ಭಾವರಸ ಸರಸ ರಸಗಾನ

ಭಾವರಸ ಸರಸ ರಸಗಾನ

ಕವನ

 ಪ್ರೇಮ ಧಮನಿಯ ಪ್ರಣಯ  ಕಣಗಳೆ ನಿಲ್ಲಿ   

 ವಿರಹ ಸುಖ ಭಾವ ಸಾಮೀಪ್ಯದಲಿ

ಪ್ರಿಯ ಮಾಧವ ವೇಣು ಉಲಿಯದು ನಿಜದಿ

ತನುಮನ ತುಡಿವುದು ಭಾವಗಾನ ರಸದಿ

ತುಟಿಯರಳಿ ಮೈನವಿರುವುದು ತವಕದಲಿ

ಮಾಧವ ಸುಖ ಸ್ವಪ್ನ ಭಾವ ರಾಧೆಯಲಿ

ಅಮರ ಪ್ರೇಮದ ಕಥನ ಭಾವ ಪ್ರಣಯದ ಮಥನ

ಮಾಧವ ರಾಧೆ ಭಾವರಸ ಸರಸ ರಸಗಾನ