ಮಖಾನ (ತಾವರೆ ಬೀಜ) ಮಸಾಲಾ

ಮಖಾನ (ತಾವರೆ ಬೀಜ) ಮಸಾಲಾ

ಬೇಕಿರುವ ಸಾಮಗ್ರಿ

ತಾವರೆ ಬೀಜ ಅಥವಾ ಮಖಾನ ಬೀಜಗಳು ೧ ಕಪ್, ದೊಡ್ಡ ನೀರುಳ್ಳಿ ೧, ದೊಡ್ಡ ಟೋಮೆಟೋ ೧, ಗೇರುಬೀಜಗಳು ೧೦, ಬೆಳ್ಳುಳ್ಳಿ ಎಸಳು ೪,  ಶುಂಠಿ ತುಂಡು ಸಣ್ಣದು, ಕೊತ್ತಂಬರಿ ಸೊಪ್ಪು ಸ್ವಲ್ಪ, ಜೀರಿಗೆ ೧ ಚಮಚ, ಅರಶಿನ ಹುಡಿ ೧/೨ ಚಮಚ, ಮೆಣಸಿನ ಹುಡಿ ೧ ಚಮಚ, ಕೊತ್ತಂಬರಿ ಹುಡಿ ೧ ಚಮಚ, ಗರಂ ಮಸಾಲ ಹುಡಿ ೧/೨ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ ಸ್ವಲ್ಪ, ತುಪ್ಪ ೨-೩ ಚಮಚ.

ತಯಾರಿಸುವ ವಿಧಾನ

ಮಿಕ್ಸಿ ಜಾರ್ ಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಗೇರುಬೀಜ, ಸ್ವಲ್ಪ ನೀರು ಸೇರಿಸಿ ನಯವಾಗಿ ಮಸಾಲೆ ರುಬ್ಬಿರಿ. ತಾವರೆ ಬೀಜಗಳನ್ನು ಸ್ವಲ್ಪ ಹುರಿದು ತೆಗೆದಿರಿಸಿ.

ಬಾಣಲಿಗೆ ೨ ಚಮಚ ತುಪ್ಪ ಹಾಕಿ ಬಿಸಿ ಆದಮೇಲೆ ಜೀರಿಗೆ ಹಾಕಿ ಸಿಡಿದ ಮೇಲೆ ಮೊದಲು ತಯಾರಿಸಿದ ಮಸಾಲೆ ಸೇರಿಸಿ ಹುರಿಯಬೇಕು. ಅರಶಿನ ಹುಡಿ, ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಗರಂ ಮಸಾಲೆ ಹುಡಿ, ಉಪ್ಪು ಕ್ರಮವಾಗಿ ಹಾಕಿ ಹುರಿಯುತ್ತಾ ಇರಬೇಕು. ತುಪ್ಪ ಬಾಣಲಿ ಬಿಟ್ಟುಕೊಡುವ ತನಕ ಹುರಿದು, ೨ ಕಪ್ ನೀರು, ಚಿಟಿಕೆ ಸಕ್ಕರೆ ಸೇರಿಸಿ ಕುದಿಸಬೇಕು. ಕುದಿ ಬಂದ ಮೇಲೆ ಹುರಿದಿಟ್ಟ ತಾವರೆ ಬೀಜ ಸೇರಿಸಿ ಸ್ವಲ್ಪ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿರಿ. ಚಪಾತಿ, ಪೂರಿ ಜೊತೆ ತಿನ್ನಲು ಬಹಳ ರುಚಿಕರ.

ಹೇಳಿದ್ದು ನನ್ನ ಚಿಕ್ಕ ಅತ್ತೆ ಶ್ರೀಮತಿ ಮಮತಾ ಶೆಣೈ, ಕಾವೂರು, ಮಂಗಳೂರು