ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ಬಿಡ್ತಾರೆ!!!!
ಇದೇನಿದೂ ಅಂದ್ರಾ ನಾನಿವತ್ತು ಮಕ್ಕಳ ಸಾಮ್ರಾಜ್ಯದಲ್ಲಿ ಮಕ್ಕಳು ದೊಡ್ಡವರಿಗೆ ನೀತಿ ಪಾಠಮಾಡುವ ಕೆಲವು ಘಟನೆಗಳನ್ನುಮುಂದಿಡುತ್ತಿದ್ದೇನೆ. ಬನ್ನಿ ಪಾಠ ಕಲಿಯೋಣ.
ಪಾಠ ..1 ] ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದೆ ಮೈಸೂರಿಗೆ ಮೈಸೂರು ಮಲ್ಲಿಗೆ ಬಸ್ ಹೊರಡಲು ಸಿದ್ಧವಾಗಿತ್ತು. ಕೌಂಟರ್ ನಲ್ಲಿ ಟಿಕೆಟ್ ಪಡೆದ ಪ್ರಯಾಣಿಕರು ಬಸ್ ಏರಿ ಕುಳಿತುಕೊಳ್ಳುತ್ತಿದ್ದರು.ಈ ಮಧ್ಯೆ ಇಬ್ಬರು ಹೆಂಗಸರು ಹಾಗು ಸುಮಾರು ಆರು ವರ್ಷದ ಹುಡುಗ ನನ್ನ ಸಾಲಿನ ಪಕ್ಕದ ಮೂರುಜನ ಕೂರುವ ಸೀಟ್ ನಲ್ಲಿ ಕುಳಿತರು. ಬಸ್ ಹೊರಡುವ ಮೊದಲು ಟಿ.ಸಿ. ಬಸ್ನಲ್ಲಿದ್ದ ಪ್ರಯಾಣಿಕರ ಲೆಕ್ಕ ಹಾಕುತ್ತಿದ್ದರು. ಲೆಕ್ಕ ತಾಳೆಯಾಗದೆ "ಯಾರೋ ಒಂದು ಟಿಕೆಟ್ ತಗೊಂಡಿಲ್ಲ ದಯಮಾಡಿ ತಗೋಳಿ ಮುಂದೆ ಚೆಕಿಂಗ್ ಇದೆ" ಅಂದ್ರೂ. ಅಲ್ಲಿದ್ದ ಪ್ರಯಾಣಿಕರೂ ಇದು ನಮಗಲ್ಲಾ ಅಂತಾ ಅನ್ಕೊಂಡು ಸುಮ್ನೇ ಇದ್ರೂ. ಸರಿ ಶುರುವಾಯಿತು. ಪ್ರತಿಯೊಬ್ಬರ ಟಿಕೆಟ್ ತಪಾಸಣೆ. ಒಬ್ಬರಾಗಿ ಚೆಕ್ ಮಾಡಿದ ಟಿ.ಸಿ.ಸಾಹೇಬರೂ ನನ್ನ ಪಕ್ಕದ ಸೀಟಿನ ಮಹಿಳೆಯರನ್ನೂ ಚೆಕ್ ಮಾಡಿದ್ರೂ, ಟಿಕೆಟ್ ತಾಳೆಯಾಗದೆ. " ನೋಡಿಯಮ್ಮ ಈ ಹುಡುಗನಿಗೆ ಫುಲ್ ಟಿಕೆಟ್ ತಗೊಬೇಕೂ ನಿಮ್ಮತ್ರ ಅರ್ಧ ಟಿಕೆಟ್ ಇದೆ ಹೋಗಿ ಕೌಂಟರ್ನಲ್ಲಿ ಫುಲ್ ಟಿಕೆಟ್ ಮಾಡಿಸಿ" ಅಂದ್ರೂ .ಅಲ್ಲಿವರೆಗೋ ಸುಮ್ಮನಿದ್ದ ಆ ಹುಡುಗ ತನ್ನ ತಾಯಿಯನ್ನು ಕುರಿತು '' ಆಹಹ ಮನೇಲೆ ಹೇಳ್ದೆ ನಾನು ಚಡ್ಡಿ ಹಾಕೊತೀನಿ ಅಂತಾ!!! ....... ನೀನ್ ಕೆಳಿದ್ಯಾ ನನ್ನ ಮಾತು, ಪ್ಯಾಂಟ್ ಹಾಕೋ ಅಂತಾ ಬೈದೆ , ಈಗ ,ಈಗ ಕೊಡು ಫುಲ್ ಟಿಕೇಟು ", ಅನ್ಬಿಟ್ಟ . ಸ್ವಾಮೀ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಗೊಳ್ ಅಂತಾ ನಕ್ಕಿದ್ದೆ ನಕ್ಕಿದ್ದು ಪಾಪ ಆ ಟಿ.