾವಮೌನ
ಏನೋ ಒಂಥರಾ ನೀರವತೆ