ಭಾಸ್ಕರ ನೀ ನನಗೆ ಪ್ರೇರಣೆ

ಭಾಸ್ಕರ ನೀ ನನಗೆ ಪ್ರೇರಣೆ

ಕವನ

ದಿಕ್ತಟದಲಿ ಹಗಲಿನಕ್ಷಿಯ ತೆರೆಯುತ

ಕೆಂಪಿನ ಬಣ್ಣವನು ಗಗನದಿ ತೋರಿಸಿ

ನವೋಲ್ಲಾಸ ಹೊಂದುತ ಬರುತಿರುವ

ಭಾಸ್ಕರ ನೀ ನನಗೆ ಪ್ರೇರಣೆ..!!

 

ಹೃದಯದಲಿ ಸಂತಸವನ್ನು ತುಂಬಿಸಿ

ನಯನದಲಿ ಸದ್ಭಾವದ ಮನವನ್ನು

ಚಿನ್ಮಯದ ಚಿತ್ಕಳೆಯಲ್ಲಿ ತಂದಿಟ್ಟ

ಭಾಸ್ಕರ ನೀ ನನಗೆ ಪ್ರೇರಣೆ..!!

 

ಸ್ವಚ್ಛಂದ ನೀಲಾಗಾಸದಿ ಬೆಳಗುತಲಿ

ಖಗಮೃಗಗಳಿಗೆ ಚೈತನ್ಯ ತಂದಿರಿಸಿ

ರಜನಿಯನ್ನು ಓಡಿಸುವ ಮಹಾಜ್ಞಾನಿ

ಭಾಸ್ಕರ ನೀ ನನಗೆ ಪ್ರೇರಣೆ..!!

 

ಅಜ್ಞಾನದ ಅಂಧಕಾರವು ಕವಿದಿದೆ

ನಿನ್ನ ಆಗಮನವು ಮುದನೀಡಿದೆ

ತ್ರಿಲೋಕವದು ಸ್ಮರಿಸುತಿದೆ ದೇವ

ಭಾಸ್ಕರ ನೀ ನನಗೆ ಪ್ರೇರಣೆ..!!

 

ಬ್ರಹ್ಮಾಂಡದ ಜಂಜಡಗಳ ಸರಿಸುತ್ತ

ಸುಜ್ಞಾನದ ಸತ್ಪಥದಲ್ಲಿ ಸಾಗಿಸುತ

ಅನಿಷ್ಟ ಜಾಗಕ್ಕೂ ನಿನ್ನ ಕಿರಣ ಸೂಸುವ

ಭಾಸ್ಕರ ನೀ ನನಗೆ ಪ್ರೇರಣೆ..!!

 

ಮೃಷೆ ಸತ್ಯವ ನುಡಿದವರಿಗೂ

ಯವ್ವೌನ ವಾರ್ಧಕ್ಯವ ತಂದಿರಿಸಿ

ಸುಖ ದುಃಖಗಳ ಸಮನಾಗಿ ನೀಡಿರುವ

ಭಾಸ್ಕರ ನೀ ನನಗೆ ಪ್ರೇರಣೆ..!!

 

ಮನದ ಮುಕುರದ ಧೂಳೋರಸಿ

ಹೃದಯದ ಯಾಮಿನಿ ದೂರವಿರಿಸಿ

ಚಿನ್ಮೂರ್ತಿಯಾಗಿ ತಮವ ಓಡಿಸಿದ

ಭಾಸ್ಕರ ನೀ ನನಗೆ ಪ್ರೇರಣೆ...!!

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್