ಸಿ.ಸಾಹೇಬರಿಗೆ ತಮ್ಮ ಮಕ್ಕಳ ನೆನಪಾಗಿರ್ಬೇಕೂ. "ಆಹಹ ಒಳ್ಳೆ ಬುದ್ಧಿವಂತಾ ಕಣಯ್ಯ ನೀನು ಅಂದು , ಪರವಾಗಿಲ್ಲ ಹೋಗ್ಲಿ ಬಿಡೀಮ್ಮಾ " ಅಂದು ಬಸ್ ನಿಂದ ಇಳಿದು ರೈ ರೈಟ್ ಅಂದ್ರೂ . ಪಾಠ ..2 ] ಅದೊಂದು ಕ್ಲಾಸ್ ರೂಮು , ಮೇಷ್ಟ್ರು ಮಕ್ಕಳಿಗೆ ಪಾಠ ಮಾಡ್ತಾ ಇದಾರೆ , ಮಹಾತ್ಮಾ ಗಾಂದಿಜಿ ಬಗ್ಗೆ ಅವರ ಜೀವನ ಚರಿತ್ರೆ ಬಗ್ಗೆ, ಮಕ್ಕಳೂ ಸಹ ತನ್ಮಯತೆ ಇಂದ ಪಾಠ ಕೇಳಿಸ್ಕೊತಾ ಇದ್ವೂ . " ನೋಡ್ರಯ್ಯ ಮಹಾತ್ಮ ಗಾಂಧಿಜಿಯವರು ಭಾರತ ದೇಶದ ಸ್ವಾತಂತ್ರ್ಯಕಾಗಿ ಹೋರಾಡಿ ಕೀರ್ತಿ ಪತಾಕೆ ಹಾರಿಸಿದರೂ ಸತ್ಯವನ್ನು ಆಡುತ್ತಾ ಜೀವನದಲ್ಲಿ ಸತ್ಯವಾಗಿ ಬಾಳಿದರೂ ನೀವು ಕೂಡ ಅವರ ಹಾಗೆ ಸತ್ಯವಾಗಿ ಬಾಳುವುದನ್ನು ಕಲಿಯಿರಿ ದೇಶಕ್ಕೆ ಕೀರ್ತಿ ತನ್ನಿ"ಅಂತಾ ಹೇಳ್ತಿದ್ರೂ , ಮಧ್ಯದಲ್ಲಿ ಏನೋ ಅನ್ನಿಸಿ ನೋಡ್ತಾರೆ ಐದನೇ ಬೆಂಚಿನಲ್ಲಿ ಕುಳಿತಿದ್ದ ಪರಮೇಶಿ ,ಕಲ್ಲೇಶಿ ಮಾತಾಡ್ತಾ ಕುಳಿತಿದ್ರೂ, ಇದನ್ನು ನೋಡಿದ ಮೇಷ್ಟ್ರಿಗೆ ಉರ್ದೊಯ್ತು , ಲೇ ಕಲ್ಲೇಶಿ ಮಲ್ಲೇಶಿ ಬನ್ರೋ ಇಲ್ಲಿ ಅಯ್ಯೋ ಪಾಪಿಗಳ ನಾನು ಇಲ್ಲಿ , ಕಷ್ಟಾಪಟ್ಟು ಆ ಪುಣ್ಯಾತ್ಮಾ ಮಹಾತ್ಮಾ ಗಾಂಧಿಯವರ ಬಗ್ಗೆ ಪಾಠ ಮಾಡ್ತಿದೀನಿ ನೀವು ಇಲ್ಲಿ ತರ್ಲೆ ಮಾಡ್ತಾ ಕೂತಿದೀರ " ಅಂದ್ರೂ ಈಗಿನ ಮಕ್ಕಳಲ್ಲವೇ ಭಯವೇ ಇಲ್ದೆ ಮುಂದೆ ಬಂದ ಹುಡುಗರೂ ಮೇಷ್ಟ್ರ ಮುಂದೆ ನಿಂತ್ರೂ. ಲೇ ಹೇಳ್ರೋ ನಾನು ಏನ್ ಹೇಳ್ತಿದ್ದೆ , ಅಂತಾ ಅಂದ್ರೂ ಆಗ ಕಲ್ಲೇಶಿ ಮಲ್ಲೇಶಿ ಸುಮ್ಮನೆ ನಿಂತಿದ್ರು , ಲೇ ಅಲ್ಲಿ ಕೂತ್ಕೊಂಡು ತರ್ಲೆ ಮಾಡ್ತೀರ ಇಲ್ಲಿ ತೋರ್ಸಿ ಬನ್ನಿ ಇಲ್ಲಿ ಪಾಠ ಮಾಡಿ ಗೊತ್ತಾಗುತ್ತೆ ಅಂದ್ರೂ , ಮಕ್ಕಳು ಆಗ್ಲೂ ಸುಮ್ನೆ ನಿಂತಿದ್ರು , ಮೇಷ್ಟರಿಗೆ ಇನ್ನೂ ಕೋಪ ಬಂದು "ಪಾಠ ಮಾಡ್ತೀರೋ ಇಲ್ಲ ಎರಡು ಕೊಡಲೋ" ಅಂದ್ರೂ ಭಯದಿಂದ ನಿಂತಿದ್ದ ಕಲ್ಲೇಶಿ ಧೈರ್ಯವಾಗಿ ಮುಂದೆ ಬಂದು ಪಾಠ ಮಾಡಲು ಶುರುಮಾಡಿ ಗಾಂಧಿಜಿ ಬಗ್ಗೆ ಮೇಷ್ಟು ಹೇಳಿದ್ದ ವಿಚಾರವನ್ನು ಚಾಚು ತಪ್ಪದೆ ವಿವರಿಸಿದ. ಅಚ್ಚರಿ ಗೊಂಡ ಮೇಷ್ಟ್ರು " ಲೇ ಕಲ್ಲೇಶಿ ಮಲ್ಲೇಶಿ, ನೀವಿಬ್ರೂ ಬುದ್ಧಿವಂತರು ಕಣ್ರೋ!! ಯಾಕ್ರೋ ಮಾತಾಡ್ತಾ ಇದ್ರೀ," ಅಂದ್ರೂ. ಆ ಮಕ್ಕಳು "ಇಲ್ಲ ಸರ್ ಗಾಂಧೀ ಜಿಯವರಿಗೆ ತಮ್ಮನ್ನು ಹೋಲ್ಕೆ ಮಾಡ್ತಾ ಇದ್ವಿ" !!! ಅಂದವು ಮಕ್ಕಳು, .ಕುತೂಹಲ ,ಗೊಂಡ ಮೇಷ್ಟ್ರೂ "ಅದೇನು ಹೋಲ್ಕೆ ಮಾಡ್ತಾ ಇದ್ರೀ ಸರ್ಯಾಗಿ ಹೇಳ್ರಪ್ಪಾ!!!" ಅಂದ್ರೂ, ಆಗ ಕಲ್ಲೇಶಿ "ಸರ್ ತಾವು ಆವತ್ತು ಕ್ಲಾಸ್ ನಲ್ಲಿ ಮಹಾತ್ಮಾ ಗಾಂಧೀ ಜಿ ಚಿಕ್ಕವಯಸ್ಸಿನಲ್ಲಿ ಬೀಡಿ ಸೇದಿ ತನ್ನ ತಪ್ಪನ್ನು ತಂದೆಯವರ ಹತ್ತಿರ ಒಪ್ಪಿಕೊಂಡು ಅದನ್ನ ಸೇದೋದು ಬಿಟ್ರೂ , ಅಂತಾ ಪಾಠ ಮಾಡಿದ್ರಿ , ಆದ್ರೆ ಮಾರನೆದಿನ ಅಂಗಡಿ ಬೀದೀಲಿ ನೀವೇ ಸಿಗರೇಟ್ ಸೇದ್ತಾ ಇದ್ರೀ" ಅದಕ್ಕೆ ಪಾಠ ದಲ್ಲಿ ಬರೋದನ್ನೆಲ್ಲಾ ಪಾಲಿಸಬೇಕೂ ಅಂತಾ ನಿಯಮ ಇಲ್ಲಾ, ಹಾಗಾಗಿ ಅದೇ ವೆತ್ಯಾಸ ನಿಮಗೂ ಗಾಂಧಿಜಿ ಗೂ ಅಂತಾ ಮಾತಾಡ್ತಾ ಇದ್ವಿಸಾರ್ !!! ಅಂದ್ರೂ ಪೆಚ್ಚಾದ ಮೇಷ್ಟ್ರು ಅಲ್ಲಿಂದ ಜಾಗ ಖಾಲಿ !!!! ಅವತಿಂದ ಸಾರ್ವಜನಿಕವಾಗಿ ಸಿಗರೇಟ್ ಸೇದೊದನ್ನು ಬಿಟ್ರೂ .ಆ ಮೇಷ್ಟ್ರು.
