ಭಾವಲಹರಿ-*ಕಡಲ ಮುತ್ತು*

ಭಾವಲಹರಿ-*ಕಡಲ ಮುತ್ತು*

ಕವನ

ಕಡಲು ಖಣಜವು ಸರ್ವ ಜೀವಿಗೆ

ನೆಲೆಯು ನೀಡಿದ ತಾಣವು

ಒಡಲ ಹೊಳಗಡೆ ಮುತ್ತು ರತ್ನವು

ವಿವಿಧ ಜಲಚರ ಪ್ರಾಣಿಯು ||

 

ಚಿಕ್ಕ ಜೀವಿಯು ದೊಡ್ಡ ಜೀವಿಯ

ತಿಂದು ಬದುಕುವ ಲೋಕವು

ಚೊಕ್ಕ ಚಿನ್ನವು ಬೆಳ್ಳಿಬಟ್ಟಲು

ಸಿಗುವ ವಿಸ್ಮಯ ಲೋಕವು||

 

ಪವನ ಬೀಸಲು ಅಲೆಯ ಅಬ್ಬರ

ಉಕ್ಕಿಬಂದಿತು ತೀರಕೆ

ಗಗನ ಚುಂಬಿಸೊ ಕಡಲ ನೋಟವು

ಹರ್ಷ ತಂದಿತು ಹೃದಯಕೆ||

 

ಶರಧಿ ಅಲೆಗಳು ಹೊತ್ತು ತಂದವು

ಕಡಲ ತೀರಕೆ ಮುತ್ತನು

ಜಲದಿ ತೇಲುತ ಬಂದ ಮುತ್ತದು

ಬೆರಗುಗೊಳಿಸಿತು ಜಗವನು||

 

ಸಂಜೆ ಸೂರ್ಯನು ತಾಯಿ ಗರ್ಭವ

ಸೇರ ಹೊರಟನು ಮೆಲ್ಲಗೆ

ಪಂಜಿನಂತೆಯೆ ಬೆಳಕು ಚೆಲ್ಲಿತು

ಮುತ್ತು ಸುತ್ತಲು ಮೆಲ್ಲಗೆ||

 

ಹೊನ್ನ ಬಣ್ಣದಿ ಕಪ್ಪೆ ಚಿಪ್ಪೊಳು

ತೇಜ ಬೀರುತ ಹೊಳೆದಿದೆ

ಕನ್ನ ಹಾಕುತ ಕಣ್ಣು ಕುಕ್ಕುತ

ಚಿತ್ತ ಚಂಚಲ ಮಾಡಿದೆ ||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್