ಪಾಠ ..3 ]..ಅದೊಂದು ಹುಡುಗಿಯರ ಹೈಸ್ಕೂಲು ಝಾನ್ಸಿ ಮೇಡಂ ರಾಸಾಯನಿಕಗಳ ಬಗ್ಗೆ ಪಾಠ ಮಾಡ್ತಾ ಇದ್ರೂ "ನೋಡಿ ಮಕ್ಳೆ ರಾಸಾಯನಿಕಗಳು ಇಂದು ಎಲ್ಲಾ ರೀತಿಯಲ್ಲೂ ನಮ್ಮ ಜೀವನದೊಳಗೆ ಬೆರೆತು ಹೋಗಿವೆ, ನಾವು ಎಚ್ಚರ ವಹಿಸದೆ ಹೋದ್ರೆ ನಮ್ಮ ಬಾಳು ಸರ್ವನಾಶವಾಗುತ್ತದೆ. ಇಂದು ನೋಡಿ ತಿನ್ನುವ ಆಹಾರ ಬೆಳೆಯಲು ಸಾವಯವ ಗೊಬ್ಬರ ಬದಲಾಗಿ ರಾಸಾಯನಿಕ ಗೊಬ್ಬರ , ನಿಮ್ಮ ಬಟ್ಟೆ ತಯಾರಿಸಲು ರಾಸಾಯನಿಕ, ನೀವು ಉಪಯೋಗಿಸುವ ಟೂತ್ ಪೇಸ್ಟ್ ,ಸೋಪು, ಬಟ್ಟೆ ಸೋಪು, ಪೌಡರ್ ಎಲ್ಲದರಲ್ಲಿಯೂ ರಾಸಾಯನಿಕ ಬಳಸುತ್ತಾರೆ. ನೀವು ಇವುಗಳ ಸಂಕೋಲೆಯಿಂದ ಹೊರಬಂದು ರಾಸಾಯನಿಕ ವಿಷವರ್ತುಲ ಇಲ್ಲದೆ ಜೀವಿಸಬೇಕೂ ,ನಾವಿಂದು ಭೂಮಿಯನ್ನು ರಾಸಾಯನಿಕ ವಿಷವರ್ತುಲದಿಂದ ಮುಕ್ತ ಗೊಳಿಸಬೇಕಿದೆ ,ಬನ್ನಿ ಇಂದೇಈ ಬಗ್ಗೆ ನೀವುಗಳು ಯೋಚಿಸಿ ಕೆಮಿಕಲ್ ಇಲ್ಲದ ಜೀವನ ನಡೆಸಿ , ನಾನಂತೂ ಈ ಬಗ್ಗೆ ಈಗಾಗಲೇ ರಾಸಾಯನಿಕ ವಿಲ್ಲದ ಪದಾರ್ಥ ಉಪಯೋಗಿಸಿ ಆರೋಗ್ಯ ವಾಗಿದ್ದೇನೆ" ಅಂದ್ರೂ ಕ್ಲಾಸಿನ ತರ್ಲೆ ಹುಡುಗಿ ಸಂಜನಾ " ಇಷ್ಟೆಲ್ಲಾ ನಂಗೆ ಗೊತ್ತೇ ಇರ್ಲಿಲ್ಲ ಮಿಸ್ ರಾಸಾಯನಿಕಗಳ ಬಗ್ಗೆ ತುಂಬಾ ಮಾಹಿತಿ ಕೊಟ್ರೀ ,ಆದ್ರೆ ಆದ್ರೆ ಅಂತಾ ನಿಲ್ಲಿಸಿದಳು. "ಪರವಾಗಿಲ್ಲಾ ಹೇಳು ಸಂಜನಾ " ಅಂದ್ರೂ ಮೇಡಂ . ಅಲ್ಲಾ ಮಿಸ್ ಎಲ್ಲಾದರಲ್ಲೂ ರಾಸಾಯನಿಕ ಇದ್ಮೇಲೆ ತಾವು ಹಾಕಿರುವ ಸೀರೆ ಯಲ್ಲಿನ ಬಣ್ಣ , ಸ್ಲಿಪ್ಪರ ಬಣ್ಣ ,ವ್ಯಾನಿಟಿ ಬ್ಯಾಗ್ ಬಣ್ಣ,ವಾಚು, ಮೊಬೈಲ್ , ನೈಲ್ ಪಾಲಿಶ್ , ಹೇರ ಶಾಂಪೂ , ಹೇರ ಕ್ರೀಂ ಜೊತೆಗೆ ನೀವು ಮುಖಕ್ಕೆ ಬಳಸಿರೋ ಲೋಶನ್ , ಐ ಲೈನರ್ , ಲಿಪ್ಸ್ಟಿಕ್ ಇದರಲ್ಲೂ ರಸಾಯನಿಕಾ ಇರ್ಬೇಕಲ್ವಾ ಮಿಸ್" ಅಂದ್ಲೂ!!!!! ಇದನ್ನು ಯೋಚಿಸಿರದ ಮಿಸ್ ಮುಖದ ಮೇಲಿದ್ದ ಕೆಮಿಕಲ್ ಬೆವರಾಗಿ ಕರಗಿ ಹೋಗಿತ್ತು.
ಈಗ ಹೇಳಿ ಇಂದಿನ ಮಕ್ಕಳು ಸೂರ್ಯನಿಗೆ ಟಾರ್ಚ್ ಬಿಡೋ ಅಷ್ಟು ಬುದ್ಧಿವಂತರಲ್ಲವೇ . ಹಿರಿಯರು ಮಕ್ಕಳ ಮುಂದೆ ತಾವು ಏನು ಹೇಳಿದ್ರೂ ನಡೆಯುತ್ತೆ ಅನ್ನೋದನ್ನು ಬಿಟ್ಟು ಯೋಚಿಸಿ ವ್ಯವಹರಿಸುವುದು ಸೂಕ್ತ. ಇಲ್ಲದಿದ್ದಲ್ಲಿ ನಮ್ಮ ಪಾಡು ಇಷ್ಟೇ ಆಲ್ವಾ>>>...!!!! ಏನಂತೀರ.
Comments
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
In reply to ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ... by asuhegde
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
In reply to ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ... by ಶ್ರೀನಿಧಿ
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
In reply to ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ... by ಸುಮ ನಾಡಿಗ್
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
In reply to ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ... by asuhegde
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
In reply to ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ... by gopaljsr
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...
In reply to ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ... by raghusp
ಉ: ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ...